ಪೊಲೀಸ್ ಠಾಣೆ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ
ಮೂಡಿಗೆರೆ ಠಾಣೆಯಲ್ಲಿ ಆತಂಕ ಸೃಷ್ಟಿಸಿದ ಘಟನೆ
ಸಮಯ ಪ್ರಜ್ಞೆಯಿಂದ ಮಹಿಳೆ ರಕ್ಷಿಸಿದ ಪೊಲೀಸ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.14): ಮಹಿಳೆಯೊಬ್ಬರು ಪೊಲೀಸ್ ಠಾಣೆ ಕಟ್ಟಡದ ಮೇಲೇರಿ ಮೇಲಿಂದ ಜಿಗಿಯಲು ಯತ್ನಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಠಾಣೆಯಲ್ಲಿ ನಡೆದಿದೆ. ಪೊಲೀಸ್ ಸಿಬ್ಬಂದಿಯೊಬ್ಬರು ಸಕಾಲಿಕ ಸಮಯ ಪ್ರಜ್ಞೆಯಿಂದ ಮಹಿಳೆಯನ್ನು ರಕ್ಷಿಸಿ ಅವಘಡವನ್ನು ತಡೆದಿದ್ದಾರೆ.
undefined
ಹಳೇ ಮೂಡಿಗೆರೆ ಸಮೀಪದ ಸರ್ವೋದಯ ನಗರದ ಶಿಲ್ಪ ಎನ್ನುವ ಮಹಿಳೆ ಪೊಲೀಸ್ ಠಾಣೆಯ ಕಟ್ಟಡವನ್ನು ಏರಿ ಅಲ್ಲಿಂದ ನೆಗೆದು ಆತ್ಮಹತ್ಯೆಗೆ ಯತ್ನಿಸಿದವರು. ಇವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಶಿಲ್ಪ ಹಾಗೂ ಅವರ ಸಹೋದರಿಯ ನಡುವಿನ ವಾಜ್ಯವೊಂದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೇ ಅವಧಿಯಲ್ಲಿ ಶಿಲ್ಪ ಅವರು ಮೂಡಿಗೆರೆ ಠಾಣೆಯ ಮಹಿಳಾ ಸಿಬ್ಬಂದಿ ಸುಜಾತ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಆಕೆಯ ಮೇಲೆ ಕೇಸು ದಾಖಲಾಗಿ ಜೈಲಿಗೂ ಹೋಗಿ ಬಂದಿದ್ದರು.
ಕೊಡಗಿನಲ್ಲಿ ಕಾರು- ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಹಸುಗೂಸು ಸೇರಿ ಮಂಡ್ಯ ಮೂಲದ ಆರು ಮಂದಿ ಸಾವು
ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ನಿನ್ನೆ ಮೂಡಿಗೆರೆ ನ್ಯಾಯಾಲಯದಲ್ಲಿಯೂ ನ್ಯಾಯಾದೀಶರ ಎದುರು ನನ್ನ ಪ್ರಕರಣವನ್ನು ಒಂದೇ ದಿನದಲ್ಲಿ ಮುಗಿಸಿಕೊಡಿ, ಪೊಲೀಸರನ್ನು ನ್ಯಾಯಾಲಯಕ್ಕೆ ಕರೆಸಿ ಪ್ರಕರಣವನ್ನು ಮುಗಿಸಿ ಎಂದೆಲ್ಲಾ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡಿದ್ದು, ನ್ಯಾಯಾದೀಶರು ಬುದ್ದಿಹೇಳಿ ಕಳುಹಿಸಿದ್ದರು. ಅಲ್ಲಿಂದ ನೇರವಾಗಿ ಮೂಡಿಗೆರೆ ಠಾಣೆಗೆ ಬಂದು ಅಲ್ಲಿ ಸಿಬ್ಬಂದಿಗಳ ಜೊತೆ ಜಗಳವಾಡಿದ್ದು, ನೀವೆಲ್ಲಾ ಈಗಲೇ ನ್ಯಾಯಾಲಯಕ್ಕೆ ಬರಬೇಕು, ನನ್ನ ಕೇಸು ಇತ್ಯರ್ಥ ಮಾಡಿಕೊಡಬೇಕು ಎಂದೆಲ್ಲಾ ಕೂಗಾಡಿದ್ದಾರೆ.
ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ನಂತರ ಠಾಣೆಯ ಹಿಂಬದಿಯಿಂದ ಏಣಿಯ ಮೂಲಕ ಕಟ್ಟಡದ ಮೇಲ್ಭಾಗಕ್ಕೆ ತೆರಳಿ ನಾನು ಇಲ್ಲಿಂದ ನೆಗೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಕಟ್ಟಡದ ತುದಿಗೆ ಬಂದು ಬೆದರಿಕೆ ಹಾಕಿದ್ದಾರೆ. ಈ ಸಂದರ್ಭದಲ್ಲಿ ಠಾಣೆಯ ಸಿಬ್ಬಂದಿಯೊಬ್ಬರು ಹಿಂದಿನಿಂದ ಬಂದು ಅವರನ್ನು ರಕ್ಷಣೆ ಮಾಡಿದ್ದಾರೆ.ಇದರಿಂದಾಗಿ ಕೆಲಹೊತ್ತು ಮೂಡಿಗೆರೆ ಠಾಣೆಯ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.ಸದರಿ ಶಿಲ್ಪ ಒಂದಲ್ಲ ಒಂದು ಸಮಸ್ಯೆ ಹೊತ್ತು ಸದಾ ಠಾಣೆಗೆ ಬರುವುದು, ಸಿಬ್ಬಂದಿಗಳೊಂದಿಗೆ ಕಿರಿಕಿರಿ ಮಾಡುವುದು ಸರ್ವೇ ಸಾಮಾನ್ಯವಾಗಿದೆ ಎನ್ನಲಾಗಿದೆ.
ವೈ.ಎಸ್.ವಿ. ದತ್ತ ಜೆಡಿಎಸ್ ಕಾರ್ಯಕರ್ತರ ಕ್ಷಮೆಯಾಚಿಸಬೇಕು: ಕಡೂರು ಜನತೆ, ಜೆಡಿಎಸ್ ಕಾರ್ಯಕರ್ತರ ಕ್ಷಮೆ ಕೇಳಬೇಕು. ತಮ್ಮ ಹೇಳಿಕೆಯನ್ನ ಹಿಂಪಡೆದು ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳಬೇಕು. ಕ್ಷಮೆ ಕೇಳದೆ ನಿಮ್ಮ ಹೆಸರು ಘೋಷಿಸಿದ್ರೆ ಡಿಪಾಜಿಟ್ ಇಲ್ಲದೆ ಸೋಲಿಸುತ್ತಾರೆ ಎಂದು ಕಡೂರಿನಲ್ಲಿ ಜೆಡಿಎಸ್ ಅಘೋಷಿತ ಅಭ್ಯರ್ಥಿ ಧನಂಜಯ್ ಹೇಳಿದ್ದಾರೆ. ಕಡೂರಿಗೆ ನಾನೇ ಜೆಡಿಎಸ್ ಅಭ್ಯರ್ಥಿ, ನಾನು ಘೋಷಿತ ಅಭ್ಯರ್ಥಿ. ದತ್ತ ಅವರು ಅನಗತ್ಯವಾಗಿ ದೇವೇಗೌಡರ ಬಾಂಧವ್ಯವನ್ನ ದುರುಪಯೋಗ ಮಾಡಿಕೊಂಡಿದ್ದಾರೆ.
ತುಮಕೂರಿನಲ್ಲಿ ಭೀಕರ ಅಪಘಾತ, ಬಸ್ ಡಿಕ್ಕಿಯಾಗಿ ನಜ್ಜುಗುಜ್ಜಾದ ಕಾರು: ಮಗು ಸೇರಿ 5 ಮಂದಿ ದುರಂತ ಅಂತ್ಯ
ದೇವೇಗೌಡರ ಮೇಲೆ ಒತ್ತಡ ಹೇರಿಕೆ: 92 ವರ್ಷದ ದೇವೇಗೌಡರ ಮನೆಗೆ ಹೋಗಿ ದೇವೇಗೌಡರು, ರೇವಣ್ಣ, ಪ್ರಜ್ವಲ್ ಮೇಲೆ ಒತ್ತಡ ಹೇರಿದ್ದಾರೆ. ಅವರನ್ನ ಮನೆಗೆ ಕರೆಸಿ ಒತ್ತಡ ಹೇರಿ ಹೆಸರು ಘೋಷಿಸಿಕೊಂಡಿದ್ದಾರೆ. ದತ್ತ ಕಾಂಗ್ರೆಸ್ ಸೇರಿದಾಗ ಜೆಡಿಎಸ್, ಕುಮಾರಣ್ಣ ಮೇಲೆ ಆರೋಪ ಮಾಡಿದ್ದಾರೆ. ಜೆಡಿಎಸ್ ಬಿ ಟೀಂ ಆಫ್ ಬಿಜೆಪಿ ಎಂದಿದ್ದಾರೆ. ಕಾಂಗ್ರೆಸ್ ಒತ್ತಡದಿಂದ ಹಾಗೇ ಹೇಳಿದೆ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಕ್ಷಮೆ ಕೇಳಿ ಎಂದು ಆಗ್ರಹಿಸಿದರು. ದತ್ತ ಅಫಿಸಿಯಲ್ ಕ್ಯಾಂಡಿಡೇಟ್ ಅಲ್ಲ, ನಾನೇ ಅಧಿಕೃತ ಅಭ್ಯರ್ಥಿ ಎಂದು ಹೇಳಿದರು.