ನಮ್ಮ ಮೆಟ್ರೋ 3ನೇ ಹಂತಕ್ಕೆ ಡಬಲ್‌ ಡೆಕ್ಕರ್‌: ವರದಿಗಾಗಿ ಟೆಂಡರ್‌

Published : Mar 15, 2024, 07:23 AM IST
ನಮ್ಮ ಮೆಟ್ರೋ 3ನೇ ಹಂತಕ್ಕೆ ಡಬಲ್‌ ಡೆಕ್ಕರ್‌: ವರದಿಗಾಗಿ ಟೆಂಡರ್‌

ಸಾರಾಂಶ

ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಅನುಸರಿಸಲಾದ ಡಬಲ್‌ ಡೆಕ್ಕರ್‌ (ಫ್ಲೈಓವರ್ ಕಂ ಮೆಟ್ರೋ) ಮಾದರಿಯನ್ನು ನಗರದ ಇತರ ಕಡೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರದ ಆಶಯದಂತೆ ಇದೀಗ ಬೆಂಗಳೂರು ಮೆಟ್ರೋ ನಿಗಮ ಮುಂದಿನ ಮೂರನೇ ಹಂತದ ಮೂರು ಕಾರಿಡಾರ್‌ನಲ್ಲಿ ಡಬ್ಬಲ್‌ ಡೆಕ್ಕರ್‌ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ವರದಿ ರೂಪಿಸಿಕೊಳ್ಳಲು ಮುಂದಾಗಿದೆ.  

ಬೆಂಗಳೂರು (ಮಾ.15): ಎಲೆಕ್ಟ್ರಾನಿಕ್ ಸಿಟಿ ಮಾರ್ಗದಲ್ಲಿ ಅನುಸರಿಸಲಾದ ಡಬಲ್‌ ಡೆಕ್ಕರ್‌ (ಫ್ಲೈಓವರ್ ಕಂ ಮೆಟ್ರೋ) ಮಾದರಿಯನ್ನು ನಗರದ ಇತರ ಕಡೆಗಳಲ್ಲೂ ಅನುಷ್ಠಾನಕ್ಕೆ ಚಿಂತನೆ ನಡೆಸಿದ್ದ ರಾಜ್ಯ ಸರ್ಕಾರದ ಆಶಯದಂತೆ ಇದೀಗ ಬೆಂಗಳೂರು ಮೆಟ್ರೋ ನಿಗಮ ಮುಂದಿನ ಮೂರನೇ ಹಂತದ ಮೂರು ಕಾರಿಡಾರ್‌ನಲ್ಲಿ ಡಬ್ಬಲ್‌ ಡೆಕ್ಕರ್‌ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ವರದಿ ರೂಪಿಸಿಕೊಳ್ಳಲು ಮುಂದಾಗಿದೆ.

ಮೆಟ್ರೋದ 3ನೇ ಹಂತದ ಯೋಜನೆಯ ಮೊದಲ ಕಾರಿಡಾರ್‌ ಜೆ.ಪಿ.ನಗರ ನಾಲ್ಕನೇ ಹಂತದಿಂದ ಹೆಬ್ಬಾಳ (29.20 ಕಿಮೀ), ಎರಡನೇ ಕಾರಿಡಾರ್‌ ಹೊಸಹಳ್ಳಿ-ಕಡಬಗೆರೆ (11.45 ಕಿ.ಮೀ.) ಮತ್ತು ಸರ್ಜಾಪುರ-ಇಬ್ಬಲೂರು (ಹೊರವರ್ತುಲ ರಸ್ತೆ 14 ಕಿ.ಮೀ.) ಮತ್ತು ‘3 ಎ’ ಹಂತದಲ್ಲಿನ ಮೂರನೇ ಕಾರಿಡಾರ್‌ ಆಗರ-ಕೋರಮಂಗಲ 3ನೇ ಬ್ಲಾಕ್‌ವರೆಗೆ (2.4 ಕಿ.ಮೀ.) ನಡುವೆ ಡಬಲ್‌ ಡೆಕ್ಕರ್‌ ನಿರ್ಮಾಣಕ್ಕೆ ಯೋಚಿಸಿದೆ.

Loksabha Elections 2024: ಬಿಜೆಪಿಯಲ್ಲಿ ಬೇಗುದಿ ತಣ್ಣಗೆ, ಸಂಸದ ಸಂಗಣ್ಣ ಕರಡಿ ನಿರಾಳ!

ಫ್ಲೈಓವರ್ ಕಂ ಮೆಟ್ರೋ ಅಂದರೆ ಮೇಲಿನ ಹಂತದಲ್ಲಿ ಮೆಟ್ರೋ, ಕೆಳಗಿನ ಹಂತದಲ್ಲಿ ರಸ್ತೆ ನಿರ್ಮಾಣಕ್ಕಾಗಿ ಕಾರ್ಯಸಾಧ್ಯತೆ ಅಧ್ಯಯನಕ್ಕಾಗಿ  ಟೆಂಡರ್‌ ಕರೆಯಲಾಗಿದೆ. ಏ.17 ಟೆಂಡರ್‌ನ ಕೊನೆಯ ದಿನವಾಗಿದೆ. ನಮ್ಮ ಮೆಟ್ರೋ ಪ್ರತ್ಯೇಕವಾಗಿ 3ಎ ಹಂತದಲ್ಲಿ ಸರ್ಜಾಪುರದಿಂದ ಆಗರ, ಕೋರಮಂಗಲ ಡೇರಿ ಸರ್ಕಲ್‌ ಮತ್ತು ಮೇಖ್ರಿ ಸರ್ಕಲ್‌ ಮೂಲಕ ಹೆಬ್ಬಾಳ ಸಂಪರ್ಕಿಸುವ ಮೆಟ್ರೋ ಮಾರ್ಗ ರೂಪಿಸಿಕೊಳ್ಳಲು ಡಿಪಿಆರ್‌ ತಯಾರಿಕೆಗೆ ಯೋಚಿಸಿದ್ದು, ಸರ್ಕಾರದ ಒಪ್ಪಿಗೆ ಬಾಕಿ ಇದೆ.

ಪ್ರಸ್ತುತ, ನಮ್ಮ ಮೆಟ್ರೋ ಹಳದಿ ಲೈನ್‌ ಅಂದರೆ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸುವ ರಾಗಿಗುಡ್ಡ-ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ ನಡುವಣ 3.35 ಕಿ.ಮೀ. ಮರೇನಹಳ್ಳಿ ಮಾರ್ಗ ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್‌ ಎಂದು ಕರೆಸಿಕೊಂಡಿದೆ. ಮುಂದಿನ ಕೆಲ ತಿಂಗಳುಗಳಲ್ಲಿ ಇದರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಭೂಮಿಯೊಳಗೆ ಹೊಕ್ಕರು ಬಿಡುವುದಿಲ್ಲ: ಶಿವರಾಜ ತಂಗಡಗಿ

ಉಪ ಮುಖ್ಯಮಂತ್ರಿ, ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಈಚೆಗೆ ಮೆಟ್ರೋ ಕಾಮಗಾರಿ ಪರಿಶೀಲಿಸಿದ್ದ ವೇಳೆ, ವಿಮಾನ ನಿಲ್ದಾಣ ಮಾರ್ಗದಲ್ಲಿ ಪಿಲ್ಲರ್‌ಗಳನ್ನು ಹಾಕದೆ ಇರುವ ಕಡೆ ಎರಡು ಹಂತಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದ್ದರು. ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ಮಾಡುವಂತೆ ಸೂಚಿಸಿದ್ದರು. ಜೊತೆಗೆ ಭವಿಷ್ಯದಲ್ಲಿ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಈ ಆಲೋಚನೆಯನ್ನು ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದ್ದರು. ಅದರಂತೆ ಇದೀಗ ಹೊಸ ಮೂರು ಮಾರ್ಗಗಳಲ್ಲಿ ಡಬಲ್‌ ಡೆಕ್ಕರ್‌ ಮಾದರಿ ಅನುಸರಿಸಲು ಮುಂದಾಗಿದೆ.

PREV
Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!