ಪ್ರಯಾಣಿಕರು ಈ ರೈಲು ವಿಸ್ತರಣೆಯ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮೋಡಿ
ಹುಬ್ಬಳ್ಳಿ(ಮಾ.15): ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬೆಂಗಳೂರು ಮತ್ತು ಮಹಾರಾಷ್ಟ್ರದ ಮಿರಜ್ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುತ್ತಿದ್ದ ರಾಣಿ ಚೆನ್ನಮ್ಮ ಎಕ್ಸ್‌ಪ್ರೆಸ್ ರೈಲನ್ನು ಸಾಂಗ್ಲಿ ನಿಲ್ದಾಣದ ವರೆಗೆ ವಿಸ್ತರಿಸಲು ರೈಲ್ವೆ ಸಚಿವಾಲಯ ಅನುಮೋದನೆ ನೀಡಿದೆ.
ಮಾ. 12ರಿಂದ ರೈಲು ಸಂಖ್ಯೆ 16589 ಕೆಎಸ್‌ಆರ್ ಬೆಂಗಳೂರು- ಸಾಂಗ್ಲಿ ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲು ಕೆಎಸ್‌ಆರ್ ಬೆಂಗಳೂರು ನಿಲ್ದಾಣದಿಂದ ರಾತ್ರಿ 11 ಗಂಟೆಗೆ ಹೊರಟು, ಮರುದಿನ ಮಧ್ಯಾಹ್ನ 12.50ಕ್ಕೆ ಸಾಂಗ್ಲಿ ನಿಲ್ದಾಣ ತಲುಪಲಿದೆ. ಮಿರಜ್ ನಿಲ್ದಾಣಕ್ಕೆ ಈ ರೈಲು ಮಧ್ಯಾಹ್ನ 12.25ಕ್ಕೆ ಆಗಮಿಸಿ 12.30ಕ್ಕೆ ನಿರ್ಗಮಿಸಲಿದೆ.
ನಮೋ ಭಾರತ್ ರೈಲಿನ ವಿಡಿಯೋ ರಿಟ್ವೀಟ್ ಮಾಡಿದ ಮೋದಿ; ಯೂಟ್ಯೂಬರ್ ಮೋಹಿತ್‌ಗೆ ಶ್ಲಾಘನೆ
ಮಾ. 13ರಿಂದ ಜಾರಿಗೆ ಬರುವಂತೆ ರೈಲು ಸಂಖ್ಯೆ 16590 ಸಾಂಗ್ಲಿ- ಕೆಎಸ್‌ಆರ್ ಬೆಂಗಳೂರು ರಾಣಿ ಚೆನ್ನಮ್ಮ ಡೈಲಿ ಎಕ್ಸ್‌ಪ್ರೆಸ್ ರೈಲು ಸಾಂಗ್ಲಿ ನಿಲ್ದಾಣದಿಂದ ಮಧ್ಯಾಹ್ನ 3 ಗಂಟೆಗೆ ಹೊರಟು, ಮರುದಿನ ಬೆಳಗ್ಗೆ 6.20ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣ ತಲುಪಲಿದೆ. ಮೀರಜ್ ನಿಲ್ದಾಣಕ್ಕೆ ಈ ರೈಲು ಮಧ್ಯಾಹ್ನ 3.15ಕ್ಕೆ ಆಗಮಿಸಿ 3.35ಕ್ಕೆ ನಿರ್ಗಮಿಸಲಿದೆ. ಪ್ರಯಾಣಿಕರು ಈ ರೈಲು ವಿಸ್ತರಣೆಯ ಸೇವೆಯನ್ನು ಸದುಪಯೋಗ ಪಡೆದುಕೊಳ್ಳುವಂತೆ ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಮಂಜುನಾಥ ಕನಮೋಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.