ಪಿರಿಯಾಪಟ್ಟಣದ ಆವರ್ತಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಬೆಟ್ಟದಪುರ : ಪಿರಿಯಾಪಟ್ಟಣದ ಆವರ್ತಿ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಗ್ಯಾರಂಟಿ ಕಾರ್ಡ್ ವಿತರಿಸಿದರು.
ಗ್ರಾಪಂ ಸದಸ್ಯ ಎಂ.ಬಿ. ಶಿವಕುಮಾರ್ ಹಾಗೂ ಮುಖಂಡರಾದ ಪಟೇಲ್… ಯೋಗೇಶ್ ಹಾಗೂ ಹಿರಿಯರಾದ ಎ.ಎಲ್…. ಶಿವಪ್ಪ ಅವರು ಮಾತನಾಡಿ, ನಮ್ಮ ಗ್ರಾಪಂ ವ್ಯಾಪ್ತಿಯ ಮುತ್ತಿನ ಮೂಳಸೋಗೆ, ದಿಂಡುಗಾಡು, ಲಕ್ಷಿ ್ಮಪುರ, ಸುಂಕದಹಳ್ಳಿ, ಮರಡಿಯೂರು ಗ್ರಾಮಗಳ ಅಭಿವೃದ್ಧಿಗೆ ಮಾಜಿ ಶಾಸಕ ಕೆ. ವೆಂಕಟೇಶ್ ಅವರು ಹೆಚ್ಚು ಒತ್ತು ನೀಡಿದ್ದಾರೆ.
undefined
ಗ್ರಾಪಂ ಅಧ್ಯಕ್ಷ ಶಿವು, ಉಪಾಧ್ಯಕ್ಷೆ ಬಿಂದುಶ್ರೀ, ಮುಖಂಡರಾದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಚಂದ್ರಶೇಖರ್, ಹಾಲಿ ಉಪಾಧ್ಯಕ್ಷ ಶಿವರುದ್ರನಾಯಕ್, ತಾಪಂ ಮಾಜಿ ಅಧ್ಯಕ್ಷ ರವಿನಾಯಕ, ನಿವೃತ್ತ ಶಿಕ್ಷಕ ಲಕ್ಷ್ಮಣ…ನಾಯಕ್ ಇದ್ದರು.
ಕೈ ಟಿಕೆಟ್ ಕಗ್ಗಂಟು
ಹುಬ್ಬಳ್ಳಿ (ಏ.6) : ಹಿಂದುಸ್ತಾನಿ ಸಂಗೀತಕ್ಕೆ ಹೆಸರುವಾಗಿರುವ ಕುಂದಗೋಳದಲ್ಲೀಗ ದ ತಾಲೀಮು ಬಲು ಜೋರಾಗಿದೆ. ಇದು ಹಲವು ವೈಶಿಷ್ಟ್ಯಗಳಿಂದ ಕೂಡಿದ ಕ್ಷೇತ್ರ. ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿಯೇ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೂ ವಿರೋಧ ಎದುರಿಸುವಂತಾಗಿದೆ. ಹೀಗಾಗಿ, ಈ ಸಲ ಅವರಿಗೆ ಟಿಕೆಟ್ ಗ್ಯಾರಂಟಿ ಇಲ್ಲ. ಇನ್ನು ಬಿಜೆಪಿಯಲ್ಲೂ ಟಿಕೆಟ್ ಯಾರಿಗೆ ಎಂಬುದು ಖಚಿತವಾಗಿಲ್ಲ. ಎರಡು ಪಕ್ಷಗಳಲ್ಲೂ ಭಾರೀ ಪೈಪೋಟಿ ನಡೆದಿದೆ. ಇದರೊಂದಿಗೆ , ಆಪ್ ಪಕ್ಷಗಳು ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ನಡೆಸಿವೆ.
ಸಂಗೀತದ ಮೇರು ಪರ್ವತಗಳನ್ನು ಹುಟ್ಟುಹಾಕಿರುವ ಕ್ಷೇತ್ರವಿದು. ಸವಾಯಿ ಗಂಧರ್ವರ ಹುಟ್ಟೂರು. ಗಂಗೂಬಾಯಿ ಹಾನಗಲ್, ಭೀಮಸೇನ ಜೋಶಿ ಗಾಯಕರಾಗಿ ಹೊರಹೊಮ್ಮಿದ್ದು ಇಲ್ಲಿನ ತಾಲೀಮಿನಿಂದಲೆ.
Karnataka Assembly Elections 2023: ಕಾಂಗ್ರೆಸ್-ಬಿಜೆಪಿ ಟಿಕೆಟ್ ಇನ್ನೂ ಕಗ್ಗಂಟು..!
ಒಮ್ಮೆ ಬಿಟ್ಟು ಒಮ್ಮೆ ಗೆಲುವು:
1957 ಮತ್ತು 1962ರಲ್ಲಿ ನಡೆದ ಚುನಾವಣೆಯಲ್ಲಿ ಟಿ.ಕೆ. ಕಾಂಬಳಿ ಹಾಗೂ 2013 ಹಾಗೂ 2018ರಲ್ಲಿ ಸಿ.ಎಸ್. ಶಿವಳ್ಳಿ ಸತತವಾಗಿ ಎರಡು ಬಾರಿ ಆಯ್ಕೆಯಾಗಿದ್ದನ್ನು ಹೊರತುಪಡಿಸಿದರೆ, ಉಳಿದೆಲ್ಲ ಚುನಾವಣೆಗಳಲ್ಲಿ ಪ್ರತಿ ಸಲವೂ ಬದಲಾವಣೆ ಬಯಸಿದ ಹಾಲಿ ಶಾಸಕರಿಗೆ ಪಾಠ ಕಲಿಸಿದ ಹೆಮ್ಮೆ ಈ ಕ್ಷೇತ್ರದ್ದು.
ಕೆಲವರು ಒಮ್ಮೆ ಬಿಟ್ಟು ಮತ್ತೊಮ್ಮೆ ಗೆಲವು ಸಾಧಿಸಿದ್ದುಂಟು. ಆದರೆ, ನಿರಂತರವಾಗಿ ಆಯ್ಕೆಯಾಗಿಲ್ಲ. 1957ರಿಂದ ಈ ವರೆಗೆ ಬರೋಬ್ಬರಿ 15 ಚುನಾವಣೆಗಳನ್ನು ಕಂಡಿರುವ ಈ ಕ್ಷೇತ್ರದಲ್ಲಿ ಕಾಂಗ್ರೆಸ್ 9 ಬಾರಿ ಗೆಲವು ಕಂಡರೆ, ಜನತಾ ಪರಿವಾರದವರು 3 ಬಾರಿ, 2 ಸಲ ಪಕ್ಷೇತರರು, ಒಂದು ಬಾರಿ ಮಾತ್ರ ಬಿಜೆಪಿ ಗೆಲವು ಕಂಡಿದೆ. ಈ ಕಾರಣದಿಂದ ಕಾಂಗ್ರೆಸ್ಸಿನ ಭದ್ರಕೋಟೆæ ಎನಿಸಿದರೂ, ಈಗ ಬಿಜೆಪಿ ಕೂಡ ಅಷ್ಟೇ ಹಿಡಿತವನ್ನು ಹೊಂದಿದೆ.
ಕಾಂಗ್ರೆಸ್ಸಿನ ಟಿ.ಕೆ. ಕಾಂಬಳಿ 2 ಸಲ, ಸಿ.ಎಸ್. ಶಿವಳ್ಳಿ 3 ಸಲ ಆಯ್ಕೆಯಾಗಿದ್ದಾರೆ. ಉಳಿದಂತೆ ಎಸ್.ಆರ್. ಬೊಮ್ಮಾಯಿ, ರಂಗನಗೌಡರ, ಎಂ.ಎಸ್. ಕಟಗಿ, ವಿ.ಎಸ್. ಕುಬಿಹಾಳ, ಬಿ.ಎ. ಉಪ್ಪಿನ, ಜಿ.ಎಚ್. ಜುಟ್ಟಲ್, ಎಂ.ಎಸ್. ಅಕ್ಕಿ , ಎಸ್.ಐ. ಚಿಕ್ಕನಗೌಡರ ತಲಾ ಒಂದು ಬಾರಿ ಆಯ್ಕೆಯಾದವರು. ಕುಸುಮಾವತಿ ಶಿವಳ್ಳಿ ಉಪಚುನಾವಣೆಯಲ್ಲಿ ಗೆದ್ದು ಸದ್ಯ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಈಗಿನ ಚಿತ್ರಣ:
ಸದ್ಯ ಕಾಂಗ್ರೆಸ್ಸಿನ ಕುಸುಮಾವತಿ ಶಿವಳ್ಳಿ ಪ್ರತಿನಿಧಿಸುತ್ತಿದ್ದರೂ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಕಾಂಗ್ರೆಸ್ಸಿನಲ್ಲೇ ಹೆಚ್ಚಾಗಿದೆ. ಇವರಿಗೆ ಟಿಕೆಟ್ ನೀಡಬೇಡಿ ಎಂದು ಒಂದು ಬಣ ಪಟ್ಟು ಹಿಡಿದಿದ್ದು, ಒಂದು ವೇಳೆ ಕುಸುಮಾವತಿ ಅಥವಾ ಅವರ ಕುಟುಂಬದವರಿಗೆ ಟಿಕೆಟ್ ನೀಡಿದರೆ ಬಂಡಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಯಾರಿಗೆ ಟಿಕೆಟ್ ನೀಡಬೇಕೆನ್ನುವುದು ಕೆಪಿಸಿಸಿಗೆ ದೊಡ್ಡ ಸವಾಲಿನ ಪ್ರಶ್ನೆಯಾದಂತಾಗಿದೆ.
ಇನ್ನು ಬಿಜೆಪಿಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ನಾಲ್ಕು ಬಾರಿ ಟಿಕೆಟ್ ಪಡೆದು ಮೂರು ಬಾರಿ ಸೋತಿರುವ ಎಸ್.ಐ. ಚಿಕ್ಕನಗೌಡರ ಮತ್ತೆ ಟಿಕೆಟ್ ಕೇಳಿದ್ದಾರೆ. ಇವರು ಬಿಎಸ್‌ವೈ ಸಂಬಂಧಿಕರು ಆಗಿರುವುದು ಈ ಸಲವೂ ತಮಗೆ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ. ಇನ್ನೂ ಸಚಿವ ಸಿ.ಸಿ.ಪಾಟೀಲರ ಸಂಬಂಧಿ ಎಂ.ಆರ್.ಪಾಟೀಲ ಕೂಡ ಪ್ರಬಲ ಪೈಪೋಟಿ ಒಡ್ಡಿದ್ದಾರೆ. ಈ ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡುವುದು ಎಂಬ ಗೊಂದಲ ಬಿಜೆಪಿಯಲ್ಲೂ ಇದೆ. ಕುರುಬ ಸಮುದಾಯಕ್ಕೆ ಕೊಡಿ ಎಂಬ ಬೇಡಿಕೆಯನ್ನು ಆ ಸಮುದಾಯ ಪಕ್ಷದ ಮುಂದಿಟ್ಟಿದೆ. ಈ ಎಲ್ಲದರ ನಡುವೆ ಆಮ್ ಆದ್ಮಿ ಪಕ್ಷ, ಜೆಡಿಎಸ್ ಕೂಡ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾಯ್ದು ನೋಡಬೇಕು.