ಪ್ರಧಾನಿಗೆ ಕಾಯ್ಬೇಡಿ, ಪರಿಹಾರ ಘೋಷಿಸಿ: ಮೊಯಿಲಿ

By Kannadaprabha NewsFirst Published Aug 31, 2019, 1:06 PM IST
Highlights

ಪ್ರಧಾನಿಗಾಗಿ ಕಾಯದೆ ಪರಿಹಾರ ಘೋಷಿಸಿ ಎಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ. ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಅವರು ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ್ದಾರೆ. ಪ್ರಧಾನಿಯ ಬರುವಿಕೆಗಾಗಿ ಕಾಯದೆ ರಾಜ್ಯಕ್ಕೆ ತಾತ್ಕಾಲಿಕ ಪರಿಹಾರವನ್ನಾದರೂ ಘೋಷಿಸಬೇಕಾಗಿತ್ತು ಎಂದರು.

ಮಂಗಳೂರು(ಆ.31): ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾಗಿ 20 ದಿನಗಳೇ ಕಳೆದಿದ್ದರೂ ಕೇಂದ್ರ ಸರ್ಕಾರ ಇನ್ನೂ ಯಾವುದೇ ಪರಿಹಾರ ನೀಡಿಲ್ಲ. ಪ್ರಧಾನಿಗಾಗಿ ಕಾಯದೆ ಪರಿಹಾರ ಘೋಷಿಸಿ ಎಂದು ಮಾಜಿ ಮುಖ್ಯಮಂತ್ರಿ ಹಿರಿಯ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯಿಲಿ ಹೇಳಿದ್ದಾರೆ.

ಬೆಳ್ತಂಗಡಿಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ತಾತ್ಕಾಲಿಕ ಪರಿಹಾರವಾದ್ರೂ ಘೋಷಿಸಬೇಕಿತ್ತು:

ಪ್ರವಾಹ ಸಂತ್ರಸ್ತರಿಗೆ ಪರಿಹಾರ ಘೋಷಿಸಲು ಪ್ರಧಾನಿಯ ಬರುವಿಕೆಗಾಗಿ ಕಾಯಲಾಗುತ್ತಿದೆ. ಇದು ಪ್ರವಾಹ ಸಂತ್ರಸ್ತರ ಬಗ್ಗೆ ಸರ್ಕಾರ ಹೊಂದಿರುವ ಧೋರಣೆಯನ್ನು ತೋರಿಸುತ್ತದೆ. ಕೇಂದ್ರ ಸರ್ಕಾರದ ಗೃಹಸಚಿವರು, ಹಣಕಾಸು ಸಚಿವರೂ ಬಂದು ಇಲ್ಲಿನ ಪ್ರವಾಹದ ತೀವ್ರತೆಯನ್ನು ನೋಡಿ ಹೋಗಿದ್ದಾರೆ. ಪ್ರಧಾನಿಯ ಬರುವಿಕೆಗಾಗಿ ಕಾಯದೆ ರಾಜ್ಯಕ್ಕೆ ತಾತ್ಕಾಲಿಕ ಪರಿಹಾರವನ್ನಾದರೂ ಘೋಷಿಸಿ ಜನರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಬೇಕಾಗಿತ್ತು ಎಂದರು.

ಇದೀಗ ಬಂದ ಸುದ್ದಿ: ಮತ್ತೆ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧ

ರಾಜ್ಯದಲ್ಲಿಯೂ ಸರ್ಕಾರವೇ ಇಲ್ಲದ ಸ್ಥಿತಿಯಿದ್ದು ಪ್ರವಾಹ ಸಂತ್ರಸ್ತರಿಗೆ ಸ್ಪಂದಿಸುವ ಬದಲು ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳ ವರ್ಗಾ ವಣೆಯಲ್ಲಿ ತೊಡಗಿದ್ದರು. ಪ್ರವಾಹ ಪೀಡಿತ ಪ್ರದೇಶ ಗಳಲ್ಲಿ ಕಾರ‌್ಯನಿರ್ವಹಿಸಬೇಕಾಗಿದ್ದ ಅಧಿಕಾರಿಗಳ ಕಾರ‌್ಯನಿರ್ವಹಣೆಯ ಮೇಲೂ ಪರಿಣಾಮ ಬೀರಿತ್ತು ಎಂದರು.

ಸರ್ಕಾರ ಸಂತ್ರಸ್ತರ ನೆರವಿಗೆ ನಿಲ್ಲಬೇಕಾಗಿದೆ. ಈಗಾಗಲೇ ಕಾಂಗ್ರೆಸ್ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರವಾಹ ಪೀಡಿತರನ್ನು ನಿರ್ಲಕ್ಷ್ಯ ವಹಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದು ಈ ಬಗ್ಗೆ ತಕ್ಷಣ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯಪಾಲರಲ್ಲಿ ಮನವಿ ಮಾಡಿದೆ ಎಂದರು.

ಚಾರ್ಮಾಡಿ ಘಾಟ್‌ ಈಗ ಡೇಂಜರ್‌ ಝೋನ್‌!

ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್, ಮಾಜಿ ಸಚಿವ ಅಭಯಚಂದ್ರಜೈನ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಹರ್ಷ ಮೊಲಿ, ನಗರ ಬ್ಲಾಕ್ ಅಧ್ಯಕ್ಷ ರಾಜಶೇಖರ ಅಜ್ರಿ, ಜಿ.ಪಂ. ಸದಸ್ಯರಾದ ಶೇಖರ ಕುಕ್ಕೇಡಿ, ನಮಿತಾ, ತಾ.ಪಂ. ಸದಸ್ಯ ಪ್ರವೀಣ್‌ಗೌಡ, ತಾ. ಯೂತ್ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್, ಮುಖಂಡರಾದ ಶೈಲೇಶ್‌ಕುಮಾರ್, ಕೇಶವ ಬೆಳಾಲು, ಈಶ್ವರ ಭಟ್, ಅಶ್ರಫ್ ನೆರಿಯ, ಹರೀಶಗೌಡ ಬಂದಾರು, ಲೋಕೇಶ್ವರೀ ವಿನಯಚಂದ್ರ, ಸುಂದರಗೌಡ, ಜೆಸೀಂತಾ ಮೋನಿಸ್, ವಿನ್ಸೆಂಟ್ ಮಡಂತ್ಯಾರು, ಅಬ್ದುಲ್ ರಹಿಮಾನ್ ಪಡ್ಪು, ರಮೇಶ ಪೂಜಾರಿ, ಮೆಹಬೂಬ್ ಬೆಳ್ತಂಗಡಿ, ಪ್ರಭಾಕರ ಓಡಿಲ್ನಾಳ, ಅನೂಪ್ ಪಾಯಸ್ ಉಪಸ್ಥಿತರಿದ್ದರು.

click me!