ಗಣೇಶ ಮೂರ್ತಿ ವಿಸರ್ಜನೆಗೆ ಶಿವಮೊಗ್ಗದಲ್ಲಿ ಕೃತಕ ಕೆರೆ ಹಾಗೂ ಸಂಚಾರಿ ವಾಟರ್ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ. ಗಣೇಶ ಮೂರ್ತಿ ವಿಸರ್ಜನೆಯಿಂದ ನದಿ, ಸರೋವರಗಳು ಮಾಲಿನ್ಯ ವಾಗುವುದನ್ನು ತಡೆಯಲು ಇಂತಹದೊಂದು ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಟ್ಯಾಂಕರ್ ನಿಲುಗಡೆಗೆ ಸ್ಥಳವನ್ನೂ ನಿಗದಿ ಮಾಡಲಾಗಿದೆ.
ಶಿವಮೊಗ್ಗ(ಆ.31): ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೆ. 2ರಂದು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಅಂಗವಾಗಿ ನಗರದ ವಿವಿಧ ಕಡೆಗಳಲ್ಲಿ ಸಂಚಾರಿ ನೀರಿನ ಟ್ಯಾಂಕರ್‌ಗಳ ವ್ಯವಸ್ಥೆ ಹಾಗೂ ಕೃತಕ ಕೆರೆ ನಿರ್ಮಿಸಿದೆ.
ನೀರಿನ ಸಂಚಾರಿ ಟ್ಯಾಂಕರ್‌ಗಳನ್ನು ಹೊಸಮನೆ 5ನೇ ತಿರುವು ಗಣಪತಿ ದೇವಸ್ಥಾನದ ಹತ್ತಿರ, ಗೋಪಾಳ ಬಸ್‌ಸ್ಟ್ಯಾಂಡ್, ಗೋಪಾಲಗೌಡ ಬಡಾವಣೆ, ಇನ್‌ಕಂ ಟ್ಯಾಕ್ಸ್ ಕಚೇರಿ ಹತ್ತಿರ, ಕರಿಯಣ್ಣ ಬಿಲ್ಡಿಂಗ್ ವಿನೋಬನಗರ, ಕಾಶೀಪುರ ಬಸ್ ಸ್ಟ್ಯಾಂಡ್, ಚೌಡೇಶ್ವರಿ ದೇವಸ್ಥಾನದ ಹತ್ತಿರ, ಲಾಲ್ ಬಹದ್ದೂರ್ ಶಾಸ್ತ್ರಿ ನಗರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಬಣ್ಣರಹಿತ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳ ಮಾರಾಟ ಮತ್ತು ಕೃತಕ ಕೆರೆಯನ್ನು ನಿರ್ಮಿಸಿ ಗಣೇಶ ಮೂರ್ತಿ ಗಳ ವಿಸರ್ಜನೆಗಾಗಿ ಅವಕಾಶವನ್ನು ಕಲ್ಪಿಸಲಾಗಿದೆ.
ಗಣೇಶ ಕೂರಿಸುವವರು ಪಾಲಿಸಲೇಬೇಕಾದ ನಿಯಮಗಳಿವು..!
ಸಾರ್ವಜನಿಕರು ಈ ಎಲ್ಲಾ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳುವಂತೆ ಪರಿಸರ ಅಧಿಕಾರಿಗಳು ಕರೆ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ಮೊ.ಸಂ.- 9845411908, 9916514066 ಗಳನ್ನು ಸಂಪರ್ಕಿಸುವುದು ಎಂದು ತಿಳಿಸಿದ್ದಾರೆ.