ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ; ವೃದ್ಧೆಯ ಶವ ತಿಂದ ನಾಯಿಗಳು !

By Kannadaprabha News  |  First Published Oct 17, 2022, 8:20 AM IST
  • ವೃದ್ಧೆಯ ಶವದ ತಿಂದ ನಾಯಿಗಳು !
  • ದೇವಲ ಗಾಣಗಾಪೂರದಲ್ಲಿ ಹೃದಯ ವಿದ್ರಾವಕ ಘಟನೆ
  • ಶವಸಂಸ್ಕಾರಕ್ಕೂ ಮುಂದಾಗದ ಸ್ಥಳೀಯಾಡಳಿತ

ಚವಡಾಪುರ (ಕಲಬುರಗಿ)  ದಕ್ಷೀಣ ಭಾರತದಲ್ಲಿ ಹೆಚ್ಚು ಭಕ್ತರು, ಯಾತ್ರಿಕರು ಭೇಟಿ ನೀಡುವ ಧಾರ್ಮಿಕ ತಾಣಗಳಲ್ಲಿ ದೇವಲ ಗಾಣಗಾಪೂರವು ಒಂದಾಗಿದೆ. ಇಲ್ಲಿಗೆ ನಿತ್ಯ ನೂರಾರು ಭಕ್ತರು, ಯಾತ್ರಿಕರು ಬಂದು ಹೋಗುತ್ತಾರೆ. ಕೆಲವರು ಇಲ್ಲೇ ತಂಗುತ್ತಾರೆ. ಹೀಗೆ ಎಲ್ಲಿಂದಲೋ ಬಂದ ವೃದ್ಧೆಯೊಬ್ಬರು ಗಾಣಗಾಪೂರದಲ್ಲೇ ತಂಗಿದ್ದರು. ಅವರು ಅನಾರೋಗ್ಯದಿಂದ ಅ.15ರಂದು ಮೃತಪಟ್ಟಿದ್ದಾರೆ. ಮೃತ ದೇಹವನ್ನು ತೆಗೆದು ಅಂತ್ಯಸಂಸ್ಕಾರ ಮಾಡುವ ಕೆಲಸಕ್ಕೆ ಯಾರೂ ಮುಂದಾಗದ್ದರಿಂದ ಮೃತ ದೇಹವನ್ನು ಹಂದಿಗಳು ಮತ್ತು ನಾಯಿಗಳು ಹರಿದು ತಿಂದ ಘಟನೆ ಜರುಗಿದೆ.

ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ವೃದ್ಧೆ: ಜೀವದ ಹಂಗು ತೊರೆದು ಅಜ್ಜಿ ರಕ್ಷಿಸಿದ ಯುವಕ..!

Tap to resize

Latest Videos

ಈ ದೃಶ್ಯ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಗಾಣಗಾಪೂರದ ದತ್ತಾತ್ರೇಯ ದೇವಸ್ಥಾನ ಮುಜರಾಯಿ ಇಲಾಖೆಗೆ ಒಳಪಟ್ಟಿದ್ದು ಎಲ್ಲಾ ರೀತಿಯ ಸೇವಾ ಕೆಲಸಗಳು, ಸಾಮಾಜಿಕ ಬದ್ಧತೆಯ ಕೆಲಸಗಳನ್ನು ಮಾಡಲು ಇಲಾಖೆಯ ನಿಯಮಗಳಲ್ಲಿ ಉಲ್ಲೇಖವಿದ್ದರೂ ಕೂಡ ಶವ ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಅಲ್ಲದೆ ಸ್ಥಳೀಯವಾಗಿಯೇ ಗ್ರಾಮ ಪಂಚಾಯಿತಿ ಇದ್ದರೂ ಕೂಡ ಗ್ರಾಪಂನವರು ಕೂಡ ಶವ ತೆರವುಗೊಳಿಸಿ ಅಂತ್ಯಸಂಸ್ಕಾರ ಮಾಡುವ ಗೋಜಿಗೆ ಹೋಗಿಲ್ಲ. ಅಲ್ಲದೆ ಪೊಲೀಸ್‌ ಠಾಣೆಯೂ ಗ್ರಾಮದಲ್ಲಿದೆ. ಆದರೂ ಯಾರೊಬ್ಬರು ವೃದ್ಧೆಯ ಶವದ ಕಡೆ ತಿರುಗಿ ನೋಡದೇ ಇರುವುದರಿಂದ ನಾಯಿ ನರಿಗಳು ಹರಿದು ತಿನ್ನುವಂತಾಗಿದೆ.

ಘಟನೆ ಕುರಿತು ತಹಸೀಲ್ದಾರ ಸಂಜೀವಕುಮಾರ ದಾಸರ್‌ ಪ್ರತಿಕ್ರಿಯಿಸಿದ್ದು ಇದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇಂತ ಘಟನೆಗಳು ಮರುಕಳಿಸದ ರೀತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಈ ಕುರಿತು ಸಂಬಂಧ ಪಟ್ಟಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಏಕಾಂಗಿ ಶಿಕ್ಷಕಿ ಮನೆ ಪಕ್ಕದಲ್ಲೇ ಇದ್ದ ಕೊಲೆಗಾರ: ಹಣದಾಸೆಗೆ ವೃದ್ಧೆಯನ್ನ ಕೊಂದಿದ್ದ ಖದೀಮರು

ಇದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. ಇಂಥ ಘಟನೆಗಳು ಮರುಕಳಿಸದ ರೀತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯವರೇ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡಬೇಕು. ಈ ಕುರಿತು ಸಂಬಂಧಪಟ್ಟಅಧಿಕಾರಿಗಳ ಜೊತೆಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಸಂಜೀವಕುಮಾರ ದಾಸರ್‌, ತಹಸೀಲ್ದಾರ್‌

click me!