ಮೃತ ಲಕ್ಷ್ಮಣ ನಾಯ್ಕ ಕುಟುಂಬ ಸಾಕಿದ ನಾಯಿ ತನ್ನ ಮನೆ ಹಾಗೂ ಮಾಲೀಕರನ್ನ ಹುಡುಕಾಟ ನಡೆಸಿದೆ. ಗುಡ್ಡದಿಂದ ಮಣ್ಣು ಬಿದ್ದ ಪ್ರದೇಶದಲ್ಲಿ ತನ್ನ ಮನೆ ಹಾಗೂ ಮಾಲೀಕರನ್ನು ಸಾಕು ನಾಯಿ ಹುಡುಕಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
ಕಾರವಾರ(ಜು.16): ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಭೀಕರ ಘಟನೆಯ ನಡುವೆ ಹೃದಯ ವಿದ್ರಾವಕ ದೃಶ್ಯವೊಂದು ನೋಡುಗರ ಕಣ್ಣನ್ನ ಒದ್ದೆ ಮಾಡುತ್ತೆ. ಹೌದು, ಲಕ್ಷ್ಮಣ ನಾಯ್ಕ ಕುಟುಂಬದ 6 ಹಾಗೂ ಸ್ಥಳೀಯರೊಬ್ಬರು ಗುಡ್ಡ ಕುಸಿತಕ್ಕೆ ಸಿಲುಕಿ ಗಂಗಾವಳಿ ನದಿಯಲ್ಲಿ ಕೊಚ್ಚಿಹೋಗಿ ಜಲಸಮಾಧಿಯಾಗಿದ್ದಾರೆ.
ಮೃತ ಲಕ್ಷ್ಮಣ ನಾಯ್ಕ ಕುಟುಂಬ ಸಾಕಿದ ನಾಯಿ ತನ್ನ ಮನೆ ಹಾಗೂ ಮಾಲೀಕರನ್ನ ಹುಡುಕಾಟ ನಡೆಸಿದೆ. ಗುಡ್ಡದಿಂದ ಮಣ್ಣು ಬಿದ್ದ ಪ್ರದೇಶದಲ್ಲಿ ತನ್ನ ಮನೆ ಹಾಗೂ ಮಾಲೀಕರನ್ನು ಸಾಕು ನಾಯಿ ಹುಡುಕಾಡುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
undefined
ಬೆಂಗಳೂರು - ಹೊನ್ನಾವರ ಹೆದ್ದಾರಿಯಲ್ಲಿ ಗುಡ್ಡ ಕುಸಿತ; ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾಟ
ಪರಿಚಿತ ಜಾಗವೇ ಅಪರಿಚಿತ ಪ್ರದೇಶವಾಗಿ ಮಾರ್ಪಾಡಾಗಿರುವುದನ್ನು ಸಾಕುನಾಯಿಗೂ ಸಹ ಅರಗಿಸಿಕೊಳ್ಳುತ್ತಿಲ್ಲ. ಹೀಗಾಗಿ ತನ್ನ ಮಾಲೀಕರ ಹುಡುಕಾಣದಲ್ಲಿರುವ ಈ ಶ್ವಾನ ಕಣ್ಣೀರಿಡುತ್ತಿದೆ. ಯಾರೋ ನೀಡಿದ ಆಹಾರವನ್ನು ಸೇವಿಸ್ತಾ ಆಚೀಂದೀಚೆ ಓಡಾಡ್ತಾ ಸಾಕು ನಾಯಿಯಿಂದ ಮನೆ ಮಾಲೀಕರರಾಗಿ ಹುಡುಕಾಟ ನಡೆಸುತ್ತಿದೆ.
ಮೃತ ದೇಹಗಳನ್ನು ಹುಡುಕಲು ಎನ್‌ಡಿಆರ್‌ಎಫ್ ತಂಡದಿಂದ ಗಂಗಾವಳಿ ನದಿಯಲ್ಲಿ ಕಾರ್ಯಾಚರಣೆ ನಡೆಯುವ ವೇಳೆ ನಾಯಿ ತನ್ನ ಮಾಲೀಕರಿಗಾಗಿ ಹುಡುಕಾಡುವ ದೃಶ್ಯ ಮನಕಲುಕುವಂತಿದೆ. ಗುಡ್ಡ ಕುಸಿತದಿಂದಾಗಿ ತನ್ನ ಮಾಲೀಕರ ಕುಟುಂಬದ ಎಲ್ಲಾ ಸದಸ್ಯರನ್ನು ಕಳೆದುಕೊಂಡು ಸಾಕುನಾಯಿ ಅನಾತವಾಗಿದೆ.