ಮೂರು ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಸೀಳುನಾಯಿ

Published : Sep 04, 2019, 01:26 PM IST
ಮೂರು ಮರಿಗಳಿಗೆ ಜನ್ಮ ನೀಡಿದ ಪಿಲಿಕುಳದ ಸೀಳುನಾಯಿ

ಸಾರಾಂಶ

ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾವನ ಸೀಳುನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಸಂದರ್ಶಕರಿಗೆ ತಾಯಿ ಸೀಳುನಾಯಿ ಮತ್ತು ಮರಿಗಳನ್ನು ನೋಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸೀಳುನಾಯಿಯನ್ನು ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾಗಿತ್ತು.

ಮಂಗಳೂರು(ಸೆ.04): ಅಪರೂಪದ ಅಳಿವಿನಂಚಿನ ಸೀಳುನಾಯಿಯು ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಮೂರು ಮರಿಗಳಿಗೆ ಜನ್ಮ ನೀಡಿದ್ದು, ಮರಿಗಳು ಆರೋಗ್ಯವಾಗಿವೆ.

ಸಂದರ್ಶಕರಿಗೆ ತಾಯಿ ಸೀಳುನಾಯಿ ಮತ್ತು ಮರಿಗಳನ್ನು ನೋಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸೀಳುನಾಯಿಯನ್ನು ವಿಶಾಖಪಟ್ಟಣಂ ಮೃಗಾಲಯದಿಂದ ತರಿಸಲಾಗಿತ್ತು. ಇದೀಗ ಮರಿ ಹಾಕಿದ ಸಂಭ್ರಮದಲ್ಲಿದೆ. ಮರಿಗಳೊಂದಿಗೆ ಉದ್ಯಾನವನದ ತನ್ನ ವ್ಯಾಪ್ತಿಯಲ್ಲಿ ಸಂಚರಿಸುತ್ತ ಗಮನ ಸೆಳೆಯುತ್ತಿದೆ.

ನಾಗರಿಕರ ಮೊಬೈಲ್‌ಗೆ ನೇರ ಪೊಲೀಸ್‌ ಸಂದೇಶ!

ಪ್ರಾಣಿ ವಿನಿಮಯ:

ತಿರುವನಂತಪುರಂ ಮೃಗಾಲಯದಿಂದ ರಿಯಾ ಪಕ್ಷಿ ಹಾಗೂ ತಿರುಪತಿ ಮೃಗಾಲಯದಿಂದ ಬಿಳಿ ಹುಲಿಗಳನ್ನು ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ತರಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್‌.ಜೆ. ಭಂಡಾರಿ ತಿಳಿಸಿದ್ದಾರೆ.

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು