ಹೆರಿಗೆ ಸಮಯದಲ್ಲಿ ತಾಯಿ, ಶಿಶು ಸಾವಿನ ಪ್ರಮಾಣ ಕಡಿಮೆಯಾಗಬೇಕಿದೆ. ಹಣದ ಆಸೆಯಿಂದಾಗಿ ಸಿಸೇರಿಯನ್ ಮಾಡಿಸುವ ಕೆಲಸವನ್ನು ವೈದ್ಯರು ಬಿಡಬೇಕಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ : ಹೆರಿಗೆ ಸಮಯದಲ್ಲಿ ತಾಯಿ, ಶಿಶು ಸಾವಿನ ಪ್ರಮಾಣ ಕಡಿಮೆಯಾಗಬೇಕಿದೆ. ಹಣದ ಆಸೆಯಿಂದಾಗಿ ಸಿಸೇರಿಯನ್ ಮಾಡಿಸುವ ಕೆಲಸವನ್ನು ವೈದ್ಯರು ಬಿಡಬೇಕಿದೆ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು.
ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆಯ ವತಿಯಿಂದ ಅಯೋಜಿಸಿದ್ದ ಇಂದ್ರ ಧನುಷ್ ಕಾರ್ಯಕ್ರಮ, ವಿಶ್ವ ಸ್ತನ್ಯಪಾನ ಸಪ್ತಾಹ, ಸೀಮಂತ ಕಾರ್ಯಕ್ರಮ, ಅನ್ನಪ್ರಾಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಹಜ ಹೆರಿಗೆ ಕಡಿಮೆಯಾಗುತ್ತಿದ್ದು, ಹೆಚ್ಚು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಲಾಗುತ್ತಿದೆ. ಆದ್ದರಿಂದ ವೈದ್ಯರು ಗರ್ಭಿಣಿಯರಿಗೆ ಜಾಗೃತಿ ಮೂಡಿಸಿ ಸಹಜ ಹೆರಿಗೆಗೆ ಒತ್ತು ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಹೆಚ್ಚು ಗರ್ಭಿಣಿಯರಿಗೆ ಸೀಮಂತ ಕಾರ್ಯ ನಡೆಯಿತು. ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಡಿ.ಎಂ.ಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಸಿದ್ದೇಶ್ವರ್, ನಗರಸಭೆ ಅಧ್ಯಕ್ಷೆ ಪೂಜಾ ಪೆದ್ದರಾಜು, ಸದಸ್ಯರಾದ ಶಿವಶಂಕರ್, ಅಜಯ್ ಕುಮಾರ್, ಬುರಾನ್, ಜಾಫರ್, ಶಿಶು ಅಭಿವೃದ್ಧಿ ಯೋಜನಾಕಾರಿ ರಾಜಾ ನಾಯಕ್, ಮುಖಂಡರಾದ ಎಚ್.ಎಲ್.ರಂಗನಾಥ್, ತರೂರು ಮನೋಜ್ ಸೇರಿದಂತೆ ಹಲವರು ಹಾಜರಿದ್ದರು.
ಸತ್ಯ - ಮಿಥ್ಯ
ಪ್ರತಿಯೊಬ್ಬರೂ ತಮ್ಮ ಮಕ್ಕಳು ಅತ್ಯುತ್ತಮ ಮತ್ತು ವಿಧೇಯರಾಗಿರಬೇಕೆಂದು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಉತ್ತಮ ಮಗುವನ್ನು ಪಡೆಯುವ ಅನೇಕ ನಿಯಮಗಳನ್ನು ಅನುಸರಿಸಬೇಕು. ಅಂದಹಾಗೆ ಸಂಸ್ಕಾರಯುತವಾಗಲು ಮಗುವಿನ ಪಾಲನೆಗೆ ಗಮನ ನೀಡಬೇಕು. ಆದರೆ ಗರ್ಭಾವಸ್ಥೆಯ ಸಮಯದಲ್ಲಿರುವಾಗ ಕೆಲವು ನಿಯಯ ಅನುಸರಿಸಿದರೆ ಉತ್ತಮ ಸಂತಾನ ಪ್ರಾಪ್ತಿಯಾಗಲಿದೆ.
ಪ್ರತಿಯೊಬ್ಬ ಪೋಷಕರಿಗೆ ತಾವು ಉತ್ತಮವಾದ ಸಂಸ್ಕಾರವಿರುವ ಮಗುವನ್ನು ಪಡೆಯಬೇಕೆನ್ನುವ ಆಸೆ ಇರುತ್ತದೆ. ಮಕ್ಕಳು ತಮ್ಮ ಪೋಷಕರಿಂದ ಮಾತ್ರ ಮೌಲ್ಯಗಳನ್ನು ಪಡೆಯುತ್ತಾರೆ. ಸುಸಂಸ್ಕೃತ ಮಗು ಯಾವಾಗಲೂ ಉತ್ತಮ ಗುಣಗಳಿಂದ ತುಂಬಿರುತ್ತದೆ. ಪಾಲಕರು ಮಗುವಿಗೆ ಸಂಸ್ಕಾರವನ್ನು ನೀಡಿದರೆ, ಅಂತಹ ಮಕ್ಕಳು ತಮ್ಮ ತಂದೆ ತಾಯಿಯ ಹೆಸರನ್ನು ಬೆಳಗುತ್ತಾರೆ ಮತ್ತು ರಾಷ್ಟ್ರದ ಹೆಸರನ್ನು ಬೆಳಗಿಸುತ್ತಾರೆ ಎಂದು ಹೇಳಲಾಗಿದೆ. ಆದರೆ ಮಗು ಹುಟ್ಟಿದ ಮೇಲೆ ಒಳ್ಳೆಯ ಸಂಸ್ಕೃತಿ ಕಲಿಸುವುದು ತಂದೆ-ತಾಯಿದೆ ಬಿಟ್ಟಿದ್ದು. ಆದರೆ ಗರ್ಭಾವಸ್ಥೆಯ ಸಮಯದಲ್ಲಿ ಕೆಲವು ನಿಯಮಗಳನ್ನು ಪಾಲಿಸಿದರೆ, ಒಂದು ಅತ್ಯುತ್ತಮ, ಅರ್ಹ ಮತ್ತು ಸುಸಂಸ್ಕೃತ ಮಗುವನ್ನು ಪಡೆಯಬಹುದು. ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾದ ಈ ನಿಯಮಗಳನ್ನು ಅನುಸರಿಸುವ ಮೂಲಕ ನೀವು ಪ್ರಜ್ಞಾವಂತ ಮಗನನ್ನು ಪಡೆಯಬಹುದು.