Karwar: ಮೃತಪಟ್ಟು 24 ಗಂಟೆಯಾದ್ರೂ ಮರಣೋತ್ತರ ಪರೀಕ್ಷೆ ನಡೆಸದ ಬೇಜವಾಬ್ದಾರಿ ವೈದ್ಯರು

By Kannadaprabha NewsFirst Published Jan 21, 2022, 12:38 PM IST
Highlights

*  ಕಾರವಾರ ಜಿಲ್ಲಾಸ್ಪತ್ರೆ ವಿರುದ್ಧ ಸಂಬಂಧಿಕರ ದೂರು
*  ಸಂತೋಷ ಗಾಂವ್ಡೇಕರ್‌ ಎಂಬುವನೇ ಮೃತಪಟ್ಟ ಯುವಕ
*  ಗೋವಾದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂತೋಷ 
 

ಕಾರವಾರ(ಜ.21):  ಯುವಕನೋರ್ವ ಮೃತಪಟ್ಟು 24 ಗಂಟೆ ಕಳೆದರೂ ಮರಣೋತ್ತರ(Post-Mortem) ಪರೀಕ್ಷೆ ವೈದ್ಯರು(Doctors) ನಡೆಸಿಲ್ಲ ಎಂದು ಆತನ ಕುಟುಂಬಸ್ಥರು ಇಲ್ಲಿನ ಜಿಲ್ಲಾ ಆಸ್ಪತ್ರೆ(District Hospital) ವಿರುದ್ಧ ದೂರಿದ್ದಾರೆ. ಜೋಯಿಡಾ(Joida) ತಾಲೂಕಿನ ಕುಂಬಾರವಾಡ ನಿವಾಸಿ ಸಂತೋಷ ಗಾಂವ್ಡೇಕರ್‌ (24) ಮೃತರಾಗಿದ್ದು(Death), ಗೋವಾದಲ್ಲಿ(Goa) ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅದ್ಯಾವುದೋ ಕಾರಣಕ್ಕೆ ಮನನೊಂದು ಜ. 16ರಂದು ವಿಷಸೇವಿಸಿ ಆತ್ಮಹತ್ಯೆಗೆ(Suicide) ಯತ್ನಿಸಿದ್ದರು. ಈ ವೇಳೆ ಅವರ ಪರಿಚಯದವರು ಗೋವಾದಲ್ಲೇ ಆಸ್ಪತ್ರೆಗೆ ದಾಖಲಿಸಿ ಉಳಿಸಿದ್ದರು.

ಎರಡು ದಿನ ಆಸ್ಪತ್ರೆಯಲ್ಲಿದ್ದ ಸಂತೋಷ ಡಿಸ್ಚಾರ್ಜ್‌ ಆಗಿ ಬಸ್‌ ಮೂಲಕ ಕರ್ನಾಟಕ(Karnataka) ಗಡಿಯವರೆಗೆ ಬಂದಿದ್ದರು. ಅಲ್ಲಿಂದ ಮನೆಯವರು ಆತನನ್ನ ಕರೆದುಕೊಂಡು ಜೋಯಿಡಾಕ್ಕೆ ಹಿಂತಿರುಗುತ್ತಿದ್ದಾಗ ಹೊಟ್ಟೆ ನೋವು ಕಾಣಿಸಿದ್ದರಿಂದ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಅದರೆ ವಿಷದ ಪ್ರಭಾವದಿಂದ ಸಂತೋಷ್‌ಗೆ ಬಹುಅಂಗಾಂಗ ವೈಫಲ್ಯ ಉಂಟಾಗಿದ್ದು ಚಿಕಿತ್ಸೆ(Treatment) ಫಲಕಾರಿಯಾಗದೇ ಬುಧವಾರ ಸಂಜೆ ಮೃತಪಟ್ಟಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಪರಿಣಾಮ ಮರಣೋತ್ತರ ಪರೀಕ್ಷೆ ನಡೆಸದೇ, ಮೃತದೇಹವನ್ನು ಕುಟುಂಬಸ್ಥರಿಗೆ ನೀಡುವ ಯಾವ ಪ್ರಕ್ರಿಯೆಯನ್ನೂ ನಡೆಸದೇ ಆಸ್ಪತ್ರೆಯವರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Covid-19 Crisis: ಸೋಂಕು ಹೆಚ್ಚಳ: 25ರ ವರೆಗೆ 9 ಶಾಲೆಗಳಿಗೆ ರಜೆ

ಸಂತೋಷ ಮೃತಪಟ್ಟು ತಾಸಿನ ಬಳಿಕ ಕಾರವಾರ(Karwar) ಪೊಲೀಸರು(Police) ಆಸ್ಪತ್ರೆಗೆ ಭೇಟಿ ನೀಡಿದ್ದು, ಮರಣೊತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಕಳೆಬರ ಹಸ್ತಾಂತರಿಸಬಹುದು ಎಂದು ತಿಳಿಸಿದ್ದರು. ಆದರೆ ಈ ಬಗ್ಗೆ ಕುಟುಂಬಸ್ಥರಿಗೆ ಸರಿಯಾದ ಮಾಹಿತಿ ನೀಡದ್ದರಿಂದ ತಡರಾತ್ರಿಯವರಿಗೆ ಅವರು ಕಾದು ಕುಳಿತುಕೊಳ್ಳುವಂತಾಯಿತು. ಮೃತರ ಕುಟುಂಬಸ್ಥರು ಬಡವರಾಗಿದ್ದು ಲಾಡ್ಜ್‌ನಲ್ಲಿ ಉಳಿದುಕೊಳ್ಳಲು ಹಣವಿಲ್ಲದೇ ರಸ್ತೆ ಬದಿಯ ಕಟ್ಟೆಯಲ್ಲೇ ಕುಳಿತು ರಾತ್ರಿ ಕಳೆದಿದ್ದಾರೆ. 

ಮರುದಿನ (ಗುರುವಾರ) ಬೆಳಗ್ಗೆಯಾದರೂ ಮೃತದೇಹ(Deadbody) ಸಿಗಬಹುದು ಎಂದು ಕುಟುಂಬಸ್ಥರು ಕಾದು ಕುಳಿತಿದ್ದರಾದರೂ ಪೋಸ್ಟ್‌ ಮಾರ್ಟಂ ನಡೆಸುವ ವೈದ್ಯರಿಲ್ಲದೇ ಸಂಜೆಯಾದ್ರೂ ಮೃತದೇಹ ಹಸ್ತಾಂತರವಾಗಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ಇತರೆ ವೈದ್ಯರಿಗೆ ಕೇಳಿದರೂ ಸಮರ್ಪಕ ಉತ್ತರ ಸಿಗದೇ ಕುಟುಂಬಸ್ಥರು ಹೈರಾಣಾಗಿದ್ದಾರೆ. ಕೊನೆಗೆ ಮಾಜಿ ಸಚಿವ ಆರ್‍.ವಿ.ದೇಶಪಾಂಡೆ(RV Deshpande) ಅವರಿಗೆ ವಿಷಯ ತಿಳಿಸಿದ ಬಳಿಕ ವೈದ್ಯರು ಸಂಜೆ ವೇಳೆ ಪೋಸ್ಟ್‌ ಮಾರ್ಟಂ ನಡೆಸಿದ್ದಾರೆ.

ಮೊಸಳೆ ಜತೆಗೆ ಅಪರಿಚಿತ ವ್ಯಕ್ತಿಯ ಶವ ಪತ್ತೆ

ದಾಂಡೇಲಿ: ನಗರದ ಕುಳಗಿ ರಸ್ತೆಯ ಕಾಳಿ ನದಿ(Kali River) ಸೇತುವೆ ಕೆಳಗೆ ಮೊಸಳೆ(Crocodile) ಜತೆ ಅಪರಿಚಿತ ವ್ಯಕ್ತಿಯ ಶವ ಬುಧವಾರ ಬೆಳಗ್ಗೆ ಕಂಡುಬಂದಿದೆ. ಆದರೆ, ಮೊಸಳೆ ಶವವನ್ನು ಕೊಗಿಲಬನ ಗ್ರಾಮದ ಖಾಸಗಿ ರೆಸಾರ್ಟ್‌ ತನಕ ಎಳೆದುಕೊಂಡು ಹೋಗಿದ್ದು, ಶವವನ್ನು ಹೊರತರುವಲ್ಲಿ ಜಂಗಲ್‌ ಸಫಾರಿ ರಾಫ್ಟಿಂಗ್‌ ತಂಡ ಹಾಗೂ ಪೊಲೀಸ್‌ ಸಿಬ್ಬಂದಿ ಸಹಕರಿಸಿದ್ದಾರೆ.

PMGSY: ಹಣ ಪೋಲಾಗುವುದನ್ನು ತಪ್ಪಿಸಿದ ಪ್ರಧಾನಿ ಮೋದಿ: ಅನಂತಕುಮಾರ ಹೆಗಡೆ

ವ್ಯಕ್ತಿ ಒಂದು ಕೈ ಹಾಗೂ ಒಂದು ಕಾಲು ಕಾಣೆಯಾಗಿದ್ದು, ಭಾಗಶಃ ಶವವು ಕೊಳೆತ ಸ್ಥಿತಿಯಲ್ಲಿದೆ. ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗದ ಕಾರಣ ನದಿಯ ದಡದಲ್ಲಿಯೇ ಮರಣೋತ್ತರ ಪರೀಕ್ಷೆ ಕೈಗೊಳ್ಳಲಾಗಿದೆ. ವ್ಯಕ್ತಿ ಗುರುತು ಪರಿಚಯಕ್ಕೆ ಸಂಬಂಧಿಸಿದಂತೆ ತಾಲೂಕಿನ ಎಲ್ಲ ಠಾಣೆಗಳಿಗೆ ಮಾಹಿತಿ ಕಳುಹಿಸಲಾಗಿದೆ. ಇದುವರೆಗೂ ವ್ಯಕ್ತಿ ಕುರಿತು ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ ಎಂದು ಸ್ಥಳಕ್ಕೆ ಭೇಟಿ ನೀಡಿ ಗ್ರಾಮೀಣ ಠಾಣೆಯ ಪಿಎಸ್‌ಐ ಐ.ಆರ್‌. ಗಡ್ಡೇಕರ ಹಾಗೂ ನಗರ ಠಾಣೆಯ ಕಿರಣ ಪಾಟೀಲ ಮಾಹಿತಿ ನೀಡಿದ್ದಾರೆ.

ಅಪರಿಚಿತ ವ್ಯಕ್ತಿಯು ಮೊಸಳೆ ದಾಳಿಗೆ ಒಳಗಾಗಿದ್ದಾನೋ ಅಥವಾ ಆತ್ಮಹತ್ಯೆಯೋ, ಕೊಲೆ ಎನ್ನುವುದು ತನಿಖೆಯಿಂದ ತಿಳಿದು ಬರಬೇಕಾಗಿದೆ. ವ್ಯಕ್ತಿ ಗುರುತು ಪರಿಚಯ ಸಲುವಾಗಿ ದೇಹದ ಸ್ಯಾಂಪಲ್‌ ಅನ್ನು ಡಿಎನ್‌ಎ ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್‌ ಶೈಲೇಶ ಪರಮಾನಂದ, ಕೋಗಿಲೆಬನ ಗ್ರಾಪಂ ಅಧ್ಯಕ್ಷ ಅಶೋಕ ನಾಯ್ಕ ಹಾಗೂ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
 

click me!