10 ತಿಂಗಳ ಕೊರೋನಾ ಸೋಂಕಿತ ಮಗು ರಕ್ಷಿಸಿದ ವಾರಿಯರ್ಸ್ ಹೇಳಿದ್ದಿಷ್ಟು..!

By Kannadaprabha News  |  First Published Apr 15, 2020, 8:17 AM IST

ಒಂದೆಡೆ ಕೊರೋನಾ ಸೋಂಕಿತ 10 ತಿಂಗಳ ಮಗು, ಇನ್ನೊಂದು ಕಡೆ ಪ್ರತ್ಯೇಕ ನಿಗಾದಲ್ಲಿ ಇರುವ ಮಗುವಿನ ಗರ್ಭಿಣಿ ತಾಯಿ, ಇನ್ನೋರ್ವ ಅಜ್ಜಿ. ಇವರಿಬ್ಬರಿಗೆ ಮಗುವಿನಿಂದ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳುವ ದೊಡ್ಡ ಸವಾಲು. ಕೊನೆಗೂ ಈ ಸವಾಲನ್ನು ಮೆಟ್ಟಿನಿಂತ ಸಂತಸದಲ್ಲಿ ಆಸ್ಪತ್ರೆಯ ವೈದ್ಯರ ತಂಡ ಹೇಳಿದ್ದಿಷ್ಟು.


ಮಂಗಳೂರು(ಏ.15): ಒಂದೆಡೆ ಕೊರೋನಾ ಸೋಂಕಿತ 10 ತಿಂಗಳ ಮಗು, ಇನ್ನೊಂದು ಕಡೆ ಪ್ರತ್ಯೇಕ ನಿಗಾದಲ್ಲಿ ಇರುವ ಮಗುವಿನ ಗರ್ಭಿಣಿ ತಾಯಿ, ಇನ್ನೋರ್ವ ಅಜ್ಜಿ. ಇವರಿಬ್ಬರಿಗೆ ಮಗುವಿನಿಂದ ಕೊರೋನಾ ಸೋಂಕು ಹರಡದಂತೆ ನೋಡಿಕೊಳ್ಳುವ ದೊಡ್ಡ ಸವಾಲು. ಕೊನೆಗೂ ಈ ಸವಾಲನ್ನು ಮೆಟ್ಟಿನಿಂತ ಸಂತಸದಲ್ಲಿ ಆಸ್ಪತ್ರೆಯ ವೈದ್ಯರ ತಂಡ.

ಇದು ಮಂಗಳೂರು ಹೊರವಲಯದ ದೇರಳಕಟ್ಟೆಕೆ. ಎಸ್‌. ಹೆಗ್ಡೆ (ಕ್ಷೇಮ) ಆಸ್ಪತ್ರೆ ವೈದ್ಯರ ತಂಡ ಮೊದಲ ಬಾರಿಗೆ ಕೊರೋನಾ ಸೋಂಕು ಎದುರಿಸಿದ ಬಗೆ. ಕರಾವಳಿ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಯೊಂದು ಕೊರೋನಾ ಕೇಸ್‌ ಗೆದ್ದಿರುವುದು ಇದೇ ಪ್ರಥಮ.

ಲಾಕ್‌ಡೌನ್‌: ಬೆವರು ಸುರಿಸಿ ಬೆಳೆದ ಬೆಳೆ ಕದ್ದು ಮಾರುವ ಸ್ಥಿತಿ, ನಿಲ್ಲದ ಅನ್ನದಾತನ ಸಂಕಷ್ಟ..!

Tap to resize

Latest Videos

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ 10 ತಿಂಗಳ ಮಗುವನ್ನು ಕೊರೋನಾ ಸೋಂಕಿನಿಂದ ಬದುಕಿಸಿದ್ದು ಕ್ಷೇಮ ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ ತಜ್ಞೆ ಡಾ. ರಥಿಕಾ ಶೆಣೈ ಹಾಗೂ ತಂಡ. ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಡಾ. ಶಿವಕುಮಾರ್‌ ಹಿರೇಮಠ್‌ ಇದರ ಉಸ್ತುವಾರಿ ನೋಡಿಕೊಂಡಿದ್ದರು. ಮಗುವಿಗೆ ಚಿಕಿತ್ಸೆ ನೀಡಿದ ಡಾ.ರಥಿಕಾ ಶೆಣೈ ಹೇಳಿದ್ದಿಷ್ಟು.

ಮಗುವಿಗೆ ವೆಂಟಿಲೇಟರ್‌ ಅಳವಡಿಸಿ ಚಿಕಿತ್ಸೆ ನೀಡುವ ಪ್ರಮೇಯ ಬರಲಿಲ್ಲ. ಸ್ವಲ್ಪ ಉಸಿರಾಟದ ತೊಂದರೆ ಹೊರತುಪಡಿಸಿದರೆ, ಮಗುವಿಗೆ ಕೆಮ್ಮು, ಕಫ ಇರಲಿಲ್ಲ. ಇದು ಮಗುವನ್ನು ನೋಡಿಕೊಳ್ಳುತ್ತಿದ್ದ ಗರ್ಭಿಣಿ ತಾಯಿ ಹಾಗೂ ಅಜ್ಜಿಗೂ ಹರಡದಂತೆ ಇರಲು ಕಾರಣವಾಯಿತು. ಚಿಕಿತ್ಸೆಗೆ ಮಗು ಕೂಡ ಸ್ಪಂದಿಸಿದ್ದು, ತಾಯಿ ಗರ್ಭಿಣಿಯಾದ ಕಾರಣ ಮಗುವಿನ ಅಜ್ಜಿಗೆ ಆರೈಕೆ ಹೊಣೆ ವಹಿಸಲಾಗಿತ್ತು. ಕೊನೆಗೆ ಚಿಕಿತ್ಸೆ ಪೂರ್ಣಗೊಂಡ ಬಳಿಕ ಮಗುವನ್ನು ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದ್ದು, ಎರಡು ಬಾರಿ ಸ್ಯಾಂಪಲ್‌ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, ಹಾಗಾಗಿ ಮಗುವನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎನ್ನುತ್ತಾರೆ ಡಾ.ರಥಿಕಾ ಶೆಣೈ.

ಲಾಕ್‌ಡೌನ್: 21 ದಿನದಿಂದ ಪುಟ್ಟ ಕಾರಿನಲ್ಲೇ ವಾಸ..!

ಮೊದಲು ಕೊರೋನಾ ಸೋಂಕು ದೃಢಪಟ್ಟಾಗ ಚಿಕಿತ್ಸೆ ನೀಡುವಾಗ ಭಯ ಆವರಿಸಿತ್ತು. ನಂತರ ಮಗು ಚೇತರಿಸುತ್ತಿದ್ದಂತೆ ಸಂತಸ ಆಯಿತು. ಆದರೆ ವೈರಾಣು ಹರಡದಂತೆ ಸಾಕಷ್ಟುಮುನ್ನೆಚ್ಚರಿಕೆ ಕೈಗೊಳ್ಳುವುದೂ ಸವಾಲಾಗಿತ್ತು. ಕೊರೋನಾ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ನಮ್ಮ ಆಡಳಿತ ಮಂಡಳಿ ಅಗತ್ಯ ವೈದ್ಯಕೀಯ ಪರಿಕರಗಳನ್ನು ಒದಗಿಸಿತ್ತು. ಮಗು ಗುಣಮುಖವಾಗಿ ತೆರಳಿರುವುದು ಖುಷಿ ತಂದಿದೆ. ಕೊರೋನಾ ಬಗ್ಗೆ ಯಾರೂ ಭೀತಿ ಪಡುವುದು ಬೇಡ, ಆದರೆ ಸರ್ಕಾರ ಹೇಳಿದ ನಿಯಮಗಳನ್ನು ಮಾತ್ರ ತಪ್ಪದೇ ಪಾಲಿಸಬೇಕು ಎಂಬುದೇ ನನ್ನ ಕಳಕಳಿ ಎಂದು ದೇರಳಕಟ್ಟೆ ಮಕ್ಕಳ ತಜ್ಞೆ ಡಾ.ರಥಿಕಾ ಶೆಣೈ ತಿಳಿಸಿದ್ದಾರೆ.

-ಆತ್ಮಭೂಷಣ್‌

click me!