ಗುದದ್ವಾರದ ಮೂಲಕ ಹೊಟ್ಟೆ ಸೇರಿದ ಲೋಟ, ಕ್ಲಿಷ್ಟಕರ ಆಪರೇಷನ್‌ ಸಕ್ಸಸ್‌, ರೋಗಿಗೆ ಪುರ್ನಜನ್ಮ ನೀಡಿದ ವೈದ್ಯರು..!

By Girish GoudarFirst Published Aug 30, 2022, 4:22 PM IST
Highlights

ಅಪರೂಪದ ಶಸ್ತ್ರ ಚಿಕಿತ್ಸೆಯನ್ನ ನೆರವೇರಿಸಿದ ಕಲಬುರಗಿಯ ನಗರದ ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ 

ಬೀದರ್‌(ಆ.30):  ಗುದದ್ವಾರದಲ್ಲಿ ಲೋಟ ಸೇರಿಸಿಕೊಂಡು ಸಾವು ಬದುಕಿನ ನಡುವೆ ಹೋರಾಡಿದ ವ್ಯಕ್ತಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ವ್ಯದ್ಯರು ಪುರ್ನಜನ್ಮ ನೀಡಿದ್ದಾರೆ. ಹೌದು, ಬೀದರ್‌ ಜಿಲ್ಲೆಯ ಚಿಟಗುಪ್ಪಾದ 38 ವರ್ಷದ ವ್ಯಕ್ತಿಗೆ ಕಲಬುರಗಿಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಅಪರೂಪದ ಶಸ್ತ್ರ ಚಿಕಿತ್ಸೆಯನ್ನ ಕಲಬುರಗಿ ನಗರದ ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ ನೆರವೇರಿಸಿದೆ. 

ಶಸ್ತ್ರ ಚಿಕಿತ್ಸೆಗೊಳಗಾದ ವ್ಯಕ್ತಿ ಮಲವಿಸರ್ಜನೆಯಾಗದಂತೆ ತಡೆದು ಸಾಕಷ್ಟು ಸಮಸ್ಯೆ ಉಂಟು ಮಾಡಿಕೊಂಡಿದ್ದರು. ಕುಡಿದ ನಶೆಯಲ್ಲಿ ವಿಕೃತಿ ಮೆರೆದು ತನ್ನ ಪ್ರಾಣಕ್ಕೆ ಸಂಚಕಾರ ತಂದುಕೊಂಡಿದ್ದರು. ಸ್ಟೀಲ್ ಲೋಟ ಹೊಟ್ಟೆ ಸೇರಿ ಕರುಳಿಗೆ ಡ್ಯಾಮೇಜ್ ಮಾಡಿತ್ತು. ಕರುಳು ಡ್ಯಾಮೇಜ್ ಆಗಿದ್ದರಿಂದ ವಿಪರೀತ ರಕ್ತಸ್ರಾವ ಉಂಟಾಗಿತ್ತು. ಅತೀವ ರಕ್ತಸ್ರಾವದಿಂದ ಕಂಗೆಟ್ಟ ವ್ಯಕ್ತಿ ಬೀದರ್‌ನಿಂದ ಕಲಬುರಗಿಯತ್ತ ಧಾವಿಸಿ ಬಂದಿದ್ದರು. 

ಕಲಬುರಗಿ ಉಸ್ತುವಾರಿ ಸಚಿವರ ಅದೇ ರಾಗ ಅದೇ ಹಾಡು: ಕೆಡಿಪಿ ಸಭೆಗೆ 4 ಗಂಟೆ ತಡವಾಗಿ ಬಂದ ನಿರಾಣಿ..!

ಸನ್ ರೈಸ್ ಆಸ್ಪತ್ರೆಯ ವೈದ್ಯರ ತಂಡ ರಾತ್ರೋ ರಾತ್ರಿ ಸರ್ಜರಿಯ ಪ್ಲ್ಯಾನ್ ಮಾಡಿಕೊಂಡು ತುರ್ತು ಶಸ್ತ್ರ ಚಿಕಿತ್ಸೆ ನೆರವೇರಿಸಿ ಹೊಟ್ಟೆಯಲ್ಲಿನ ಸ್ಟೀಲ್ ಗ್ಲಾಸ್‌ಅನ್ನು ಹೊರತೆಗೆದಿದ್ದಾರೆ. ಜತೆಗೆ ಡ್ಯಾಮೇಜ್ ಆಗಿರುವ ಕರುಳನ್ನು ದುರಸ್ಥಿ ಮಾಡಿ ಆ ವ್ಯಕ್ತಿಗೆ ಮತ್ತೊಮ್ಮೆ ಜೀವ ನೀಡಿದ್ದಾರೆ ವೈದ್ಯರು. 

ಸನ್ ರೈಸ್ ಆಸ್ಪತ್ರೆಯ ವೈದ್ಯರಾದ ಲ್ಯಾಪ್ರೋಸ್ಕೋಪಿಕ್ ಮತ್ತು ಕ್ಯಾನ್ಸರ್ ತಜ್ಞರಾದ ಡಾ. ಅರುಣಕುಮಾರ ಬಾರಡ್ ಹಾಗೂ ಇತರ ವೈದ್ಯರ ತಂಡದಿಂದ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಇದೀಗ ರೋಗಿ ಸಂಪೂರ್ಣ ಗುಣಮುಖವಾಗಿದ್ದು ಸದ್ಯದಲ್ಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ.  ಅಪರೂಪದ ಮತ್ತು ಸವಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಿದ ವೈದ್ಯರ ತಂಡಕ್ಕೆ ಸನ್ ರೈಸ್ ಆಸ್ಪತ್ರೆ ಎಂ.ಡಿ ಸಲ್ಮಾನ್ ಪಟೇಲ್ ಅಭಿನಂದನೆ ಸಲ್ಲಿಸಿದ್ದಾರೆ. 
 

click me!