ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡದೇ ಇರೋದಕ್ಕೆ ಇದೇ ಕಾರಣ !

ಮರಣೋತ್ತರ ಪರೀಕ್ಷೆಯು (Post-mortem) ದೇಹವನ್ನು ಪರೀಕ್ಷಿಸುವ ಒಂದು ರೀತಿಯ ಕಾರ್ಯಾಚರಣೆಯಾಗಿದೆ. ವ್ಯಕ್ತಿ ಮೃತಪಟ್ಟ 11 ಗಂಟೆಯ ಒಳಗೆ ಸಾಮಾನ್ಯವಾಗಿ ಪೋಸ್ಟ್‌ಮಾರ್ಟಂ ಮಾಡುತ್ತಾರೆ. ಆದ್ರೆ ರಾತ್ರಿ (Night) ಹೊತ್ತು ಪೋಸ್ಟ್‌ಮಾರ್ಟಂ ಮಾಡೋದಿಲ್ಲ ಯಾಕೆ ?

Why Postmortem Is Not Done At Night, Know The Reason Why Its Done In Day Time Vin

ಸಾವು (Death) ಅನ್ನೋದು ಮನುಷ್ಯನ ಉಸಿರು (Breath) ನಿಲ್ಲುವ ಪ್ರಕ್ರಿಯೆ. ಸಾವು ಎಂಬುದು ಹೇಗೆ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೋ ಹಾಗೆಯೇ ಸಾವಿನ ನಂತರ ಕೂಡಾ ನಡೆಯುವ ಕ್ರಿಯೆಗಳು ಹಲವು ಸಂಶಯ, ಅನುಮಾನ, ಬೃಹತ್ ಪ್ರಶ್ನೆಗಳನ್ನು ಹುಟ್ಟು ಹಾಕುತ್ತವೆ. ವ್ಯಕ್ತಿಯೊಬ್ಬರು ಅಸಹಜವಾಗಿ ಮರಣ ಹೊಂದಿದಾಗ ಮರಣೋತ್ತರ ಪರೀಕ್ಷೆ (Post-mortem) ಮಾಡುವುದು ಸಾಮಾನ್ಯ. ಸಾವಿಗೆ ಕಾರಣ ಏನೆಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ಆದ್ರೆ ರಾತ್ರಿ (Night) ಹೊತ್ತು ಪೋಸ್ಟ್‌ಮಾರ್ಟಂ ಮಾಡೋದಿಲ್ಲ ಯಾಕೆ ?

ಮರಣೋತ್ತರ ಪರೀಕ್ಷೆಯನ್ನು ಯಾಕೆ ಮಾಡಲಾಗುತ್ತದೆ ? 
ವಾಸ್ತವವಾಗಿ, ಮರಣೋತ್ತರ ಪರೀಕ್ಷೆಯು ದೇಹವನ್ನು ಪರೀಕ್ಷಿಸುವ ಒಂದು ರೀತಿಯ ಕಾರ್ಯಾಚರಣೆಯಾಗಿದೆ. ಅಪಘಾತ, ಕೊಲೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗುತ್ತದೆ. ವ್ಯಕ್ತಿಯ ಸಾವಿಗೆ ನಿಖರವಾದ ಕಾರಣವನ್ನು ಪರಿಶೀಲಿಸಲು ಶವಪರೀಕ್ಷೆಯನ್ನು ನಡೆಸಲಾಗುತ್ತದೆ. ವಿಧಿವಿಜ್ಞಾನ ತಜ್ಞರು ಮರಣೋತ್ತರ ಪರೀಕ್ಷೆ ನಡೆಸುತ್ತಾರೆ. ಇದನ್ನು ಮಾಡುವ ಮುನ್ನ ಕುಟುಂಬದ ಸದಸ್ಯರ ಅನುಮತಿಯನ್ನು ಸಹ ಪಡೆಯಲಾಗುತ್ತದೆ. ಆದರೆ ಕೆಲವು ಪ್ರಕರಣಗಳಲ್ಲಿ, ಪೊಲೀಸ್ ಅಧಿಕಾರಿಗಳು ಕೊಲೆ ಪ್ರಕರಣಗಳಂತಹ ಪೋಸ್ಟ್‌ಮಾರ್ಟಮ್‌ಗಳನ್ನು ಸಹ ಅನುಮತಿಸುತ್ತಾರೆ. 

ಸರ್ಜರಿ ಮಾಡಿಸಿಕೊಂಡ ನಂತರ ಹೃದಯಾಘಾತದಿಂದ ಸಾವನ್ನಪ್ಪಿದ ಬ್ರೆಜಿಲ್ ಸುಂದರಿ

ವ್ಯಕ್ತಿ ಮೃತಪಟ್ಟ 11 ಗಂಟೆಯ ಒಳಗೆ ಸಾಮಾನ್ಯವಾಗಿ ಪೋಸ್ಟ್‌ಮಾರ್ಟಂ ಮಾಡುತ್ತಾರೆ. ಏಕೆಂದರೆ ಬಹಳ ಸಮಯದ ನಂತರ, ಸತ್ತವರ ದೇಹವು ಕೆಲವು ಸಾಮಾನ್ಯ ಬದಲಾವಣೆಗಳಿಗೆ ಒಳಗಾಗಲು ಪ್ರಾರಂಭಿಸುತ್ತದೆ. ಇದು ಶವಪರೀಕ್ಷೆ ವರದಿಯಲ್ಲಿ ಬದಲಾವಣೆಗೆ ಕಾರಣವಾಗಬಹುದು. ಆದರೆ ಎಷ್ಟೇ ತಡವಾದರೂ ಪ್ರಕರಣಗಳಲ್ಲಿ ರಾತ್ರಿ ಶವ ಪರೀಕ್ಷೆ ನಡೆಸಲು ವಿಧಿವಿಜ್ಞಾನ ತಜ್ಞರು ಒಪ್ಪುವುದಿಲ್ಲ.  ರಾಸಾಯನಿಕ ವಿಜ್ಞಾನದಲ್ಲಿ ಜ್ಞಾನ ಉಳ್ಳವರು. ಎಷ್ಟೇ ತುರ್ತು ಪರಿಸ್ಥಿತಿ ಬಂದರೂ ರಾತ್ರಿ ವೇಳೆ ಶವಪರೀಕ್ಷೆ ನಡೆಸುವುದಿಲ್ಲ. 

ಮರಣೋತ್ತರ ಪರೀಕ್ಷೆ ಹೇಗೆ ಮಾಡುತ್ತಾರೆ ?
ಶವಪರೀಕ್ಷೆಗಳನ್ನು ಕಾನೂನು ಅಗತ್ಯಕ್ಕಾಗಿ ಅಥವಾ ವೈದ್ಯಕೀಯ ಉದ್ದೇಶಗಳಿಗಾಗಿ ಮಾಡಲಾಗುತ್ತದೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೆ ತಿಳಿದಿದೆ. ಒಂದು ಸಾವಿಗೆ ಅಪರಾಧ ಕಾರಣವಾಗಿದ್ದರೆ ವೈದ್ಯಕೀಯ ಶವಪರೀಕ್ಷೆ ನಡೆಸಲಾಗುವುದು, ಹಾಗೂ ಒಂದು ವೈದ್ಯಕೀಯ ಅಥವಾ ಶೈಕ್ಷಣಿಕ ಶವಪರೀಕ್ಷೆಯನ್ನು ಸಾವಿಗೆ ವೈದ್ಯಕೀಯ ಕಾರಣಗಳನ್ನು ಕಂಡುಹಿಡಿಯಲು ನಡೆಸಲಾಗುವುದು. ಮಾತ್ರವಲ್ಲ ಇದನ್ನು ಅಪರಿಚಿತ ಸಾವು ಅಥವಾ ಸಂಶೊಧನೆ ಉದ್ದೇಶಗಳಿಗಾಗಿ ನಡೆಸಲಾಗುವುದು. ಶವಪರೀಕ್ಷೆಗಳನ್ನು ವರ್ಗೀಕರಿಸಿ ಕೇವಲ ಬಾಹ್ಯ ಪರೀಕ್ಷೆ ಸಾಕಾಗುವಂತಹ ಪರೀಕ್ಷೆಗಳು ಮತ್ತು ದೇಹವನ್ನು ಛೇದಿಸಿ ಆಂತರಿಕ ಪರೀಕ್ಷೆ ಮಾಡುವಂತಹ ಪರೀಕ್ಷೆಗಳು ಎಂದು ವರ್ಗೀಕರಣ ಮಾಡಬಹುದು. ಕೆಲವು ಪ್ರಕರಣಗಳಲ್ಲಿ ಆಂತರಿಕ ಶವಪರೀಕ್ಷೆ ಮಾಡುವುದಕ್ಕೆ ಮೃತವ್ಯಕ್ತಿಯ ಹತ್ತಿರದ ಸಂಬಂಧಿಗಳ ಅನುಮತಿ ಬೇಕಾಗುತ್ತದೆ. ಆಂತರಿಕ ಶವಪರೀಕ್ಷೆ ಮಾಡಿದ ನಂತರ ಶವಕ್ಕೆ ಹೊಲಿಗೆ ಹಾಕುವ ಮೂಲಕ ಅದರ ಪೂರ್ವಸ್ಥಿತಿಗೆ ತರಲಾಗುವುದು.

ಕೋವಿಡ್ ಎದುರಿಸಿದವರಲ್ಲಿ ಪುರುಷರಿಗಿಂತ ಮಹಿಳಾ ಲೀಡರ್ಸೇ ಸ್ಟ್ರಾಂಗ್!

ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡುವುದಿಲ್ಲ ಯಾಕೆ ?
ರಾತ್ರಿ ಹೊತ್ತು ಪೋಸ್ಟ್‌ಮಾರ್ಟಂ ಮಾಡದೇ ಇರುವುದರ ಹಿಂದೆ ಮುಖ್ಯ ಕಾರಣವಿದೆ. ಇದರ ಹಿಂದಿನ ಕಾರಣವೆಂದರೆ ರಾತ್ರಿಯಲ್ಲಿ ಟ್ಯೂಬ್ ಲೈಟ್‌ಗಳು ಅಥವಾ ಎಲ್‌ಇಡಿಗಳ ಕೃತಕ ಬೆಳಕಿನಲ್ಲಿ ಗಾಯದ ಬಣ್ಣವು ಕೆಂಪು ಬಣ್ಣಕ್ಕಿಂತ ನೇರಳೆ ಬಣ್ಣವನ್ನು ಹೊಂದಿರುತ್ತದೆ ಮತ್ತು ವಿಧಿ ವಿಜ್ಞಾನದಲ್ಲಿ ನೇರಳೆ ಗಾಯದ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

ರಾತ್ರಿ ಹೊತ್ತು ಮರಣೋತ್ತರ ಪರೀಕ್ಷೆ ಮಾಡದಿರೋದಕ್ಕೆ ಇನ್ನೊಂದು ಮುಖ್ಯ ಕಾರಣವೆಂದರೆ, ಅನೇಕ ಧರ್ಮಗಳು ರಾತ್ರಿಯಲ್ಲಿ ಅಂತ್ಯಕ್ರಿಯೆಯನ್ನು ಮಾಡುವುದಿಲ್ಲ ಎಂಬುದಕ್ಕೆ ಧಾರ್ಮಿಕ ಕಾರಣವೂ ಇದೆ, ಆದ್ದರಿಂದ ಅನೇಕ ಜನರು ರಾತ್ರಿಯಲ್ಲಿ ಸತ್ತವರ ಮರಣೋತ್ತರ ಪರೀಕ್ಷೆಯನ್ನು ಮಾಡುವುದಿಲ್ಲ. ಹೀಗಾಗಿ ನ್ಯಾಯಾಲಯವು ಸಹ ರಾತ್ರಿ ಹೊತ್ತು ಶವಪರೀಕ್ಷೆಯನ್ನು ಮಾಡುವುದನ್ನು ನಿರಾಕರಿಸುತ್ತದೆ. 

Latest Videos
Follow Us:
Download App:
  • android
  • ios