
ಬೆಂಗಳೂರು (ಅ.15): ಅನಸ್ತೇಷಿಯಾ ಇಂಜೆಕ್ಷನ್ ನೀಡಿ ವೈದ್ಯೆ ಪತ್ನಿಯನ್ನೇ ಕೊಂದು ಸಹಜ ಸಾವು ಎಂದು ಬಿಂಬಿಸಿ ಕುಟುಂಬಸ್ಥರನ್ನು ನಂಬಿಸಿದ್ದ ವೈದ್ಯ ಮಹೇಂದ್ರ ರೆಡ್ಡಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದರ ನಡುವೆ ತಮ್ಮ ಮಗಳದ್ದು ಸಹಜ ಸಾವಲ್ಲ ಅದು ಕೊಲೆ ಎಂದು ಗೊತ್ತಾದ ಬಳಿಕ ವೈದ್ಯೆ ಕೃತಿಕಾ ರೆಡ್ಡಿ ಅವರ ತಂದೆ ಕುಸಿದುಹೋಗಿದ್ದಾರೆ. ಡಾ. ಮಹೇಂದ್ರ ರೆಡ್ಡಿ ಜನರಲ್ ಸರ್ಜನ್ ಆಗಿದ್ದು ಬಂಧಿತ ಆರೋಪಿ. ಪತ್ನಿಗೆ ಅತಿಯಾಗಿ ಅನಾರೋಗ್ಯ ಸಮಸ್ಯೆ ಇದ್ದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ ಅನ್ನೋದು ತನಿಖೆಯ ವೇಳೆ ಗೊತ್ತಾಗಿದೆ.
ಈ ನಡುವೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿರುವ ಕೃತಿಕಾ ರೆಡ್ಡಿ ಅವರ ತಂದೆ ಮುನಿರೆಡ್ಡಿ, ಮಗಳಿದ್ದ ಮಾರತಹಳ್ಳಿಯ ಮನೆಯನ್ನು ಇಸ್ಕಾನ್‌ಗೆ ದಾಣ ಮಾಡುವುದಾಗಿ ಘೋಷಿಸಿದ್ದಾರೆ. ಈ ಮನೆಯಲ್ಲಿ ಆಕೆಯ ನೆನಪು ಅತಿಯಾಗಿ ಕಾಡುತ್ತಿತ್ತು. ಅದಕ್ಕಾಗಿ ಈ ಮನೆಯನ್ನು ಇಸ್ಕಾನ್ ದೇವಸ್ಥಾನಕ್ಕೆ ದಾನ ಮಾಡಲು ತೀರ್ಮಾನ ಮಾಡಿದ್ದೇವೆ. ದೊಡ್ಡ ಮಗಳ ಸಮ್ಮತಿ ಪಡೆದು ಈ ನಿರ್ಧಾರ ಮಾಡಿದ್ದೇವೆ. ಕೃತಿಕಾಳನ್ನು ಕೊಲೆ ಮಾಡಿದ ಮಹೇಂದ್ರನಿಗೆ ಶಿಕ್ಷೆ ಆಗಬೇಕು. ಈ ರೀತಿ ಘಟನೆ ಯಾವ ಹೆಣ್ಮಗಳಿಗೂ ಆಗಬಾರದು ಎಂದು ಕಣ್ಣೀರಿಟ್ಟಿದ್ದಾರೆ.
ದಿವಂಗತ ನಟ ನವೀನ್ ಮಯೂರ್ ಕುಟುಂಬದಲ್ಲಿ ಮತ್ತೊಂದು ಅಕಾಲಿಕ ಸಾವು, ತಮ್ಮ ಶ್ರೇಯಸ್ ಕೂಡ ನಿಧನ!
ಆಕೆ ಸಾವು ಕಂಡಾಗ ನಮಗೆ ಯಾವುದೇ ಅನುಮಾನ ಬಂದಿರಲಿಲ್ಲ. ಆ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆವು. ಅಲ್ಲಿ ಡೆಡ್ ಅಂತ ಅವರು ಹೇಳಿದರು. ಆದಾದ ಮೇಲೆ ಮರಣೋತ್ತರ ಪರೀಕ್ಷೆ ಮಾಡಲಾಗಿತ್ತು. ಆಗ ಪ್ರೈಮರಿಯಲ್ಲಿ ಏನು ಗೊತ್ತಾಗಿಲ್ಲ. ಈಗ ಎಫ್ ಎಸ್ ಎಲ್ ವರದಿ ಬಂದಿದೆ. ಅದರಲ್ಲಿ ಡ್ರಗ್ ಇಂಜೆಕ್ಟ್ ಮಾಡಿ ಕೊಲೆ ಮಾಡಲಾಗಿದೆ ಎನ್ನುವುದು ಗೊತ್ತಾಗಿದೆ. ಕಾಸ್ ಆಫ್ ಡೆತ್ ಡ್ಯೂ ಟು ಅನಸ್ತೇಷಿಯಾ ಅಂತ ಬಂದಿದೆ ಎಂದು ಹೇಳಿದ್ದಾರೆ.
ಇಬ್ಬರ ನಡುವೆ ಗಲಾಟೆ ಇದ್ದಿರಲಿಲ್ಲ. ನನಗಂತೂ ಮಗಳು ಗಲಾಟೆ ಬಗ್ಗೆ ಏನು ಹೇಳಿಲ್ಲ. ಇದು ಅರೆಂಜ್ ಮ್ಯಾರೇಜ್ . ಗುಂಜೂರು ಅಂತ ಊರಿದೆ ಅಲ್ಲಿಗೆ ಮಗಳನ್ನು ಕೊಟ್ಟಿದ್ದೆವು. ಕೊಲೆಗೆ ಕಾರಣ ಏನು ಅನ್ನೋದು ಗೊತ್ತಾಗಿಲ್ಲ. ಎಫ್‌ಎಸ್‌ಎಲ್ ರಿಪೋರ್ಟ್ ಬರೋ ತನಕ ಗೊತ್ತೆ ಆಗಲಿಲ್ಲ. ನನಗೆ ಏನು ಗೊತ್ತಿಲ್ಲ ಅಂತ ಪೊಲೀಸರ ಮುಂದೆ ಹೇಳುತ್ತಿದ್ದಾನೆ. ಪೊಲೀಸ್ ವರದಿ ಏನು ಬರುತ್ತೋ ಗೊತ್ತಿಲ್ಲ ನೋಡಬೇಕು ಎಂದು ಹೇಳಿದ್ದಾರೆ.
ನನ್ನ ಮಗಳಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಿರಲಿಲ್ಲ. ಆಕೆ ಆರೋಗ್ಯವಾಗಿ ಇದ್ದಳು. ನನ್ನ ಮಗಳು ನಾಲ್ಕು ಪದವಿ ಪಡೆದುಕೊಂಡಿದ್ದಾಳೆ. ಆರೋಗ್ಯ ಸಮಸ್ಯೆ ಇದ್ರೆ ಅಷ್ಟೆಲ್ಲಾ ಓದೋಕೆ ಸಾಧ್ಯ ಆಗ್ತಾ ಇರಲಿಲ್ಲ. ಯಾವತ್ತು ಒಂದಿನ ರಜೆ ಕೂಡ ಆಕೆ ಹಾಕಿರಲಿಲ್ಲ. 99% ಅಟೆಂಡೆನ್ಸ್ ಇತ್ತು ಆರೋಗ್ಯವಾಗಿ ಚೆನ್ನಾಗಿ ಇದ್ದಳು. ಕೊಲೆಗೆ ಕಾರಣ ಗೊತ್ತಿಲ್ಲ. ಅದನ್ನು ಆತ ಹೇಳ್ತಿಲ್ಲ ಇದು ಸಂಚು ಮಾಡಿ ಕೊಲೆ ಮಾಡಿರಬಹುದು. ಮೊದಲಿಗೆ ಮರಣೋತ್ತರ ಪರೀಕ್ಷೆಯಲ್ಲಿ ಏನು ಗೊತ್ತಾಗಿಲ್ಲ. ಎಫ್ ಎಸ್ ಎಲ್ ಗೆ ಸ್ಯಾಂಪಲ್ ಅನ್ನು ಕಳುಹಿಸಲಾಗಿತ್ತು. ಈಗ ಕೊಲೆ ವಿಚಾರ ಗೊತ್ತಾಗಿದೆ. ಡ್ರಗ್ ಇಂಜೆಕ್ಟ್ ಆಗಿ ಕೊಲೆ ಮಾಡಲಾಗಿದೆ ಅಂತ ಗೊತ್ತಾಗಿದೆ. ಡಾಕ್ಟರ್ ಇನ್ನೊಬ್ಬ ಡಾಕ್ಟರ್ ನ ಕೊಲೆ ಮಾಡಿರೋದು ಇದೆ ಮೊದಲು ಅನ್ಸುತ್ತೆ. ಇದುವರೆಗೂ ಪೊಲೀಸರಿಗೂ ಸಹ ಆತ ಕಾರಣ ಹೇಳಿಲ್ಲ ಎಂದಿದ್ದಾರೆ.