ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

Kannadaprabha News   | Asianet News
Published : May 10, 2020, 07:35 AM ISTUpdated : May 11, 2020, 05:37 PM IST
ಕಾರ್ಕಳದ ವೈದ್ಯನಿಗೆ ಅಮೆರಿಕದಲ್ಲಿ ಸೇವಾ ಗೌರವ

ಸಾರಾಂಶ

ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಟಾಪ್‌ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪೀಡಿತ ರೋಗಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್‌ ಅಡಿಗ ಅವರಿಗೆ ಅಮೆರಿಕ ಸರ್ಕಾರ ಅಲ್ಲಿನ ಗೌರವದ ಸಂಭ್ರಮವನ್ನು ನೀಡಿದೆ.  

ಉಡುಪಿ(ಮೇ 10): ಜಗತ್ತಿನಾದ್ಯಂತ ವ್ಯಾಪಿಸಿರುವ ಕೋವಿಡ್‌-19 ಸೋಂಕು ಹಿನ್ನೆಲೆಯಲ್ಲಿ ಅಮೆರಿಕದಲ್ಲಿನ ಟಾಪ್‌ 9 ಆಸ್ಪತ್ರೆಗಳ ಪೈಕಿ 3 ಆಸ್ಪತ್ರೆಗಳಲ್ಲಿ ಕೊರೋನಾ ವೈರಸ್‌ ಪೀಡಿತ ರೋಗಿ ಆಸ್ಪತ್ರೆಗಳ ತುರ್ತು ಚಿಕಿತ್ಸಾ ಘಟಕದಲ್ಲಿ ಸೇವೆಗೈಯುತ್ತಿರುವ ಕಾರ್ಕಳದ ವೈದ್ಯ ಅವಿನಾಶ್‌ ಅಡಿಗ ಅವರಿಗೆ ಅಮೆರಿಕ ಸರ್ಕಾರ ಅಲ್ಲಿನ ಗೌರವದ ಸಂಭ್ರಮವನ್ನು ನೀಡಿದೆ.

"

ಇತ್ತೀಚೆಗಷ್ಟೇ ಮೈಸೂರಿನ ವೈದ್ಯರೊಬ್ಬರಿಗೆ ಇದೇ ತರದ ಗೌರವವನ್ನು ಅಮೆರಿಕ ಸರ್ಕಾರ ಸಲ್ಲಿಸಿತ್ತು. ಅವಿನಾಶ್‌ ಅಡಿಗ ಅವರು ಕಾರ್ಕಳದಲ್ಲಿ ಹುಟ್ಟಿಭಾರತದಲ್ಲೇ ವೈದ್ಯಕೀಯ ಶಿಕ್ಷಣ ಪಡೆದು ತಜ್ಞ ವೈದ್ಯರಾಗಿ ಕಳೆದ ಎಂಟು ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅಮೆರಿಕಾದ ನ್ಯೂಜೆರ್ಸಿಯ ಆಸ್ಪತ್ರೆಯಲ್ಲಿ ಯುವ ವೈದ್ಯರಾಗಿದ್ದಾರೆ. ಕೊರೋನಾ ವೈರಸ್‌ನಿಂದ ತತ್ತರಿಸಿರುವ ಅಮೆರಿಕದಲ್ಲಿ ಕೊರೋನಾ ಪೀಡಿತರ ಸೇವೆಯಲ್ಲಿ ಸದ್ಯ ನಿರತರಾಗಿರುವ ಅವರು ಯಾವುದೇ ಅಂಜಿಕೆ ಭಯವಿಲ್ಲದೆ ರೋಗಿಗಳಿಗೆ ನೀಡಿದ ಸೇವೆಗಾಗಿ ಈ ಗೌರವ ಪ್ರಾಪ್ತವಾಗಿದೆ.

ಪಾಸ್ ಇಲ್ಲ, ಮಾಸ್ಕ್ ಇಲ್ಲ, ಲಾಕ್‌ಡೌನ್ ನಿಯಮ ಉಲ್ಲಂಘಿಸಿದ ಬಿಜೆಪಿ ನಾಯಕ ಮೇಲೆ ಕೇಸ್!

ವೈದ್ಯ ಅವಿನಾಶ್‌ ಅಡಿಗ ಅವರ ಹೆತ್ತವರು ಕಾರ್ಕಳದಲ್ಲಿ ವಾಸವಿದ್ದು ಅಮೆರಿಕದಲ್ಲಿ ಮಗನ ಸೇವೆಗೆ ಹಾಗೂ ಸಂದ ಗೌರವಕ್ಕೆ ತೀವ್ರ ಹರ್ಷ ವ್ಯಕ್ತಪಡಿಸಿದ್ದಾರೆ. ಎಂ. ಗೋವಿಂದ ಅಡಿಗ ಹಾಗೂ ಶಕುಂತಲಾ ದಂಪತಿಯ ಮೊದಲ ಮಗನಾದ ಅವಿನಾಶ್‌ ಅಡಿಗ ತನ್ನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಕಾರ್ಕಳದ ಕೆಎಂಇಎಸ್‌ ಶಿಕ್ಷಣ ಸಂಸ್ಥೆಯಲ್ಲಿ ಮುಗಿಸಿ ನಿಟ್ಟೆಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಮುಗಿಸಿ ಬಳ್ಳಾರಿ ವಿಎಂಐಎಸ್‌ ಸರ್ಕಾರಿ ಮೆಡಿಕಲ್‌ ಕಾಲೇಜ್‌ನಲ್ಲಿ ಎಂ.ಬಿ.ಬಿ.ಎಸ್‌ ವೈದ್ಯಕೀಯ ಶಿಕ್ಷಣ ಪಡೆದು ಬಳಿಕ ರಾಜಸ್ಥಾನದ ಉದಯಪುರದ ರವೀಂದ್ರನಾಥ ಟಾಗೋರ್‌ ಮೆಮೋರಿಯಲ್‌ ಕಾಲೇಜಿನಲ್ಲಿ ವೈದ್ಯಕೀಯ ಎಂಡಿ ಪೂರ್ಣಗೊಳಿಸಿದರು. ಬಳಿಕ ಅಮೆರಿಕದ ಟೆP್ಸ…ಟೆಕ್‌ ಯುನಿವರ್ಸಿಟಿ ಆರೋಗ್ಯ ವಿಜ್ಞಾನ ಕೇಂದ್ರದಲ್ಲಿ ಎಂಡಿ ಇಂಟರ್‌ನ್ಯಾಶನಲ್‌ ಮೆಡಿಸಿನ್‌ ಅಧ್ಯಯನ ಮಾಡಿ ನ್ಯೂಯಾರ್ಕ್ನ ಲಾಂಗ್‌ ಗೋನ್‌ ಆರೋಗ್ಯ ಕೇಂದ್ರದಲ್ಲಿ ನೆಪ್ರೋಲಾಜಿ (ಮೂತ್ರಪಿಂಡ ಶಾಸ್ತ್ರ) ಫೆಲೋಶಿಪ್‌ ಮಾಡಿದ್ದಾರೆ. ಇದೀಗ ನ್ಯೂಜೆರ್ಸಿ ಆರೋಗ್ಯ ಕೇಂದ್ರದಲ್ಲಿ ತುರ್ತು ವಿಮರ್ಶಾತ್ಮಕ ಆರೈಕೆ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪತ್ನಿ ಮಕ್ಕಳ ನೋಡಲು ಟ್ರಕ್‌ನಲ್ಲಿ ಬಂದ ಬಾಗಲಕೋಟೆ ಕಾರ್ಮಿಕ!

ಅಮೆರಿಕದಲ್ಲಿ ಕೊರೋನಾ ಸಂದರ್ಭದಲ್ಲಿ ಮೂರು ಆಸ್ಪತ್ರೆಗಳಲ್ಲಿ ಅವಿರತ ಸೇವೆ ನೀಡದ್ದು ಮನೆಯಲ್ಲಿ 1 ವರ್ಷದ ಮಗು ಇದ್ದರೂ ತನ್ನ ಕರ್ತವ್ಯ ಮರೆಯದೆ ಸೇವೆಗೆ ಒತ್ತು ನೀಡಿದ್ದರು. ಈವರೆಗೆ ಅಮೆರಿಕದ ಟಾಪ್‌ 9 ಆಸ್ಪತ್ರೆಯಲ್ಲಿ ಸುಮಾರು 1500 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಿದ್ದು ಈ ಹಿನ್ನಲೆ ಡ್ರೈವ್‌ ಆಫ್‌ ಆನರ್‌ ನೀಡಿ ವೈದ್ಯ ಅವಿನಾಶ್‌ ಅಡಿಗ ಅವರ ಮನೆಯ ಮುಂದೆ ಅಮೆರಿಕನ್ನರು ತಮ್ಮ ತಮ್ಮ ವಾಹನ ಮೂಲಕ ಸಾಗಿ ಕೃತಜ್ಞತೆಯ ಸಲ್ಲಿಸಿದ್ದಾರೆ.

ಅಮೆರಿಕದ ಆರ್ಥಿಕತೆ ಕುಸಿಯುವ ಭೀತಿಯಿಂದ ಸರಿಯಾಗಿ ಲಾಕ್‌ಡೌನ್‌ ಮಾಡದ ಕಾರಣ ಕೊರೋನಾ ಸೋಂಕು ಹೆಚ್ಚಲು ಕಾರಣವಾಗಿದೆ ಎಂದು ವೈದ್ಯ ಅವಿನಾಶ್‌ ಅಡಿಗ ತಿಳಿಸಿದ್ದಾರೆ.

ಮತ್ತೆ ಕೊರೋನಾ ಅಟ್ಟಹಾಸ: ಬಂಟ್ವಾಳದ ಮೂವರಿಗೆ ದೃಢ

ಅವರ ತಂದೆ ಎಂ. ಗೋವಿಂದ ಅಡಿಗ ಅವರು ಮೊರಾರ್ಜಿ ಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತನ್ನ ಮಗನ ಕಾರ್ಯಕ್ಕೆ ಅಮೆರಿಕಾದಲ್ಲಿ ಡ್ರೈವ್‌ ಆಫ್‌ ಆನರ್‌ ನೀಡಿರುವುದು ತುಂಬಾ ಖುಷಿಯಾಗಿದೆ ಎಂದು ಕನ್ನಡಪ್ರಭದೊಂದಿಗೆ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

-ಬಿ. ಸಂಪತ್‌ ನಾಯಕ್‌ ಕಾರ್ಕಳ

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!