ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಿರುವ ರಾಜನಹಳ್ಳಿ ಶಿವಕುಮಾರ್ ಅವರು ತಮ್ಮ ನಡೆಯನ್ನು ತಿದ್ದುಕೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಬಿ.ಜಿ. ರಮೇಶ್ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ (ಜ.03) ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಿರುವ ರಾಜನಹಳ್ಳಿ ಶಿವಕುಮಾರ್ ಅವರು ತಮ್ಮ ನಡೆಯನ್ನು ತಿದ್ದುಕೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಅಖಿಲ ಭಾರತ ವೀರಶೈವ ಮಹಾಸಭಾ ದಾವಣಗೆರೆ ಜಿಲ್ಲೆಯ ಯುವ ಮುಖಂಡ ಬಿ.ಜಿ. ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ. ಇದು ಅವರ ಘನತೆಗೆ ತಕ್ಕದ್ದಲ್ಲ. ಶಾಮನೂರು ಶಿವಶಂಕರಪ್ಪ ಅವರ ಹಿರಿಯತನ ನೋಡಿ ಮಾತನಾಡಬೇಕು. ಸಾಮಾಜಿಕ ಜೀವನದಲ್ಲಿ ರಾಜಕೀಯ ಬೇರೆ, ಧರ್ಮವೆ ಬೇರೆ, ಕಾರಣ ಈ ನಿಟ್ಟಿನಲ್ಲಿ ಯಾರೇ ಮಾತನಾಡಲಿ ಜಾಗೃತೆಯಿಂದ ಮಾತನಾಡಬೇಕು. ಇಲ್ಲವಾದಲ್ಲಿ ಅದರ ಪರಿಣಾಮ ಬೇರೆ ರೀತಿಯಲ್ಲಿ ಕೊಡುತ್ತವೆ. ಅಲ್ಲದೆ ತನ್ನ ಇತಿಮಿತಿಯಲ್ಲಿ ಇರಲಿ. ಇಲ್ಲವಾದರೆ ಪರಿಣಾಮ ಸರಿ ಇರಲ್ಲ ಎಂದು ಹೇಳಿದರು.
ಕುಡಿವ ನೀರು ಸರಬರಾಜು ಕಾಮಗಾರಿ ಶೀಘ್ರ ಪೂರ್ಣ: ಶಾಸಕ ರೇಣುಕಾಚಾರ್ಯ
ಕೆ.ಜಿ.ಶಿವಕುಮಾರ್ ಮಾತನಾಡಿ, ರಾಜನಹಳ್ಳಿ ಶಿವಕುಮಾರ್ ಬಿಸಿ ರಕ್ತದ ಯುವಕ. ಅವರು ಇನ್ನೂ ರಾಜಕೀಯವಾಗಿ ಬಹಳ ಬೆಳೆಯ ಬೇಕಾಗಿದೆ. ಮೂಳೆ ಇಲ್ಲದ ನಾಲಿಗೆ ಎಂದು ಸುಮ್ಮನೆ ಹರಿಯ ಬಿಟ್ಟರೆ ಅದರ ಪರಿಣಾಮ ಸರಿ ಇರುವುದಿಲ್ಲ. ರಾಜಕೀಯವಾಗು ಇನ್ನು ಬೆಳೆಯಬೇಕಾದ ಅವರು ಉತ್ತಮ ನಡತೆ ಇಟ್ಟುಕೊಳ್ಳಬೇಕು. ಇಂತಹ ಹೇಳಿಕೆಗಳು ಮತ್ತೆ ಮರುಕಳಿಸಿದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ. ನಮ್ಮ ಸ್ಥಾನಕ್ಕೆ ಅರ್ಹತೆ ಇಲ್ಲದವರು ರಾಜಕೀಯಕ್ಕೆ ಬಂದರೆ ಈ ಅನರ್ಥವಾಗಿ ಈ ರೀತಿ ಮಾತನಾಡುತ್ತಾರೆ. ಯಾವುದೇ ಪ್ರಕರಣವಾಗಲಿ ಅಧಿಕಾರಿಗಳು ಕಾನೂನು ರೀತಿ ಕ್ರಮ ಕೈಗೊಳ್ಳುತ್ತಾರೆ. ಕಾರಣ ಇದರಲ್ಲಿ ಹೇಳಿಕೆ ಸರಿಯಲ್ಲ ಎಂದರು.
ಈ ವೇಳೆ ಮುಖಂಡರಾದ ಬುಳ್ಳಾಪುರದ ವಿಶ್ವನಾಥ್, ಕೊರಟಿಕೆರೆ ಶ್ರೀನಿವಾಸ್ ಇದ್ದರು.