ಇಂದು ಇತಿಹಾಸ ತಿರುಚುವ ಹುನ್ನಾರ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಬುದ್ದ, ಬಸವ, ಅಂಬೇಡ್ಕರ ಹಾಕಿಕೊಟ್ಟ ಮಾರ್ಗದಲ್ಲಿ ಸಚಿವ ಸತೀಶ ಜಾರಕಿಹೊಳಿ ರಾಜ್ಯಾದ್ಯಂತ ಅವರ ತತ್ವಗಳನ್ನು ಪ್ರಚಾರಪಡಿಸಿ ಇತಿಹಾಸ ಸೃಷ್ಟಿಸಿ ಕ್ರಾಂತಿ ಮಾಡುತ್ತಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಸತೀಶ ಜಾರಕಿಹೊಳಿಯಂತಹ ಅಪ್ಪಟ ರಾಜಕಾರಣಿ ಈ ದೇಶಕ್ಕೆ ತುಂಬಾ ಅವಶ್ಯಕತೆಯಿದೆ: ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಸ ಸ್ವಾಮಿಗಳು
ಯಮಕನಮರಡಿ(ಜ.05): ಜಾತಿ ಮತ್ತು ಧರ್ಮದ ಹೆಸರಲ್ಲಿ ಸಮಾಜದಲ್ಲಿ ಭೇದ - ಭಾವ ಹುಟ್ಟುಹಾಕಿ ರಾಜಕೀಯ ಮಾಡುವ ರಾಜಕಾರಣಿಗಳಿಂದ ಎಚ್ಚರವಿರಬೇಕು ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಸ ಸ್ವಾಮಿಗಳು ಹೇಳಿದರು.
ಬುಧವಾರ ಶೌರ್ಯ ದಿನದ ನಿಮಿತ್ತ ಹಮ್ಮಿಕೊಂಡ ಬೃಹತ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇಂದು ಇತಿಹಾಸ ತಿರುಚುವ ಹುನ್ನಾರ ನಡೆಯುತ್ತಿರುವುದು ಕಳವಳಕಾರಿ ಸಂಗತಿ. ಬುದ್ದ, ಬಸವ, ಅಂಬೇಡ್ಕರ ಹಾಕಿಕೊಟ್ಟ ಮಾರ್ಗದಲ್ಲಿ ಸಚಿವ ಸತೀಶ ಜಾರಕಿಹೊಳಿ ರಾಜ್ಯಾದ್ಯಂತ ಅವರ ತತ್ವಗಳನ್ನು ಪ್ರಚಾರಪಡಿಸಿ ಇತಿಹಾಸ ಸೃಷ್ಟಿಸಿ ಕ್ರಾಂತಿ ಮಾಡುತ್ತಿದ್ದಾರೆ. ವೈಚಾರಿಕ ಚಿಂತನೆಯುಳ್ಳ ಸತೀಶ ಜಾರಕಿಹೊಳಿಯಂತಹ ಅಪ್ಪಟ ರಾಜಕಾರಣಿ ಈ ದೇಶಕ್ಕೆ ತುಂಬಾ ಅವಶ್ಯಕತೆಯಿದೆ. ಸ್ವಾಭಿಮಾನದ ಸೂಜಿಗಳಾಗಬೇಕು ಸ್ವಾರ್ಥಕ್ಕಾಗಿ ಸಮಾಜವನ್ನು ಕತ್ತರಿಸುವ ಕತ್ತರಿಗಳಾಗಬಾರದು ಎಂದು ಹೇಳಿದರು.
ಯುವಧುರೀಣ ರಾಹುಲ ಜಾರಕಿಹೊಳಿ ಮಾತನಾಡಿ, ಅಂದು ಅಸ್ಪೃಶ್ಯತೆಯ ವಿರುದ್ಧದ ಭೀಮಾ ಕೋರೆಗಾಂವ ಯುದ್ದದಲ್ಲಿ ಹೋರಾಡಿ ವಿಜಯಶಾಲಿಯಾದ ಮಹಾರ ಜನಾಂಗದ ಧೈರ್ಯ ಸಾಹಸ ಮೆಚ್ಚತಕ್ಕದ್ದು. ಡಾ.ಬಾಬಾಸಾಹೇಬ ಅಂಬೇಡ್ಕರರ ಸಂವಿಧಾನ ಎಲ್ಲರಿಗೆ ಸಮಾನತೆ, ಮತದಾನ ಹಕ್ಕು, ವಾಕ್ ಸ್ವಾತಂತ್ರ್ಯ ನೀಡಿದೆ. ನಾವು ಸಂವಿಧಾನ ರಕ್ಷಣೆ ಮಾಡುವುದು ಇಂದು ಅನಿವಾರ್ಯವಾಗಿದೆ. ದಲಿತರಿಗೆ ಉತ್ತಮ ಶಿಕ್ಷಣ ಸಿಗಲಿ ಎನ್ನುವ ನಿಟ್ಟಿನಲ್ಲಿ ಸಾವಿತ್ರಿಬಾಯಿ ಪುಲೆಯವರು ಶೈಕ್ಷಣಿಕ ರಂಗದಲ್ಲಿ ಸಲ್ಲಿಸಿದ ಸೇವೆಯು ಪ್ರಶಂಸನೀಯ. ಸಾಮಾಜಿಕ ಶೈಕ್ಷಣಿಕ ಕ್ರಾಂತಿ ಮಾಡಿದ ಆಧುನಿಕ ಶಿಕ್ಷಕಿ ಸಾವಿತ್ರಿಬಾಯಿ ಪುಲೆಯವರನ್ನು ಸ್ಮರಸಿ ಅವರ ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ನಡೆದು ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಚುನಾವಣೆ ಬಂದಾಗ ಮಾತ್ರ ದಲಿತರನ್ನು ಓಲೈಸಿ ಮತ ಪಡೆಯುವ ರಾಜಕಾರಣಿಗಳಿಂದ ದೂರವಿರಬೇಕು. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಶೋಷಿತರ ಪರ ಧ್ವನಿ ಎತ್ತಿ ಬುದ್ದ, ಬಸವ, ಅಂಬೇಡ್ಕರ ಹಾಕಿಕೊಟ್ಟ ತತ್ವದಡಿ ನಡೆಯುವ ವೈಚಾರಿಕೆ ರಾಜಕಾರಣಿಗಳ ಅವಶ್ಯಕತೆಯಿದೆ ಎಂದರು.
ಮಾಜಿ ಸಚಿವ ಎ.ಬಿ.ಪಾಟೀಲ ಮಾತನಾಡಿದರು. ಯಮಕನಮರಡಿ ಶ್ರೀ ರಾಚೋಟಿ ಸ್ವಾಮಿಗಳು, ಹತ್ತರಗಿ ಕಾರಿಮಠದ ಶ್ರೀ ಗುರುಸಿದ್ದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಚಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಸಿದ್ದಯ್ಯ ಮಾತನಾಡಿದರು.
ಅಂಬೇಡ್ಕರ ಜನಜಾಗೃತಿ ವೇದಿಕೆ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ ರಾಸಿಂಗೆ, ಜಿಲ್ಲಾಧ್ಯಕ್ಷ ದೀಲಿಪ ಹೊಸಮನಿ, ರವೀಂದ್ರ ಜಿಂಡ್ರಾಳಿ, ಕಿರಣಸಿಂಗ ರಜಪೂತ, ಈರಣ್ಣಾ ಬಿಸಿರೊಟ್ಟಿ, ಯಮಕನಮರಡಿ ಗ್ರಾಪಂ ಅಧ್ಯಕ್ಷ ಆಸ್ಮಾ ಫನಿಬಂದ, ಯಾದಗೂಡ ಗ್ರಾಪಂ ಅಧ್ಯಕ್ಷ ಶ್ರೀದೇವಿ ಸುರೇಶ ಲೈನದಾರ, ಮೌನೇಶ ಪೂತದಾರ, ಹಾರೂನ ಮೌಲಾನಾ, ಶ್ರೀನಿವಾಸ ವ್ಯಾಪಾರಿ, ಸೋಮೇಶ ಜವನ್ನವರ, ಯಮನಪ್ಪಾ ಗಿರೆನ್ನವರ, ಕೆ ವೆಂಕಟೇಶ್, ಲಕ್ಷ್ಮಣ್ ಹುಲಿ, ಕಿರಣ್ ಕೋಳಿ, ಪಿಂಟ್ಟು ಸೂರ್ಯವಂಶಿ, ಕೆಂಪಣ್ಣಾ ಶಿರಹಟ್ಟಿ, ಬಾಹುಸಾಹೇಬ ಪಾಂಡ್ರೆ, ಮಂಜುನಾಥ ಪಡದಾರ, ಚಿದಾನಂದ ಹಿರೆಕೆಚ್ನನವರ, ಅಜಿತ್ ಹೆಗಡೆ ಸೇರಿ ಹಲವರು ಇದ್ದರು. ರಾಮಕೃಷ್ಣ ಪಾಂಗುಡೆ ಸ್ವಾಗತಿಸಿ ನಿರೂಪಿಸಿದರು. ನ್ಯಾಯವಾದಿ ಆನಂದ ಕೆಳಗಡೆ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಮೂರು ವರ್ಷಗಳಲ್ಲಿ ಈ ವೇದಿಕೆಯಿಂದ ಮಾಡಿರುವ ಕಾರ್ಯಕ್ರಮಗಳ ವಿವರಗಳನ್ನು ವಿವರಿಸಿದರು.