‘ಪರ ವಿರೋಧದ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ’

Suvarna News   | stockphoto
Published : Mar 01, 2020, 02:49 PM IST
‘ಪರ ವಿರೋಧದ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ’

ಸಾರಾಂಶ

ನಿತ್ಯ ಪರ ವಿರೋಧದ ನಡುವೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿ ಅಪಮಾನಕ್ಕೆ ಒಳಗಾಗುತ್ತಿದ್ದಾರೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ. 

ಶಿವಮೊಗ್ಗ [ಮಾ.01]:  ದೊರೆಸ್ವಾಮಿಯಾಗಿ ತಮ್ಮ ನಿಲುವು ಪ್ರಕಟ ಮಾಡುತ್ತಾರೋ? ಸ್ವಾತಂತ್ರ್ಯ ಹೋರಾಟಗಾರ ರಾಗಿ ಪ್ರಕಟ ಮಾಡುತ್ತಾರೋ ಅವರೇ ಸ್ಪಷ್ಟ ಪಡಿಸ ಬೇಕು.  ಶಾಸಕ ಬಸವನ ಗೌಡ ಯತ್ನಾಳ್ ಹೇಳಿದ ಕೆಲ ಪದ ಬಳಕೆ ಅಷ್ಟು ಸಮಂಜಸ ಆಗಿಲ್ಲ. ಎಲ್ಲರಿಗೂ ಈ ವಿವಾದ ಇಲ್ಲಿಗೆ ನಿಲ್ಲಿಸುವಂತೆ ಮನವಿ ಮಾಡುತ್ತೇನೆಂದು  ಎಂಎಲ್ಸಿ ಅಯನೂರು ಮಂಜುನಾಥ ಹೇಳಿಕೆ ನೀಡಿದ್ದಾರೆ. 

ಶಿವಮೊಗ್ಗದಲ್ಲಿ ಮಾತನಾಡಿದ ಆಯನೂರು ಮಂಜುನಾಥ್,  ಯತ್ನಾಳ್ ಏನಾದರೂ ಹೇಳ್ತಾ ಇರ್ತಾರೆ. ಹಾಗೆಯೇ ದೊರೆಸ್ವಾಮಿ ಶತಾಯುಷಿ ಇದ್ದಾರೆ. ಇವರಿಬ್ಬರ ಬಗ್ಗೆ ಪರ ವಿರೋಧ ಹೇಳಿಕೆ ನಡುವೆ ದೊರೆಸ್ವಾಮಿ ನಿತ್ಯ ಅಪಮಾನಕ್ಕೆ ಒಳಗಾಗುತ್ತಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ತಮ್ಮ ಕ್ರೆಡಿಟ್‌ ಅನ್ನು ಎಲ್ಲದಕ್ಕೂ ಬಳಸ ಬಾರದು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿವೇಶನದಲ್ಲಿ ಮಾತನಾಡಲು  ಸಿದ್ದರಾಮಯ್ಯ ನವರಿಗೆ ಬೇರೆ ವಿಷಯವೇ ಸಿಕ್ಕಿಲ್ಲ. ಅದಕ್ಕೆ ಯತ್ನಾಳ ಹೇಳಿಕೆ ವಿಷಯ ಕುರಿತು ಅಧಿವೇಶನದಲ್ಲಿ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಜೀವಂತವಾಗಿ ಇರೋಕೆ ಈ ವಿಷಯ ತೆಗೆದುಕೊಂಡಿದ್ದಾರೆ ಎಂದು ಆಯನೂರು ಮಂಜುನಾಥ್ ಹೇಳಿದರು. 

ಸಿದ್ದರಾಮಯ್ಯ ಶಾಸಕ, ಸಿಎಂ ಆದರೂ ಉತ್ತಮ ಪಾರ್ಲಿಮೆಂಟರಿಯನ್ ಆಗಲಿಲ್ಲ. ವಿಪಕ್ಷದವರು ಹೇಳುವಂತೆ ಸದ್ಯ ಸಂವಿಧಾನದ ತಿದ್ದುಪಡಿ ಮಾಡುವ ಪ್ರಸ್ತಾಪ ಇಲ್ಲ. ಕೇವಲ ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದೆಯಷ್ಟೇ ಎಂದು ಆಯನೂರು ಮಂಜುನಾಥ್ ಹೇಳಿದರು.  

PREV
click me!

Recommended Stories

"ಪೀರಿಯಡ್ಸ್ ಟೈಮಲ್ಲೂ ಸೆ*ಕ್ಸ್‌ಗೆ ಪೀಡಿಸುತ್ತಿದ್ದ"; ಟೆಕ್ಕಿ ಕಣ್ಣೀರು, ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿ ಬ್ಲ್ಯಾಕ್‌ಮೇಲ್!
ಪುತ್ತೂರು ಕೃಷ್ಣನ ನವರಂಗಿ ಆಟ, ಡಿಎನ್‌ಎ ಟೆಸ್ಟ್‌ನಲ್ಲಿ ಅಪ್ಪ ಅನ್ನೋದು ಕನ್ಫರ್ಮ್‌ ಆದರೂ ಮದುವೆ ಆಗಲ್ವಂತೆ!