ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ. ನಾನೇ ಕೇಸ್ ಕೊಡ್ತೀನಿ ಎಂದು ಹೇಳಿದ್ದಾರೆ.
ಶಿವಮೊಗ್ಗ (ಮಾ.15): ಬಿಜೆಪಿಯಲ್ಲಿ ವಿಶ್ವನಾಥ್, ಯತ್ನಾಳ್ ಸೇರಿದಂತೆ ಹಲವರು ಸಿ.ಡಿ. ವಿಷಯ ಪ್ರಸ್ತಾಪಿಸಿದ್ದಾರೆ. ಈ ಬಗ್ಗೆ ಪೊಲೀಸರು ಯಾಕೆ ಸುಮೋಟೋ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಾಕಷ್ಟುಮಂದಿ ಹೇಳಿಕೆ ನೀಡಿದ್ದಾರೆ. ಅದರ ಬಗ್ಗೆ ಯಾಕೆ ಎಲ್ಲೂ ಚರ್ಚೆ ಆಗುತ್ತಿಲ್ಲ? ಎಂದರು. ಸುಮೋಟೊ ಕೇಸ್ ದಾಖಲು ಮಾಡಿಕೊಳ್ಳದಿದ್ದಲ್ಲಿ ನಾವೇ ಕೇಸು ಕೊಡಿಸುತ್ತೇವೆ. ತನಿಖೆ ನಡೆಸಲಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಿಡಿ ಷಡ್ಯಂತ್ರ: ಸಾಹುಕಾರ್ ಆರೋಪಕ್ಕೆ ಡಿಕೆಶಿ ಛೂಬಾಣ!
ಸಿ.ಡಿ. ಗುಮ್ಮ ಇದೆ ಎಂದು ಕೆಲ ಸಚಿವರುಗಳೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಅದನ್ನು ಯಾಕೆ ತನಿಖೆ ನಡೆಸುತ್ತಿಲ್ಲ?. ಸಿ.ಡಿ. ನಕಲಿಯೋ, ಅಸಲಿಯೋ ತನಿಖೆ ನಂತರ ತಿಳಿದು ಬರಲಿದ್ದು, ಈ ಕುರಿತು ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.