ಹೆಣ್ಮಕ್ಳು ಡ್ರಿಂಕ್ಸ್ ಮಾಡ್ತಾರೆ ಅಂದ್ರೆ ಇಟ್ಸ್ ಕಾಮನ್ ಅಂತಾರೆ. ಆದರೆ ಶಿವಮೊಗ್ಗದಲ್ಲಿ ಪಬ್ಲಿಕ್ ಪಾರ್ಕ್‌ನಲ್ಲಿಯೇ ಹೆಣ್ಮಕ್ಳು ಡ್ರಿಂಕ್ಸ್ ಮಾಡಿರೋ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗ್ತಿದೆ. ಹುಡುಗಿಯರು ಎಣ್ಣೆ ಪಾರ್ಟಿ ಮಾಡಿರೋ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾಲ್ಲಿ ಹರಿದಾಡ್ತಿದೆ.
ಶಿವಮೊಗ್ಗ(ಸೆ.05): ನಗರದ ಪ್ರಮುಖ ಜನಾಕರ್ಷಣೆಯ ಕೇಂದ್ರವಾಗಿರುವ ಮಹಾತ್ಮಗಾಂಧಿ ಪಾರ್ಕ್ನಲ್ಲಿ ಯುವತಿಯರು ಎಣ್ಣೆ ಪಾರ್ಟಿ ಮಾಡಿರುವ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
'ಡಿಕೆಶಿ ಬಂಧನಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ'
undefined
ಎರಡು ವಿಡಿಯೋ ತುಣುಕುಗಳು ಹರಿದಾಡುತ್ತಿದ್ದು, ಒಂದರಲ್ಲಿ ಓರ್ವ ಕಾಲೇಜು ವಿದ್ಯಾರ್ಥಿನಿ ಬಿಯರ್ ಬಾಟಲ್ ಕೈಯಲ್ಲಿ ಹಿಡಿದು ಪೂರ್ಣವಾಗಿ ಕುಡಿದು ಕಟ್ಟೆಯ ಮೇಲೆ ಇಡುತ್ತಿರುವ ದೃಶ್ಯ ಇದ್ದರೆ, ಇನ್ನೊಂದು ವಿಡಿಯೋದಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರು ಬಿಯರ್ ಕುಡಿಯುತ್ತಿರುವ ಹಾಗೂ ಹಿಂಬದಿಯಲ್ಲಿ ಯುವಕನೋರ್ವ ನಿಂತಿರುವುದು ಕಂಡು ಬರುತ್ತದೆ.
ಅತಿರೇಕದ ವರ್ತನೆಗೆ ಆಕ್ರೋಶ:
ದೃಶ್ಯಗಳನ್ನು ಗಮನಿಸಿದಾಗ ಇದೊಂದು ಹುಟ್ಟು ಹಬ್ಬದ ಆಚರಣೆಯ ಸಂದರ್ಭ ಎಂಬಂತೆ ಕಾಣುತ್ತದೆ. ಸಾಮಾನ್ಯವಾಗಿ ಸಾರ್ವಜನಿಕರು ಕುಟುಂಬ ಸಮೇತ ಆಗಮಿಸುವ ಈ ಪಾರ್ಕ್‌ನಲ್ಲಿ ವಿದ್ಯಾರ್ಥಿನಿಯರು ಸಾರ್ವಜನಿಕವಾಗಿ ಕುಡಿದು ಕುಪ್ಪಳಿಸುವ ಅತಿರೇಕದ ವರ್ತನೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಹುತೇಕ ಈ ಪಾರ್ಟಿ ಸುಮಾರು ಒಂದು ಗಂಟೆಗಳ ಕಾಲ ನಡೆದಿದೆ
ಸೆ.05ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ