ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಹಾಗೂ ಕೆಫೆ ಕಾಫಿ ಡೇ ಮಾಲಿಕ ಸಿದ್ಧಾರ್ಥ್ ಹೆಗ್ಡೆ ಪುತ್ರ ವಿವಾಹ ದಿನಾಂಕ ಬಹುತೇಕ ನಿಗದಿಯಾಗಿದೆ.
ಬೆಂಗಳೂರು (ಸೆ.16): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗ ಅಮಾತ್ರ್ಯ ಅವರ ವಿವಾಹ ಮುಂದಿನ ಪ್ರೇಮಿಗಳ ದಿನದಂದು (ವ್ಯಾಲಟೈನ್ ಡೇ) ನಡೆಯುವುದೇ?
ಮೂಲಗಳ ಪ್ರಕಾರ ಜ್ಯೋತಿಷಿಗಳು ಈ ಯುವ ಜೋಡಿಯ ವಿವಾಹಕ್ಕೆ 2021 ಫೆಬ್ರವರಿ 14 (ವ್ಯಾಲಂಟೈನ್ ಡೇ) ಹಾಗೂ ಫೆ. 24 ಈ ಎರಡು ದಿನಾಂಕಗಳನ್ನು ನೀಡಿದ್ದಾರೆ. ಹೀಗಾಗಿ ಈ ಜೋಡಿಯ ವಿವಾಹ ಪ್ರೇಮಿಗಳ ದಿನ ನಡೆಯುವುದೇ ಎಂಬ ಕುತೂಹಲ ಹುಟ್ಟಿಕೊಂಡಿದೆ.
ಡಿಕೆಶಿ ಪುತ್ರಿ ಮದುವೆ ಯಾವಾಗ, ಡೇಟ್ ಫಿಕ್ಸ್ ಆಯ್ತಾ? ...
ಆದರೆ, ಕುಟುಂಬದ ಮೂಲಗಳ ಪ್ರಕಾರ ಫೆ. 24 ಅತ್ಯಂತ ಶುಭ ದಿನ ಎನ್ನಲಾಗಿದ್ದು, ಈ ದಿನವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೀಗಾಗಿ ಈ ಎರಡು ದಿನಗಳ ಪೈಕಿ ಒಂದು ದಿನಾಂಕದಂದು ವಿವಾಹ ನಡೆಯುವ ಸಾಧ್ಯತೆ ಹೆಚ್ಚಿದೆ. ಇನ್ನು ಈ ಯುವ ಜೋಡಿಯ ನಿಶ್ಚಿತಾರ್ಥವು ಈಗಾಗಲೇ ನಿಶ್ಚಯವಾದಂತೆ ನ.19ರಂದು ನಡೆಯಲಿದೆ.
ರಾಜಕೀಯವಾಗಿ ನಾಡಿನ ಪ್ರಭಾವಿ ಕುಟುಂಬಗಳೆನಿಸಿದ ಎಸ್.ಎಂ. ಕೃಷ್ಣ ಹಾಗೂ ಡಿ.ಕೆ. ಶಿವಕುಮಾರ್ ಕುಟುಂಬವೂ ಈ ಮೂಲಕ ಸಂಬಂಧ ಬೆಳೆಸಲಿವೆ. ಕಳೆದ ಜೂ.12ರಂದು ಅಮಾತ್ರ್ಯ ಮತ್ತು ಐಶ್ವರ್ಯ ಅವರ ವಿವಾಹ ಸಂಬಂಧ ಎರಡು ಕುಟುಂಬಗಳು ತಾಂಬೂಲ ಬದಲಿಸಿಕೊಂಡು ಮಾತುಕತೆ ನಡೆಸಿದ್ದವು.
ಮದ್ವೆ ಮಾತುಕತೆ ಮುಗಿಸಿದ ಡಿಕೆಶಿ-ಕೃಷ್ಣ ಕುಟುಂಬ: ಹಾರ ಬದಲಾಯಿಸಿಕೊಂಡ ಅಮರ್ಥ್ಯ-ಐಶ್ವರ್ಯ
ಅಮೆರಿಕದಲ್ಲಿ ಶಿಕ್ಷಣ ಪಡೆದಿರುವ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ ಹೆಗ್ಡೆ ಅವರ ಹಿರಿಯ ಮಗ ಅಮಾತ್ರ್ಯ ಅವರು, ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ಕಂಪನಿಯ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಎಂಜಿನಿಯರಿಂಗ್ ಪದವೀಧರೆಯಾದ ಐಶ್ವರ್ಯ ಅವರು ತಂದೆ ಡಿ.ಕೆ.ಶಿವಕುಮಾರ್ ಸ್ಥಾಪಿಸಿರುವ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆ ಮುನ್ನಡೆಸುತ್ತಿದ್ದಾರೆ.
ಶಿವಕುಮಾರ್ ಅವರು ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಸಚಿವರಾಗಿದ್ದರು. ಅಮಾತ್ರ್ಯ ಅವರ ತಂದೆ ಸಿದಾರ್ಥ ಅವರೊಂದಿಗೂ ಶಿವಕುಮಾರ್‌ಗೆ ಗೆಳೆತನವಿತ್ತು. ಪ್ರಸ್ತುತ ಶಿವಕುಮಾರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರೆ, ಕೃಷ್ಣ ಬಿಜೆಪಿಯಲ್ಲಿದ್ದಾರೆ.