ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗುತ್ತಿದ್ದು, 5 ಮಂದಿ ಆಕಾಂಕ್ಷಿಗಳಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾ. ಡಿ.ಎಲ್. ವಿಜಯಕುಮಾರ್ ಇದುವರೆಗೂ ಕಾರ್ಯನಿರ್ವಹಿಸಿದ್ದು, ಅವರ ಸ್ಥಾನಕ್ಕೆ ಬೇರೊಬ್ಬರು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ.
ಚಿಕ್ಕಮಗಳೂರು (ಆ.28): ಈ ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಯಾಗುತ್ತಿದ್ದು, 5 ಮಂದಿ ಆಕಾಂಕ್ಷಿಗಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಾ. ಡಿ.ಎಲ್. ವಿಜಯಕುಮಾರ್ ಇದುವರೆಗೂ ಕಾರ್ಯನಿರ್ವಹಿಸಿದ್ದು, ಅವರ ಸ್ಥಾನಕ್ಕೆ ಬೇರೊಬ್ಬರು ಆಯ್ಕೆ ಮಾಡುವ ಪ್ರಕ್ರಿಯೆ ಆರಂಭಗೊಂಡಿದೆ. ಗೋಪಾಲಸ್ವಾಮಿ ಜಿಲ್ಲಾ ವೀಕ್ಷಕರಾಗಿ ನೇಮಕಗೊಂಡಿದ್ದಾರೆ, 2 ದಿನದಲ್ಲಿ ಜಿಲ್ಲೆಗೆ ಆಗಮಿಸಲಿದ್ದಾರೆ.
ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸೆ.10 ರೊಳಗೆ ಮುಕ್ತಾಯಗೊಳಿಸಿ, ವರಿಷ್ಠರಿಗೆ ವರದಿಯನ್ನು ಜಿಲ್ಲಾ ವೀಕ್ಷಕರು ಸಲ್ಲಿಸಬೇಕಾಗಿದೆ. ಈ 5 ಮಂದಿ ಆಕಾಂಕ್ಷಿಗಳು ಜಿಲ್ಲಾಧ್ಯಕ್ಷರ ಹುದ್ದೆಗೆ ತಮ್ಮ ಹೆಸರನ್ನು ಪರಿಗಣಿಸಬೇಕೆಂದು ವೀಕ್ಷಕರಲ್ಲಿ ಮನವಿ ಮಾಡಲಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜಿಲ್ಲಾ ವಕ್ತಾರ ಎಂ.ಸಿ. ಶಿವಾನಂದಸ್ವಾಮಿ, ಅಂಶುಮತ್, ಕಳಸಾದ ಪ್ರಭಾಕರ್, ಬೀರೂರಿನ ವಿನಾಯಕ ಮತ್ತು ಎಚ್.ಎನ್. ಮಹೇಶ್ ಗೌಡ, ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಅವರು ಹೊರತುಪಡಿಸಿ ಸಮರ್ಥವಾಗಿರುವ ಬೇರೊಬ್ಬರನ್ನು ಹೈಕಮಾಂಡ್ ಆಯ್ಕೆ ಮಾಡಿದರೂ ಅಚ್ಚರಿಪಡಬೇಕಾಗಿಲ್ಲ.