ಸ್ಟೀಲ್ ಬಾಟಲ್, ಬಟ್ಟೆ ಚೀಲವನ್ನೇ ಬಳಸಿ: ಪ್ರವಾಸಿಗರಿಗೆ 'ಕ್ಲೀನ್ ಮೈಸೂರು' ಮನವಿ

By Web DeskFirst Published Aug 28, 2019, 12:02 PM IST
Highlights

ಸ್ವಚ್ಛನಗರಗಳಲ್ಲಿ ಅಗ್ರ ಸ್ಥಾನದಲ್ಲಿರುವ ಮೈಸೂರಿನಲ್ಲಿ ಐತಿಹಾಸಿಕ ದಸರಾಗೆ ಸಿದ್ದತೆ ನಡೆಯುತ್ತಿದೆ. ದೇಶದ ಮೂಲೆ ಮಲೆಗಳಿಂದ, ವಿದೇಶಗಳಿಂದಲೂ ದಸರಾದಲ್ಲಿ ಪಾಲ್ಗೊಳ್ಳಲು ಪ್ರವಾಸಿಗರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಮೈಸೂರು(ಆ.28): ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಐತಿಹಾಸಿಕ ಮೈಸೂರು ದಸರಾ ನೋಡಲು ದೇಶ ವಿದೇಶಗಳಿಂದ ಜನರು ಆಗಮಿಸಲಿದ್ದು, ಸ್ವಚ್ಛತೆ ಕಾಪಾಡುವಂತೆ 'ಕ್ಲೀನ್ ಮೈಸೂರು' ಮನವಿ ಮಾಡಿದೆ. ಸ್ಟೀಲ್ ಬಾಟಲ್, ಬಟ್ಟೆ ಚೀಲ ಬಳಸುವಂತೆ ಸೂಚಿಸಿದೆ.

Mysuru City welcome tourists for Mysuru Dasara. Request you to bring your steel or copper water bottles, use cloth bags, use dustbins. Thanks for your Clean and Green thinking. pic.twitter.com/Ow7G6kF0DM

— CLEAN MYSURU (@cleanmysuru)

ಸಾಮಾನ್ಯವಾಗಿ ಉತ್ಸವ, ಜಾತ್ರೆಗಳು ನಡೆದಾಗ ಆ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವುದೇ ದೊಡ್ಡ ಸವಾಲಾಗಿರುತ್ತದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ಲಾಸ್ಟಿಕ್ ಕವರ್, ಡಬ್ಬಗಳು ಇತರ ಸಮಾಗ್ರಿಗಳು ತುಂಬಿ ಹೋಗಿರುತ್ತವೆ. ಡಸ್ಟ್‌ಬಿನ್‌ಗಳಿದ್ದರೂ ಕಸ ಹೊರಗೆ ಚೆಲ್ಲಿರುವುದೇ ಹೆಚ್ಚು. ಹೀಗಾಗಿ ದಸರಾ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ಕ್ಲೀನ್ ಮೈಸೂರು ನಿರ್ಧರಿಸಿದೆ.

ಮೈಸೂರು ಜಿಲ್ಲೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಡಸ್ಟ್‌ಬಿನ್‌ಗಳನ್ನಿಟ್ಟರೂ ಅದನ್ನು ಬಳಸುವವರು ಕಡಿಮೆ ಎಂಬುದು ವಾಸ್ತವ. ಹೀಗಾಗಿಯೇ ಕ್ಲೀನ್ ಮೈಸೂರು ದಸರಾಗೆ ಬರುವವರು ಸ್ಟೀಲ್ ಬಾಟಲ್ ಹಾಗೂ ಬಟ್ಟೆ ಚೀಲಗಳನ್ನೇ ಬಳಸಬೇಕೆಂದು ಮನವಿ ಮಾಡಿದೆ.

ಮೈಸೂರು ಅರಮನೆಗೆ ದಸರಾ ಗಜಪಡೆ

click me!