ಬೆಳಗಾವಿ ಶಾಹಿ ಮಸೀದಿ ವಿವಾದ: ಬಿಜೆಪಿ ಶಾಸಕರಲ್ಲೇ ಭಿನ್ನಮತ..!

By Kannadaprabha News  |  First Published Jun 10, 2022, 2:23 PM IST

*   ತೀವ್ರ ಚರ್ಚೆಗೆ ಗ್ರಾಸವಾದ ಶಾಸಕರ ಭಿನ್ನಮತ
*   ಈ ಕುರಿತು ಸರ್ವೆ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದ ಅಭಯ ಪಾಟೀಲ 
*   ಪರೋಕ್ಷವಾಗಿ ಪಾಟೀಲ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದ ಬೆನಕೆ
 


ಬೆಳಗಾವಿ(ಜೂ.10):  ಬೆಳಗಾವಿಯ ಬಾಪಟ್‌ ಗಲ್ಲಿಯ ಶಾಹಿ ಮಸೀದಿ ವಿವಾದ ಸಂಬಂಧ ಬಿಜೆಪಿ ಶಾಸಕರಲ್ಲಿ ಭಿನ್ನಮತ ವ್ಯಕ್ತವಾಗಿದೆ. ಈ ಬೆಳವಣಿಗೆ ಕೇಸರಿ ಪಾಳಯದಲ್ಲಿ ಸಹಜವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಬಾಪಟ್‌ ಗಲ್ಲಿ ಶಾಹಿ ಮಸೀದಿ ಈ ಮೊದಲು ಮಂದಿರವಾಗಿತ್ತು ಎಂದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಹೇಳಿದ್ದರೆ, ಬೆಳಗಾವಿ ಶಾಸಕ ಅನಿಲ ಬೆನಕೆ ಅವರು 1991ರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಿ ಎನ್ನುವ ಮೂಲಕ ಪರೋಕ್ಷವಾಗಿ ಶಾಸಕ ಅಭಯ ಪಾಟೀಲ ಅವರ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ವಿದ್ಯಾರ್ಥಿನಿಯೊಂದಿಗೆ ಕಳೆದ ಮಧುರ ಕ್ಷಣಗಳ ಫೋಟೊ ವೈರಲ್‌: ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿತ..!

ಶಾಸಕ ಅಭಯ ಪಾಟೀಲ ಅವರು, ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಈ ಮಸೀದಿ ಹಿಂದೂ ದೇವಾಲಯವನ್ನು ಹೋಲುತ್ತದೆ. ಹಾಗಾಗಿ, ಈ ಕುರಿತು ಸರ್ವೆ ಮಾಡುವಂತೆ ಕೋರಿ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರು. ಅಭಯ ಪಾಟೀಲ ಅವರ ನಡೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಫಿರೋಜ್‌ ಸೇಠ್‌ ನೇತೃತ್ವದಲ್ಲಿ ಮುಸ್ಲಿಂ ಮುಖಂಡರ ನಿಯೋಗ ಪ್ರಾದೇಶಿಕ ಆಯುಕ್ತರನ್ನು ಭೇಟಿಯಾಗಿತ್ತು. ಆಗ 1991ರ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು. ಈ ಮಸೀದಿ ವಿವಾದ ಪ್ರಕರಣದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರದಲ್ಲಿ ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭೀತಿ ಎದುರಾದ ಹಿನ್ನೆಲೆಯಲ್ಲಿ ಸೇಠ್‌ ಹೇಳಿಕೆಗೆ ಶಾಸಕ ಬೆನಕೆ ಅವರು ಸಹಮತ ವ್ಯಕ್ತಪಡಿಸಿದ್ದಾರೆ. 1991ರ ಪೂಜಾ ಸ್ಥಳಗಳ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಬೇಕು. ಶಾಹಿ ಮಸೀದಿ ವಿವಾದ ಬಗ್ಗೆ ಮಾಹಿತಿ ಪಡೆಯಲು ಎಲ್ಲರಿಗೂ ಹೇಳಿದ್ದೇವೆ. ಅದರ ಬಗ್ಗೆ ಮಾಹಿತಿ ಇದ್ದರೆ 1991ರ ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡುತ್ತೇವೆ ಎಂದು ಹೇಳಿದ್ದಾರೆ.

click me!