ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ : ಒಬ್ಬರ ಮೇಲೊಬ್ಬರ ವಾಕ್‌ಪ್ರಹಾರ

Published : Nov 15, 2022, 11:31 AM ISTUpdated : Nov 15, 2022, 11:32 AM IST
 ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ : ಒಬ್ಬರ ಮೇಲೊಬ್ಬರ ವಾಕ್‌ಪ್ರಹಾರ

ಸಾರಾಂಶ

ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿ ಹಿಂತಿರುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಕೋಲಾರ ಪ್ರವಾಸದಲ್ಲಿ ನಿಷ್ಠಾವಂತ ಕಾಂಗ್ರೆಸ್‌ ಮುಖಂಡರ ಕಡೆಗಣನೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಶಾಸಕ ರಮೇಶ್‌ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

 ಕೋಲಾರ (ನ.15):  ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರಕ್ಕೆ ಭೇಟಿ ನೀಡಿ ಹಿಂತಿರುಗಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಿದ್ದರಾಮಯ್ಯ ಕೋಲಾರ ಪ್ರವಾಸದಲ್ಲಿ ನಿಷ್ಠಾವಂತ ಕಾಂಗ್ರೆಸ್‌ ಮುಖಂಡರ ಕಡೆಗಣನೆ ಮಾಡಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಕಿಸಾನ್‌ ಘಟಕದ ಅಧ್ಯಕ್ಷ ಊರುಬಾಗಿಲು ಶ್ರೀನಿವಾಸ್‌ ಶಾಸಕ ರಮೇಶ್‌ ಕುಮಾರ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾಂಗ್ರೆಸ್‌ (Congress)  ಕಚೇರಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿ, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುಲು ಬಂದಿದ್ದ ಸಿದ್ದರಾಮಯ್ಯರನ್ನು (Siddaramaiah) ರಮೇಶ್‌ ಕುಮಾರ್‌ ಬಣ ದಾರಿ ತಪ್ಪಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಜೊತೆ ನಮ್ಮ ಅಳಲು ತೋಡಿಕೊಳ್ಳಲು ರಮೇಶ್‌ ಕುಮಾರ್‌ ಬಣ ಬಿಟ್ಟಿಲ್ಲ ಎಂದು ಆರೋಪಿಸಿದರು.

ಭೇಟಿಗೆ ಅವಕಾಶ ನೀಡಲಿಲ್ಲ

ಸಿದ್ದರಾಮಯ್ಯ ಪ್ರವಾಸದಲ್ಲಿ ಬೇರೆ ಬೇರೆ ತಾಲೂಕುಗಳಿಂದ ಜನರನ್ನು ಹಾಗೂ ಘಟ್ಟಬಂಧನ ನಾಯಕರು ಕರೆತಂದಿದ್ದರು. ಸಿದ್ದರಾಮಯ್ಯ ಭೇಟಿ ಮಾಡಲು ನಿಜವಾದ ಕ್ಷೇತ್ರದ ಮತದಾರರು ಹಾಗೂ ಪಕ್ಷದ ಮುಖಂಡರು ಬಂಗಾರಪೇಟೆ ವೃತ್ತದಲ್ಲಿ ಬಂದಿದ್ದರು. ಆದರೆ ಘಟ್ಟಬಂಧನ ನಾಯಕರು ನಮ್ಮ ಜೊತೆ ಸಿದ್ದರಾಮಯ್ಯ ಮಾತನಾಡದಂತೆ ಅವರನ್ನು ದಾರಿ ತಪ್ಪಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಮೇಶ್‌ ಕುಮಾರ್‌ ಸೌಜನ್ಯಕ್ಕಾದರೂ ನಮ್ಮ ಜೊತೆ ಸಿದ್ದರಾಮಯ್ಯ ಮಾತನಾಡಿಸುವ ಕೆಲಸ ಮಾಡಲಿಲ್ಲ, ನಾವು ನಿಜವಾದ ನಿಷ್ಠಾವಂತ ಕಾಂಗ್ರೆಸ್ಸಿಗರು, ಅವರು ನಕಲಿ ರಮೇಶ್‌ ಕುಮಾರ್‌ ಬಾಯಲ್ಲಿ ಜೇನು ಇಟ್ಟುಕೊಂಡು ಮಾತನಾಡುತ್ತಾರೆ, ಆದರೆ ಹೊಟ್ಟೆಯಲ್ಲಿ ವಿಷ ತುಂಬಿರುತ್ತೆ. ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಅವರು ಬಂದರೆ ನಾವೆಲ್ಲರೂ ಸ್ವಾಗತಿಸುತ್ತೇವೆ. ಮಾಜಿ ಸಂಸದ ಕೆಎಚ್‌ ಮುನಿಯಪ್ಪರನ್ನು ಕಡೆಗಣಿಸಿದರೆ ಕಷ್ಟವಾಗುತ್ತದೆ. ಸಿದ್ದರಾಮಯ್ಯ ಈ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಅರ್ಜಿಗೆ ಕಡೆಕ್ಷಣದ ಕಸರತ್ತು

ಬೆಂಗಳೂರು  : ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಸ್ಪರ್ಧಿಸಲು ಕಾಂಗ್ರೆಸ್‌ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವುದಕ್ಕೆ ಸೋಮವಾರ ಆಕಾಂಕ್ಷಿಗಳು ಮುಗಿಬಿದ್ದರು. ಅರ್ಜಿ ಸಲ್ಲಿಸಲು ಮಂಗಳವಾರ (ನ.15) ಕಡೆ ದಿನ ಎಂಬ ಕಾರಣಕ್ಕೆ ಈ ಬೆಳವಣಿಗೆ ನಡೆದಿದ್ದು, ಆಕಾಂಕ್ಷಿಗಳಿಂದ ಒತ್ತಡವಿರುವ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ದಿನಾಂಕವನ್ನು ಮತ್ತೆ 10 ದಿನ ಮುಂದೂಡುವ ಸಾಧ್ಯತೆಯಿದೆ. ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಉಂಟಾಗಿದ್ದು, ಈಗಾಗಲೇ 1,050 ಮಂದಿ ಅರ್ಜಿ ಪಡೆದಿದ್ದಾರೆ. ಈ ಪೈಕಿ ಸೋಮವಾರದ ವೇಳೆಗೆ 450 ಅರ್ಜಿ ಮಾತ್ರ ಸಲ್ಲಿಕೆಯಾಗಿರುವುದರಿಂದ ಅಂತಿಮ ಗಡುವು ವಿಸ್ತರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಮಾಜಿ ಸಚಿವ ಕೆ.ಜೆ.ಜಾರ್ಜ್‌, ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್‌ ಸೇರಿದಂತೆ ಹಲವರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದರು. ಬಸನಗೌಡ ಬಾದರ್ಲಿ ಪರವಾಗಿ ಅವರ ಅಭಿಮಾನಿಗಳು ಅರ್ಜಿ ಸಲ್ಲಿಸಿದರು. ಇನ್ನು ಹಿಂದಿನ ದಿನವೇ ನಿರ್ಮಾಪಕ ಉಮಾಪತಿ ಗೌಡ ಬೊಮ್ಮನಹಳ್ಳಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ ಸೇರಿದಂತೆ ಹಲವು ಹಿರಿಯ ನಾಯಕರು ಅರ್ಜಿ ಈಗಾಗಲೇ ಸಲ್ಲಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಸಹ ಅರ್ಜಿ ಪಡೆದಿದ್ದು, ಇನ್ನೂ ಸಲ್ಲಿಕೆ ಮಾಡಿಲ್ಲ. ಸಿದ್ದರಾಮಯ್ಯ ಅರ್ಜಿಯನ್ನೇ ಪಡೆದಿಲ್ಲ ಎಂದು ಹೇಳಲಾಗಿದೆ.

ನಾನು ಸಿಎಂ ಆಗ್ಬೇಕಾದ್ರೆ ಕಾಂಗ್ರೆಸ್‌ಗೆ ಮತ ಹಾಕಿ: ಸಿದ್ದರಾಮಯ್ಯ

ಹೀಗಾಗಿ ಅರ್ಜಿ ಸಲ್ಲಿಕೆಗೆ ನೀಡಿರುವ ಗಡುವು ವಿಸ್ತರಣೆಯಾಗಲಿದೆ ಎಂದು ಹೇಳಲಾಗುತ್ತಿದೆ. ನಂಜನಗೂಡು ಕ್ಷೇತ್ರಕ್ಕೆ ಧ್ರುವನಾರಾಯಣ ಹಾಗೂ ಎಚ್‌.ಸಿ.ಮಹದೇವಪ್ಪ ಇಬ್ಬರೂ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಶಿವಮೊಗ್ಗ ಕ್ಷೇತ್ರಕ್ಕೆ ಎಂಟು ಮಂದಿ ಅರ್ಜಿ ಸಲ್ಲಿಸಿದ್ದಾರೆ. ಬಳ್ಳಾರಿಯಿಂದ ಸ್ಪರ್ಧಿಸಲು 10, ದೇವನಹಳ್ಳಿ 10, ಮಂಡ್ಯ ಕ್ಷೇತ್ರದ ಹೆಸರಿನಲ್ಲಿ 10 ಮಂದಿ ಅರ್ಜಿಗಳನ್ನು ಪಡೆದಿದ್ದಾರೆ.

ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರಕ್ಕೆ ಅರ್ಜಿ ಸಲ್ಲಿಸಿದ ಡಾ.ಬಿ.ಯೋಗೇಶ್‌ಬಾಬು: 2018ರಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸೋತಿದ್ದ ಡಾ.ಬಿ.ಯೋಗೇಶ್‌ ಬಾಬು ಮತ್ತೊಮ್ಮೆ 2023ರ ವಿಧಾನಸಭಾ ಚುನಾವಣೆಯಲ್ಲಿ ಮೊಳಕಾಲ್ಮುರಿನಿಂದ ಸ್ಪರ್ಧಿಸಲು ಬೆಂಗಳೂರಿನ ಕೆಪಿಸಿಸಿ ಕಚೇರಿ ಕಾರ್ಯದರ್ಶಿ ನಾರಾಯಣ್‌ರವರಿಗೆ ಅರ್ಜಿ ಸಲ್ಲಿಸಿದರು. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುವ ಚುನಾವಣೆಯಾಗಿದ್ದು, ರಾಜ್ಯದೆಲ್ಲೆಡೆ ಪಕ್ಷದ ಪರವಾಗಿ ಮತದಾರರ ಒಲವಿದೆ. 

PREV
Read more Articles on
click me!

Recommended Stories

Dharwad Love Jihad Case: ಲವ್ ಜಿಹಾದ್‌ಗೆ ಹೆದರಿ ಬಾಲಕಿ ಸಾವು; ಪ್ರತಿಭಟನೆ ಮಾಡಿದ ಬಜರಂಗದಳ ನಾಯಕನ ಮೇಲೆ ಕೇಸ್!
Karnataka Police: ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!