BSY ಹೊಗಳಿ ಸಿದ್ದರಾಮಯ್ಯಗೆ ಟಾಂಗ್ ನೀಡಿದ ಸುಧಾಕರ್

By Web Desk  |  First Published Oct 2, 2019, 12:47 PM IST

ಅನರ್ಹ ಶಾಸಕ ಸುಧಾಕರ್ ಮಾಜಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ. ಯಡಿಯೂರಪ್ಪ ಹೊಗಳಿ ಮಾತನಾಡಿದ್ದಾರೆ.


ಚಿಕ್ಕಬಳ್ಳಾಪುರ [ಸೆ.02]: ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರಕ್ಕೆ ಬಂದ ಒಂದೂವರೆ ತಿಂಗಳಲ್ಲೇ ಅವರು ದುರ್ಬಲರು ಎನ್ನುವುದು ತಪ್ಪು ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಅನರ್ಹ ಶಾಸಕ ಸುಧಾಕರ್ ಟಾಂಗ್ ನೀಡಿದ್ದಾರೆ. 

ಚಿಕ್ಕಬಳ್ಳಾಪುರದ ಮಂಚೇನಹಳ್ಳಿಯಲ್ಲಿ ಮಾತನಾಡಿದ ಸುಧಾಕರ್ ಬಿಎಸ್ ವೈ ದುರ್ಬಲ ಸಿಎಂ ಎನ್ನುವ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. 

Tap to resize

Latest Videos

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಒಂದು ತಿಂಗಳಿನಲ್ಲಿಯೇ ಮೌಲ್ಯಮಾಪನ ಮಾಡಿದ್ದರಾ? ಎಂದು ಸುಧಾಕರ್ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಮ್ಯಾಜಿಕ್ ಮಾಡಿದಂತೆ ಆಡಳಿತ ನಡೆಸಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರಿಗೂ ಇದು ಗೊತ್ತಿದೆ ಅಂದುಕೊಂಡಿದ್ದೇನೆ. ಕನಿಷ್ಠ 6 ತಿಂಗಳಾದರೂ ಅವಕಾಶ ನೀಡಬೇಕು ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನು ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಲಾಗುತ್ತಿಲ್ಲ. ಅವರು ಪ್ರಶ್ನಾತೀತ ನಾಯಕ. ಬಿಜೆಪಿಯವರೆಲ್ಲಾ ತುಂಬಾ ಬುದ್ದಿವಂತರು.  ಹೈಕಮಾಂಡ್ ಗೆ  ಕೆಲವೊಂದು ಸ್ಟ್ರಾಟಜಿ, ದೂರದೃಷ್ಟಿ ಆಲೋಚನೆಗಳಿವೆ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳುವುದು ಬೇಡ ಎಂದು ಹೇಳಿದರು.

click me!