‘ಬ್ಲ್ಯೂ ಫಿಲ್ಮ್ ತೆಗೆಯಲು ಹೋಗಿ ಸಿಕ್ಕಿಕೊಂಡಿಲ್ಲ, ಯಾರ ಮನೆ ಚಡ್ಡಿ ತೊಳೆದಿಲ್ಲ’

By Web Desk  |  First Published Sep 22, 2019, 10:50 PM IST

ಸಾರಾ ಮಹೇಶ್ ವಿಶ್ವನಾಥ್ ವಾಗ್ದಾಳಿ/ ನಾನೇನು ಯಾರ ಮನೆಯಲ್ಲಿಯೂ ಚಡ್ಡಿ ತೊಳೆಯುತ್ತಿರಲಿಲ್ಲ./  ಜಿಟಿ ದೇವೇಗೌಡರ ಪರ ವಿಶ್ವನಾಥ್ ಬ್ಯಾಟಿಂಗ್


ಮೈಸೂರು]ಸೆ. 22]  ಹುಣಸೂರು ಉಪಚುನಾವಣೆ ಹಿನ್ನೆಲೆಯಲ್ಲಿ ಅನರ್ಹ ಶಾಸಕ  ಎಚ್.ವಿಶ್ವನಾಥ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ಶಾಸಕ ಸಾ‌.ರಾ.ಮಹೇಶ್ ವಿರುದ್ಧ ಅನರ್ಹ ಶಾಸಕ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿ ವಾಗ್ದಾಳಿ ನಡೆಸಿದ್ದಾರೆ. ನಾನು ಬ್ಲ್ಯೂ ಫಿಲ್ಮ್ ತೆಗೆಯಲು ಹೋಗಿ ಸಿಕ್ಕಿಕೊಂಡಿಲ್ಲ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಶಾಸಕ ಎಲ್ಲಿದ್ದ ? ನನ್ನದು ಕೃಷಿ ಕುಟುಂಬ‌. ನಿಮ್ಮಂತೆ ಯಾರದ್ದೋ ಮನೆಯಲ್ಲಿ ಕಾಫಿ ಲೋಟ ತೆಗೆಯುತ್ತಿರಲಿಲ್ಲ ಎಂದು ಹೆಸರು ಹೇಳದೆ ತರಾಟೆಗೆ ತೆಗೆದುಕೊಂಡಿದ್ದಾರೆ.

Tap to resize

Latest Videos

ನಾನೇನು ಯಾರ ಮನೆಯಲ್ಲಿಯೂ ಚಡ್ಡಿ ತೊಳೆಯುತ್ತಿರಲಿಲ್ಲ. ನನ್ನ ಬಗ್ಗೆ ಮಾತನಾಡುವ ಭಾಷೆ ಮೇಲೆ ಹಿಡಿತ ಇರಲಿ.  ಸರಿಯಾಗಿ  ಮಾತನಾಡುವುದನ್ನು ಮೊದಲು ಕಲಿತುಕೋ ಎಂದು  ಏಕವಚನದಲ್ಲೇ ಸಾ.ರಾ.ಮಹೇಶ್ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.

ಗೋಪಾಲಯ್ಯ, ನಾರಾಯಣಗೌಡ, ವಿಶ್ವನಾಥ್‌ ಸೋಲಿಸಲು ಜೆಡಿಎಸ್ ರಣತಂತ್ರ!

ಜೆಡಿಎಸ್‌ಗೆ ಈಗಲೂ ಜಿ.ಟಿ.ದೇವೇಗೌಡರೇ ಗುಡ್ ಆರ್ಗನೈಸರ್. ಜಿ.ಟಿ.ದೇವೇಗೌಡ ಒಬ್ಬ ಲೀಡರ್. ಅವರ ಬಗ್ಗೆ ಲಘುವಾಗಿ ಮಾತನಾಡೋದು ಸರಿಯಲ್ಲ. ಅವರೊಬ್ಬ ಹಾಲಿ ಮುಖ್ಯಮಂತ್ರಿಯನ್ನು ಸೋಲಿಸಿದವರು. ಅದು ಜನರು ತೆಗೆದುಕೊಂಡ ನಿರ್ಧಾರ. ಅದಕ್ಕೆ ತಕ್ಕಂತೆ ಅವರನ್ನು ನಾವು ನಡೆಸಿಕೊಳ್ಳಬೇಕು. ಅವರಿಗೆ ಉನ್ನತ ಶಿಕ್ಷಣ ಕೊಡಬಾರದಿತ್ತು. ಆ ಖಾತೆ ಕೊಡಬೇಡಿ ಅಂತ ನಾನು ಸಹ ಹೇಳಿದ್ದೆ. ಸದನದಲ್ಲಿ ಆ ಬಗ್ಗೆ ಮಾತನಾಡಿ ನೈತಿಕ ಬೆಂಬಲ ಸಹ ನೀಡಿದ್ದೆ. ಅವರನ್ನು ಲಘುವಾಗಿ ಕಾಣೋದು ಸರಿಯಲ್ಲ ಎಂದು ಜೆಡಿಎಸ್ ನಲ್ಲಿ ಇದ್ದರೂ ಮೋದಿ ಹೊಗಳುತ್ತ ಬಂದಿರುವ ಜಿಟಿಡಿ ಪರ ಬ್ಯಾಟ್ ಬೀಸಿದರು.

 

click me!