ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ನೂರಾರು ಮುಖಂಡರು ಭಾನುವಾರ ಬಿಡದಿ ಬಳಿಯ ಕೇತಗಾನಹಳ್ಳಿ ತೋಟಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು.
ರಾಮನಗರ : ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನ ನೂರಾರು ಮುಖಂಡರು ಭಾನುವಾರ ಬಿಡದಿ ಬಳಿಯ ಕೇತಗಾನಹಳ್ಳಿ ತೋಟಕ್ಕೆ ಭೇಟಿ ನೀಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದರು.
ಕ್ಷೇತ್ರದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿ ಮತ್ತು ಆಗುಹೋಗುಗಳ ಕರಿತು ಮಾಜಿ ಮುಖ್ಯಮಂತ್ರಿಗಳಿಗೆ ವಿವರಿಸಿ ಕಾಂಗ್ರೆಸ್ ನಾಯಕರಿಂದ ಆಗುತ್ತಿರುವ ಕಿರುಕುಳ ಮತ್ತು ತೊಂದರೆಯ ಕುರಿತಾಗಿ ಮನವರಿಕೆ ಮಾಡಿಕೊಟ್ಟರು.
undefined
ಮುಖಂಡರಿಗೆ ಸಮಾಧಾನ ಮಾಡಿದ ಎಚ್.ಡಿ. ಕುಮಾರಸ್ವಾಮಿ ಪಕ್ಷ ಬಿಡಲ್ಲ ಎಂದು ಇದೇ ಜಾಗದಲ್ಲಿ ಗೌರಿ ಶಂಕರ್ ಅವರು ಪ್ರಮಾಣ ಮಾಡಿದ್ದರು. ಭವಿಷ್ಯ ಹಾಳು ಮಾಡಿಕೊಳ್ಳಬೇಡಿ ಎಂದು ಹಿತವಚನ ಹೇಳಿದ್ದೆ ನನ್ನ ಮಾತು ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಮ್ಮೆ ನಾನು ಕ್ಷೇತ್ರದ ಹಿರಿಯ ಮುಖಂಡರ ಸಭೆ ಕರೆದು ಮಾತನಾಡುತ್ತೇನೆ. ಅಲ್ಲದೆ ವಿಧಾನಸಭೆ ಅಧಿವೇಶನ ಮುಗಿದ ನಂತರ ಮುಖಂಡರ ಜತೆ ಚರ್ಚೆ ಮಾಡುತ್ತೇನೆ. ಡಿ. 23ಕ್ಕೆ ಅಥವಾ ಅದರ ಆಜುಬಾಜಿನಲ್ಲಿ ನಾನೇ ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಬಂದು ಮುಖಂಡರು ಮತ್ತು ಕಾರ್ಯಕರ್ತರ ಜತೆ ನಾನು ಸಮಾಲೋಚನೆ ನಡೆಸುತ್ತೇನೆ. ಯಾರೂ ಹೆದರಬೇಕಿಲ್ಲ ಎಂದು ಧೈರ್ಯ ತುಂಬಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಜೆಡಿಎಸ್ ಅತ್ಯಂತ ಪ್ರಬಲವಾಗಿದ್ದು ಪಕ್ಷಕ್ಕೆ ಅತ್ಯಂತ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಕಾರ್ಯಕರ್ತರು ಇದ್ದರೆಷ್ಟೇ ಪಕ್ಷ. ಕಾರ್ಯಕರ್ತರ ಜೊತೆ ನಾನು ಇದ್ದೇನೆ. ಕಾಂಗ್ರೆಸ್ ಒಡ್ಡುವ ಆಮಿಷಗಳಿಗೆ ಯಾರು ಬಲಿಯಾಗುವುದು ಬೇಡ. ಅವರು ಮಾಡುತ್ತಿರುವ ಕೀಳು ರಾಜಕೀಯ ಅವರಿಗೆ ತಿರುಗುಬಾಣವಾಗುತ್ತದೆ ಎಂದು ಹೇಳಿದರು.
ಕೆ.ಬಿ.ಆರ್.ರಾಜಣ್ಣ, ಮೊಟ್ಟೆ ಅಂಗಡಿ ಗೋವಿಂದಪ್ಪ, ಎಸ್. ವೆಂಕಟೇಶ್ ಮಹದೇವದ ಗೌಡ, ಕರಿಯಣ್ಣ, ಶ್ರೀನಿವಾಸ, ಅಪ್ಪೇಗೌಡ, ಬೋಚನಹಳ್ಳಿ ಶ್ರೀನಿವಾಸ್, ಕುಲುಮಕುಂಟೆ ಗಂಗಾಧರ್, ಚಿಕ್ಕ ಗೊಲ್ಲಹಳ್ಳಿ ಗಿರೀಶ್, ಹನುಮಂತಪ್ಪ, ಲಾಟರಿ ನಾರಾಯಣಪ್ಪ, ನಿಡುವಳ್ಳಿ ಕೃಷ್ಣಪ್ಪ, ಚೋಳಾಪುರ ಬೋರೇಗೌಡ, ಬಳೆಗೆರೆ ಮುನಿಸ್ವಾಮಿ, ಲೋಕೇಶ, ರಾಜು, ಉದಯಕುಮಾರ್, ಸಿದ್ದರಾಜು, ವಿಜಯ್ ಕುಮಾರ್, ಚಂದ್ರು, ಮೂಗ, ಸ್ವಾಮಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.
ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಹಾಸನ (ನ.25): ಕಾಂಗ್ರೆಸ್ ಸರ್ಕಾರವು ಡಿ.ಕೆ. ಶಿವಕುಮಾರ್ ಮೇಲೆ ಇದ್ದ ಪ್ರಕರಣ ವಾಪಸ್ ಪಡೆದಿರುವುದನ್ನು ನೋಡಿದರೇ ಇವರೆಲ್ಲಾ ಸಂವಿಧಾನ ಉಳಿಸುವ ಕಾನೂನು ರಕ್ಷಕರಾ..? ಎನ್ನುವ ಅನುಮಾನ ಮೂಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ನಗರದ ರಿಂಗ್ ರಸ್ತೆ, ಜಯನಗರ ಬಳಿ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಈ ಸರ್ಕಾರಕ್ಕೆ ಕನಿಷ್ಟ ತಿಳುವಳಿಕೆ ಅನ್ನೋದು ಇದ್ದಿದ್ದರೆ ಈ ರೀತಿ ನಡೆದುಕೊಳ್ಳುತ್ತಿರಲಿಲ್ಲ. ಇವರೆಲ್ಲಾ ಸಂವಿಧಾನವನ್ನ ಉಳಿಸುತ್ತಾರಾ..? ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನ ಗಮನಿಸುತ್ತಿದ್ದೇನೆ.
ಹಲವಾರು ಬಾರಿ ಹೇಳಿದ್ದು, ಚುನಾವಣೆಯ ಸಂದರ್ಭದಲ್ಲೂ ಸಂವಿಧಾನದ ವ್ಯವಸ್ಥೆ ಉಳಿಯಬೇಕು ಎಂದಾದರೆ ಕಾಂಗ್ರೆಸ್ ಪಕ್ಷಕ್ಕೆ ಮತ ಕೊಡಬೇಕು ಅನ್ನೋದನ್ನ ಪದೇ ಪದೇ ಹೇಳಿದ್ದನ್ನ ಗಮನಿಸಿದ್ದೇನೆ. ಇವತ್ತಿನ ಅವರ ತೀರ್ಮಾನ ಸಂವಿಧಾನವನ್ನು ಎಷ್ಟರ ಮಟ್ಟಿಗೆ ಉಳಿಸುತ್ತಾರೆ ಮತ್ತು ದೇಶದ ಕಾನೂನಿನ ವ್ಯವಸ್ಥೆಗಳ ಬಗ್ಗೆ ಎಷ್ಟು ಗೌರವ ಇಟ್ಟುಕೊಂಡಿದ್ದಾರೆ ಎನ್ನುವುದು ಗೊತ್ತಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಇಡೀ ಕ್ಯಾಬಿನೆಟ್ ಶಿವಕುಮಾರ್ ಅವರ ಪಾದದಡಿ ಇದೆ ಎಂದ ಅವರು, ಈ ದೇಶದ ಕಾನೂನು ವ್ಯವಸ್ಥೆಯನ್ನು ಅವರ ಪಾದದಡಿ ತೆಗೆದುಕೊಂಡು ಹೋಗೋ ಕೆಲಸ ಮಾಡಿದ್ದಾರೆ.
ಸಮಾಜ ಒಡೆಯುವುದು ಕಾಂಗ್ರೆಸ್ ಸರ್ಕಾರದ ಉದ್ದೇಶ: ಎಚ್.ಡಿ.ಕುಮಾರಸ್ವಾಮಿ
ಯಾವುದಾದರೂ ಒಂದು ಉತ್ತಮವಾದ ಕೆಲಸ ಮಾಡುವುದಕ್ಕಾಗಿ ಈ ರೀತಿಯ ತೀರ್ಮಾನ ಮಾಡಿದ್ದರೆ ಅಭಿನಂದಿಸಬಹುದಾಗಿತ್ತು. ಇಲ್ಲ ಯಾವುದಾದರೂ ದ್ವೇಷಕ್ಕಾಗಿ ಹಿಂದೆ ಇರೋ ಸರ್ಕಾರದಲ್ಲಾಗಿರೋ ತೀರ್ಮಾನವೇ ಇದು. ಹಿಂದೆ ಇದ್ದ ಸರ್ಕಾರದ ತನಿಖಾ ಸಂಸ್ಥೆಗಳು ತನಿಖೆಯನ್ನು ಮುಂದುವರೆಸೋ ನಿಟ್ಟಿನಲ್ಲಿ ಅವತ್ತಿನ ಸರ್ಕಾರದ ಅನುಮತಿಯನ್ನ ಕೋರಿದ್ದರು. ಆ ಸಂದರ್ಭದಲ್ಲಿ ತನಿಖೆಯ ವ್ಯವಸ್ಥೆಯಲ್ಲಿರುವ ಕೆಲವು ಸೆಕ್ಷನ್‌ಗಳ ಆಧಾರದ ಮೇಲೆ ಅವತ್ತಿನ ಸರ್ಕಾರ ತೀರ್ಮಾನವನ್ನ ಕೊಟ್ಟರು. ಈಗಾಗಲೇ ಈ ತೀರ್ಮಾನದ ವಿರುದ್ಧ ಈಗಿರೋ ಡಿಸಿಎಂ ಆಗ ಶಾಸಕರು. ಅವರು ಶಾಸಕರಿದ್ದಾಗ ಡಾಕ್ಯುಮೆಂಟ್ ಕೇಳಿ, ಶಾಸಕರು ಲೆಟರ್ ಹೆಡ್ ನಲ್ಲಿ ಪತ್ರ ಬರೆದಿರೋದೆಲ್ಲಾ ಇದೆ ಎಂದರು.