cooperative society: ಸಹಕಾರ ಸಂಘಗಳಿಗೆ ಶಿಸ್ತು, ತತ್ವಗಳೇ ಅಡಿಪಾಯ: ವಿಪ ಸದಸ್ಯ ನವೀನ್‌

By Kannadaprabha News  |  First Published Dec 11, 2022, 11:01 AM IST

ಸಹಕಾರ ಸಂಘಗಳಿಗೆ ಶಿಸ್ತು, ತತ್ವಗಳೇ ಅಡಿಪಾಯ. ಸಹಕಾರ ಸಂಘವನ್ನು ಕಟ್ಟುವುದು ಸುಲಭವಲ್ಲ. ಶಿಸ್ತಿನಿಂದ ಬೆಳೆಸಿಕೊಂಡು ಹೋದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಹೇಳಿದರು.


ಚಿತ್ರದುರ್ಗ (ಡಿ.11) : ಸಹಕಾರ ಸಂಘಗಳಿಗೆ ಶಿಸ್ತು, ತತ್ವಗಳೇ ಅಡಿಪಾಯ. ಸಹಕಾರ ಸಂಘವನ್ನು ಕಟ್ಟುವುದು ಸುಲಭವಲ್ಲ. ಶಿಸ್ತಿನಿಂದ ಬೆಳೆಸಿಕೊಂಡು ಹೋದಾಗ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದು ವಿಧಾನಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಹೇಳಿದರು.

ತಿರುಮಲ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 1912 ರಲ್ಲಿ ತಿರುಮಲಾಚಾರ್‌ ಸ್ಥಾಪಿಸಿದ ಸೊಸೈಟಿಗೆ ನೂರು ವರ್ಷ ಸಂದಿರುವುದು ದೊಡ್ಡ ಸಾಧನೆ. ಆಗ ಹಣಕಾಸಿನ ಪರಿಸ್ಥಿತಿ ಕಷ್ಟವಾಗಿತ್ತು. ಈಗ ಒಂದೇ ದಿನದಲ್ಲಿ ಒಂದು ಕೋಟಿ ರು. ಸಾಲ ನೀಡುವ ವ್ಯವಸ್ಥೆಯಿದೆ ಎಂದರು.

Latest Videos

undefined

ರೈತರ ಸಮಗ್ರ ಅಭಿವೃದ್ಧಿಗೆ ಸಹಕಾರ: ಸಚಿವ ಶಿವರಾಮ್‌ ಹೆಬ್ಬಾರ್‌

ಮಾಜಿ ಸಚಿವ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಿ. ಸುಧಾಕರ್‌ ಮಾತನಾಡಿ, ನಿಸ್ವಾರ್ಥ ಸೇವೆ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಉದ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಸುಲಭದ ಮಾತಲ್ಲ. ಅನೇಕ ಮಹನೀಯರು ಇದನ್ನು ಕಟ್ಟಿಬೆಳೆಸಿ ಬುನಾದಿ ಹಾಕಿ ಹೋಗಿದ್ದಾರೆ ಎಂದರು.

ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ ಗ್ರಾಹಕರ ಹಿತ ಕಾಪಾಡುವುದಲ್ಲದೆ ಎಲ್ಲರ ಮನಸ್ಸಿನಲ್ಲಿ ಉಳಿಯುವ ರೀತಿಯಲ್ಲಿ ಸೇವೆ ಸಲ್ಲಿಸಿಕೊಂಡು ಬರುತ್ತಿದೆ. ನೂರು ವರ್ಷ ದಾಟಿರುವುದು ಕಮ್ಮಿ ಸಾಧನೆಯಲ್ಲ. ಅನೇಕ ಹಿರಿಯರು ಕಟ್ಟಿಬೆಳೆಸಿರುವ ಸೊಸೈಟಿ ಇದು. ಸೇವೆ ಸಲ್ಲಿಸಿದವರನ್ನು ಗುರುತಿಸಿ ಸನ್ಮಾನಿಸುವುದು ಒಳ್ಳೆ ಬೆಳವಣಿಗೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಇಲ್ಯಾಸ್‌ಉಲ್ಲಾ ಷರೀಫ್‌ ಮಾತನಾಡಿ, ವಿಶ್ವದಲ್ಲಿ 33 ಲಕ್ಷ ಸಹಕಾರ ಸಂಘಗಳಿವೆ. ದೇಶದಲ್ಲಿ 8.50 ಲಕ್ಷ ಸಹಕಾರ ಸಂಘಗಳಿದ್ದು, 2 ಕೋಟಿ 32 ಲಕ್ಷ ಸದಸ್ಯರಿದ್ದಾರೆ. ಡಿಸಿಸಿ ಬ್ಯಾಂಕ್‌ನಿಂದ ಜಿಲ್ಲೆಯ 69 ಸಾವಿರ ರೈತರಿಗೆ 680 ಕೋಟಿ ರು.ಕೃಷಿ ಸಾಲ ನೀಡಲಾಗಿದೆ ಎಂದರು.

ಶತಮಾನೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಎಂ.ನಿಶಾನಿ ಜಯಣ್ಣ ಮಾತನಾಡಿ, ಚಿತ್ರದುರ್ಗ ಟೌನ್‌ ಕೋ-ಆಪರೇಟಿವ್‌ ಸೊಸೈಟಿ 110 ವರ್ಷಗಳ ಇತಿಹಾಸ ಹೊಂದಿದೆ. 190 ಸದಸ್ಯರುಗಳಿಂದ 4850 ರು. ಬಂಡವಾಳದೊಂದಿಗೆ ಆರಂಭಗೊಂಡ ಸೊಸೈಟಿ ಈಗ ಹೆಮ್ಮರವಾಗಿ ಬೆಳೆದು ನೂರಾರು ಕೋಟಿ ರು. ಆಸ್ತಿ ಹೊಂದಿದೆ. ಹದಿನೆಂಟು ವರ್ಷಗಳ ಹಿಂದೆ ನಾನು ಸೊಸೈಟಿ ಅಧ್ಯಕ್ಷನಾದಾಗ ಹಣಕಾಸಿನ ಪರಿಸ್ಥಿತಿ ತೊಂದರೆಯಲ್ಲಿತ್ತು. ಎಲ್ಲವನ್ನು ನಿಭಾಯಿಸಿಕೊಂಡು ಬಂದಿದ್ದೇನೆ ಎಂದರು.

ಹಿರಿಯರಾದ ಜೈನುಲ್ಲಾಬ್ದಿನ್‌, ಡಾ.ರಹಮತ್‌ವುಲ್ಲಾ, ನಾಗರಾಜ್‌, ಹಾಜಿ ಅನ್ವರ್‌ಸಾಬ್‌, ರಾಜಗೋಪಾಲಾಚಾರ್‌, ನಾಗರಾಜ್‌ಬೇದ್ರೆ ಇವರುಗಳನ್ನು ಸನ್ಮಾನಿಸಲಾಯಿತು.

Chitradurga: 31 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ: ಸಿಎಂ ಬೊಮ್ಮಾಯಿ

ಮರ್ಚೆಂಟ್ಸ್‌ ಸೌಹಾರ್ಧ ಸಹಕಾರ ಬ್ಯಾಂಕಿನ ಅಧ್ಯಕ್ಷ ಎಸ್‌.ಆರ್‌. ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಎಂ.ಕೆ. ತಾಜ್‌ಪೀರ್‌, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಸಹಕಾರ ಸಂಘಗಳ ಉಪನಿಬಂಧಕ ಹೆಚ್‌. ಮೂರ್ತಿ, ಸಹಾಯಕ ನಿಬಂಧಕ ಟಿ. ಮಧು ಶ್ರೀನಿವಾಸ್‌, ಸೊಸೈಟಿ ಉಪಾಧ್ಯಕ್ಷ ಸಿ.ಹೆಚ್‌. ಸೂರ್ಯಪ್ರಕಾಶ್‌, ನಿರ್ದೇಶಕರಾದ ಡಾ. ರಹಮತ್‌ವುಲ್ಲಾ, ಬಿ.ವಿ. ಶ್ರೀನಿವಾಸ್‌ಮೂರ್ತಿ, ಬಿ.ಎಂ. ನಾಗರಾಜ್‌ ಬೇದ್ರೆ, ಸೈಯದ್‌ ನೂರುಲ್ಲಾ, ಕೆ. ಚಿಕ್ಕಣ್ಣ, ಎಸ್‌.ವಿ. ಪ್ರಸನ್ನ, ಚಂದ್ರಪ್ಪ, ಕೆ. ಪ್ರಕಾಶ್‌, ಎ. ಚಂಪಕಾ, ಎನ್‌.ಎಂ. ಪುಷ್ಪವಲ್ಲಿ ವ್ಯವಸ್ಥಾಪಕ ಮಹಮದ್‌ ನಯೀಮ್‌ ಇದ್ದರು.

click me!