ಕಾರಟಗಿಯಲ್ಲಿ ಬಲವಂತದ ಮತಾಂತರ: ಹಿಂದು ದೇವರುಗಳನ್ನು ನದಿಗೆ ಎಸೆಯುವಂತೆ ದೌರ್ಜನ್ಯ!

Published : Dec 11, 2022, 10:31 AM ISTUpdated : Dec 11, 2022, 10:38 AM IST
ಕಾರಟಗಿಯಲ್ಲಿ ಬಲವಂತದ ಮತಾಂತರ: ಹಿಂದು ದೇವರುಗಳನ್ನು ನದಿಗೆ ಎಸೆಯುವಂತೆ ದೌರ್ಜನ್ಯ!

ಸಾರಾಂಶ

ದೇಶಾದ್ಯಂತ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಮತಾಂತರ ನಿಷೇಧ ಕಾನೂನು ತಂದರೂ ತಡೆಯಲಾಗದಷ್ಟು ತೀವ್ರವಾಗಿ ಮತಾಂತರ ಪಿಡುಗು ಹೆಚ್ಚುತ್ತಿದೆ. ಇಂದು ಎಲ್ಲೆಡೆ ಮತಾಂತರ ಹೆಚ್ಚಳಕ್ಕೆ ಜಾತಿ, ಮೇಲು ಕೀಳು, ಅಜ್ಞಾನ ಹಲವು ಕಾರಣಗಳಿದ್ದರೂ, ಬಡತನವೇ ಮತಾಂತಕ್ಕೆ ಪ್ರಮುಖ ಕಾರಣ ಎಂಬುದು ಕೊಪ್ಪಳದಲ್ಲಿ ನಡೆದಿರುವ ಈ ಘಟನೆಗೆ ಸಾಕ್ಷ್ಯ ಒದಗಿಸಿದೆ.

ಕೊಪ್ಪಳ (ಡಿ.11) : ದೇಶಾದ್ಯಂತ ಮತಾಂತರ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಮತಾಂತರ ನಿಷೇಧ ಕಾನೂನು ತಂದರೂ ತಡೆಯಲಾಗದಷ್ಟು ತೀವ್ರವಾಗಿ ಮತಾಂತರ ಪಿಡುಗು ಹೆಚ್ಚುತ್ತಿದೆ. ಇಂದು ಎಲ್ಲೆಡೆ ಮತಾಂತರ ಹೆಚ್ಚಳಕ್ಕೆ ಜಾತಿ, ಮೇಲು ಕೀಳು, ಅಜ್ಞಾನ ಹಲವು ಕಾರಣಗಳಿದ್ದರೂ, ಬಡತನವೇ ಮತಾಂತಕ್ಕೆ ಪ್ರಮುಖ ಕಾರಣ ಎಂಬುದು ಕೊಪ್ಪಳದಲ್ಲಿ ನಡೆದಿರುವ ಈ ಘಟನೆ ಸಾಕ್ಷಿ ಒದಗಿಸಿದೆ.

ಬಡತನದಲ್ಲಿರುವ ಹಿಂದು ಕುಟುಂಬಗಳನ್ನೇ ಟಾರ್ಗೆಟ್ ಮಾಡಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಪ್ರಕರಣವೊಂದು ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

Mandya : ಮತಾಂತರಕ್ಕೆ ಪ್ರಚೋದನೆ ಕೇಸು: ಆರೋಪಿಗಳಿಗೆ ಜಾಮೀನು

 ಸಹಾಯ ಮಾಡುವ ನೆಪದಲ್ಲಿ ಹಿಂದು ಕುಟುಂಬವನ್ನು ನಾಲ್ಕು ವರ್ಷಗಳ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಿದ್ದ ಚರ್ಚ್ ಪಾಸ್ಟರ್ ಸತ್ಯನಾರಾಯಣ ಅಲಿಯಾಸ್ ಸ್ಯಾಮುಯೇಲ್ ಇದೀಗ ಮತಾಂತರಗೊಂಡ ಕುಟುಂಬಕ್ಕೆ ಕಿರುಕುಳ ಕೊಡುತ್ತಿದ್ದು, ದೇವರುಗಳನ್ನು ಪೂಜಿಸುತ್ತಾರೆಂಬ ಕಾರಣಕ್ಕೆ ಬಡಕುಟುಂಬಕ್ಕೆ ಅತ್ಯಾಚಾರ, ಕೊಲೆ ಬೆದರಿಕೆ ಹಾಕಿದ್ದಾನೆ. ಅಪ್ರಾಪ್ತ ಮಗಳಿಗೂ ಲೈಂಗಿಕ ಕಿರುಕುಳ ನೀಡಲಾಗಿದೆ.

ಏನಿದು ಘಟನೆ?

ಕಾರಟಗಿ ಶ್ರೀರಾಮನಗರದಲ್ಲಿ ಗ್ರೇಸ್ ಪ್ರಾರ್ಥನಾ ಮಂದಿರವನ್ನ ನಡೆಸುತ್ತಿರುವ ಸ್ಯಾಮುಯೇಲ್ ಹಾಗೂ ಅವನ ಪತ್ನಿ ಸುತ್ತಮುತ್ತ ಬಡವರನ್ನೇ ಟಾರ್ಗೆಟ್ ಮಾಡಿ ಮತಾಂತರ ಮಾಡುವ ಕಾರ್ಯ ಮಾಡುತ್ತಿದ್ರು. ನಾಲ್ಕು ವರ್ಷಗಳ ಹಿಂದೆ ಬಡ ಕುಟುಂಬವೊಂದಕ್ಕೆ ಹಣದ ಆಮಿಷೆ ತೋರಿಸಿ ಸಹಾಯ ಮಾಡುವ ನೆಪದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗಿತ್ತು.

ಮತಾಂತರಗೊಂಡರೂ ಆ ಬಡಕುಟುಂಬ ಹಿಂದು ದೇವರುಗಳನ್ನು ಪೂಜಿಸುವುದು ಬಿಟ್ಟಿರಲಿಲ್ಲ. ಇದರಿಂದ ಕುಪಿತಗೊಂಡಿದ್ದ ಪಾಸ್ಟರ್, ಹಿಂದು ದೇವರುಗಳನ್ನು ನದಿಗೆ ಎಸೆಯುವಂತೆ ದೌರ್ಜನ್ಯ ನಡೆಸಿದ್ದಾನೆ. ಅದಕ್ಕೆ ಒಪ್ಪದ ಕುಟುಂಬದವರಿಗೆ ಅತ್ಯಾಚಾರ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ:

ಬಡಕುಟುಂಬವನ್ನು ಬಲವಂತದಿಂದ ಮತಾಂತರ ಮಾಡಿದ್ದಲ್ಲದೇ  ಪಾಸ್ಟರ್  ಮಗನಿಂದ ಅಪ್ರಾಪ್ತ ಬಾಲಕಿಯನ್ನು ಉಚಿತ ಸೇವೆಗೆ ಚರ್ಚ್‌ಗೆ ಕರೆಸಿಕೊಂಡು ನಿರಂತರ ಅತ್ಯಾಚಾರ ಮಾಡಿದ್ದಾನೆ.  

ಮತಾಂತರಗೊಂಡವರ ಹಿಂದೂ ಧರ್ಮಕ್ಕೆ ಕರೆತರುವ ಹೊಣೆ ಎಲ್ಲರದ್ದು: ಸೂಲಿಬೆಲೆ

ಅಪ್ರಾಪ್ತ ಬಾಲಕಿಯನ್ನು ಕರೆಸುತ್ತಿದ್ದ ಪಾಸ್ಟರ್ ಮಗ ಚಿರಂಜಿವಿ (17). ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ನಡೆಸಿದ್ದ. ಈ ಕುರಿತು ಕುಟುಂಬಸ್ಥರು ದೂರು ನೀಡಿರುವ ಹಿನ್ನೆಲೆ, ಸ್ಯಾಮುಯೆಲ್, ಪತ್ನಿ ಹಾಗೂ ಮಗ ಚಿರಂಜೀವಿ ಮೇಲೆ ಇದೀಗ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ

PREV
Read more Articles on
click me!

Recommended Stories

ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !
ಇಂಡಿಗೋ ವಿಮಾನ ರದ್ದು, ಬೆಂಗ್ಳೂರು ಏರ್‌ಪೋರ್ಟ್‌ನಲ್ಲಿ ನೂಕು ನುಗ್ಗಲು, ಟಿಕೆಟ್ ಬೆಲೆ 15ರಿಂದ 80,000ಕ್ಕೆ ಏರಿಕೆ