ಗೋವಾ ಹೋಗೋದಿನ್ನು ಸುಲಭ, ಯಶವಂತಪುರರಿಂದ ಡೈರೆಕ್ಟ್ ಟ್ರೈನ್

By Kannadaprabha News  |  First Published Mar 1, 2020, 10:02 AM IST

ಮಂಗಳೂರಿನ ಪಡೀಲ್‌ ಬೈಪಾಸ್‌ ಮಾರ್ಗ ಮೂಲಕ ಯಶವಂತಪುರ- ವಾಸ್ಕೊ ರಾತ್ರಿ ಹೊಸ ರೈಲು ಆರಂಭಿಸಲು ಬೆಂಗಳೂರಿನಲ್ಲಿ ನಡೆದ ಇಂಡಿಯನ್‌ ರೈಲ್ವೆ ಟೈಮ್ ಟೇಬಲ್‌ ಕಮಿಟಿ(ಐಆರ್‌ಟಿಸಿ) ಸಭೆಯಲ್ಲಿ ಗುರುವಾರ ತೀರ್ಮಾನಿಸಲಾಗಿದೆಲ್


ಮಂಗಳೂರು(ಮಾ.01): ಮಂಗಳೂರಿನ ಪಡೀಲ್‌ ಬೈಪಾಸ್‌ ಮಾರ್ಗ ಮೂಲಕ ಯಶವಂತಪುರ- ವಾಸ್ಕೊ ರಾತ್ರಿ ಹೊಸ ರೈಲು ಆರಂಭಿಸಲು ಬೆಂಗಳೂರಿನಲ್ಲಿ ನಡೆದ ಇಂಡಿಯನ್‌ ರೈಲ್ವೆ ಟೈಮ್ ಟೇಬಲ್‌ ಕಮಿಟಿ(ಐಆರ್‌ಟಿಸಿ) ಸಭೆಯಲ್ಲಿ ಗುರುವಾರ ತೀರ್ಮಾನಿಸಲಾಗಿದೆ.

ರೈಲ್ವೇ ರಾಜ್ಯ ಸಹಾಯಕ ಸಚಿವ ಸುರೇಶ್‌ ಅಂಗಡಿ ಅವರ ಸೂಚನೆಯಂತೆ ಈ ನಿರ್ಣಯ ಕೈಗೊಳ್ಳಲಾಗಿದೆ. ಕರಾವಳಿ ಕರ್ನಾಟಕದ ರೈಲ್ವೆ ಹೋರಾಟಗಾರರ ಸುದೀರ್ಘ ಹೋರಾಟಕ್ಕೆ ಒಂದು ಹಂತದ ಜಯ ದೊರೆತಂತಾಗಿದೆ.

Latest Videos

undefined

ಮೀನುಗಾರರಿಗೆ ಬಂಪರ್: ಸೀಮೆ ಎಣ್ಣೆ ವಿತರಣೆಯಲ್ಲಿ ಹೆಚ್ಚಳ.?

ಮಾ.7ರಂದು ಯಶವಂತಪುರದಲ್ಲಿ ಈ ರೈಲು ಉದ್ಘಾಟನೆಗೆ ದಿನ ನಿಗದಿಪಡಿಸಿರುವುದಾಗಿ ಸ್ವತಃ ಕೇಂದ್ರ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್‌ ಅಂಗಡಿಯವರು ಶುಕ್ರವಾರ ಬೆಳಗ್ಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ತಿಳಿಸಿದ್ದಾರೆ. ಈ ವಿಷಯವನ್ನು ತಮ್ಮ ಟ್ವಿಟರ್‌ ಖಾತೆಯಲ್ಲೂ ಹಂಚಿಕೊಂಡಿರುವ ಜಯಪ್ರಕಾಶ್‌ ಹೆಗ್ಡೆ ಅವರು, ಕೇಂದ್ರ ಸಚಿವ ಸುರೇಶ್‌ ಅಂಗಡಿಯವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ಅಧಿಕೃತ ಆದೇಶ ಬಾಕಿ:

ಐಆರ್‌ಟಿಸಿ ಸಭೆಯಲ್ಲಿ ಕೈಗೊಂಡಿರುವ ತೀರ್ಮಾನಗಳು ದೆಹಲಿಯಲ್ಲಿರುವ ರೈಲ್ವೆ ಮಂಡಳಿಗೆ ತಲುಪಿ ಅಧಿಕೃತ ಆದೇಶ ಇನ್ನಷ್ಟೇ ಬರಬೇಕಾಗಿದೆ. ನಡುವೆ ಎರಡು ರಜಾ ದಿನಗಳು ಬರುವ ಕಾರಣ ಸೋಮವಾರ ಬಳಿಕ ಅಧಿಕೃತ ಆದೇಶವನ್ನು ನಿರೀಕ್ಷಿಸಬಹುದಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಹಾಲಿ ಬೆಂಗಳೂರು- ಕಾರವಾರ ರೈಲನ್ನೇ ಪಡೀಲು ಮಾರ್ಗವಾಗಿ ಓಡಿಸುವ ಕುರಿತು ಈ ಹಿಂದೆ ರೈಲ್ವೆ ಮಂಡಳಿ ತೆಗೆದುಕೊಂಡಿರುವ ತೀರ್ಮಾನ ರದ್ದುಪಡಿಸಿರುವ ಬಗ್ಗೆ ಮತ್ತು ಹೊಸ ರೈಲು ಆರಂಭಿಸುವ ಕುರಿತು ಹೊಸ ಆದೇಶ ಇನ್ನಷ್ಟೆಬರಬೇಕಾಗಿದೆ. ಹೊಸ ರೈಲಿನ ಅಧಿಸೂಚನೆಯಲ್ಲಿ ಪ್ರಕಟಿಸಿರುವ ವೇಳಾಪಟ್ಟಿಹಾಗೂ ರೈಲ್ವೆ ಮಂಡಳಿ ಪ್ರಕಟಿಸುವ ವೇಳಾಪಟ್ಟಿಯಲ್ಲಿ ಕೂಡ ಸ್ವಲ್ಪ ಮಟ್ಟಿನ ವ್ಯತ್ಯಾಸಗಳಿರುವ ಸಾಧ್ಯತೆಗಳಿವೆ. ಅಧಿಸೂಚನೆಯ ವೇಳಾಪಟ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ರೈಲ್ವೆ ಮಂಡಳಿ ಒಪ್ಪಬೇಕಾಗಿಲ್ಲ ಎಂದು ಮೂಲಗಳು ತಿಳಿಸಿದೆ.

ಬುಕ್ಕಿಂಗ್‌ ಯಾವಾಗ?:

ಬೆಂಗಳೂರು - ಕಾರವಾರ (ಮಂಗಳೂರು ಸೆಂಟ್ರಲ್‌ ಮಾರ್ಗ) ನಡುವೆ ಸಂಚರಿಸುತ್ತಿದ್ದ ಎರಡು ಎಕ್ಸ್‌ಪ್ರೆಸ್‌ ರಾತ್ರಿ ರೈಲುಗಳ ಮುಂಗಡÜ ಬುಕ್ಕಿಂಗ್‌ನ್ನು ಜೂ.16ರಿಂದ ರದ್ದುಪಡಿಸಲಾಗಿದೆ. ರೈಲ್ವೆ ಮಂಡಳಿಯ ಹೊಸ ಆದೇಶ ಬಂದ ಬಳಿಕವಷ್ಟೇ ಪಡೀಲ್‌ ಮಾರ್ಗದಲ್ಲಿ ಸಂಚರಿಸಲಿರುವ ಈ ರೈಲುಗಳಿಗೆ ಬುಕ್ಕಿಂಗ್‌ ಸಾಧ್ಯವಾಗಲಿದೆ.

ಪ್ರಸ್ತಾವಿತ ಹೊಸ ರೈಲು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ನೇರ ವಾಸ್ಕೊ ಸಂಪರ್ಕಿಸುವ ಮೊದಲು ರೈಲು ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರೈಲ್ವೆ ವೇಳಾಪಟ್ಟಿಸಭೆಯಲ್ಲಿ ರೈಲಿಗೆ ಕೆಲವು ಹೆಚ್ಚುವರಿ ನಿಲ್ದಾಣಗಳಲ್ಲಿ ನಿಲುಗಡೆಗೆ ಅವಕಾಶ ಕೊಡುವ ಬಗ್ಗೆ ಕೂಡ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಮಂಗಳೂರು: ಪಂಪ್‌ವೆಲ್ ಫ್ಲೖಓವರ್ ಆಯ್ತು, ಇನ್ನು ಬಸ್‌ಸ್ಟ್ಯಾಂಡ್

ಈ ಹಿಂದೆ ಘೋಷಿಸಿದಂತೆಯೇ ಪಡೀಲು ಮಾರ್ಗ ಹೊಸ ರೈಲು ಪುನರಾರಂಭಿಸಲು ಒಪ್ಪಿಗೆ ಹಾಗೂ ಮಂಗಳೂರು ಸೆಂಟ್ರಲ್‌ ಮೂಲಕ ಸಂಚರಿಸುತ್ತಿದ್ದ ರೈಲುಗಳ ಪ್ರಯಾಣ ವ್ಯವಸ್ಥೆ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಐಆರ್‌ಟಿಸಿ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನ ಶ್ಲಾಘನೀಯ. ಇದಕ್ಕಾಗಿ ಮುತುವರ್ಜಿ ವಹಿಸಿದ ಕೇಂದ್ರ ಸಚಿವ ಸುರೇಶ್‌ ಅಂಗಡಿ ಹಾಗೂ ನಿರಂತರ ಫಾಲೋಪ್‌ ಮಾಡಿದ ಕುಂದಾಪುರ ರೈಲ್ವೆ ಯಾತ್ರಿ ಸಂಘವನ್ನು ಅಭಿನಂದಿಸುತ್ತೇವೆ ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹನುಮಂತ ಕಾಮತ್‌ ತಿಳಿಸಿದ್ದಾರೆ.

click me!