ಮಂಗಳೂರು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಹೊಸ ಸೌಲಭ್ಯ ಆರಂಭ; ಸಂಪೂರ್ಣ ಡಿಜಿಟಲ್ ಸೇವೆ

Published : Mar 18, 2026, 07:49 AM IST
Mangaluru Digital Locker

ಸಾರಾಂಶ

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗಾಗಿ ಡಿಜಿಟಲ್ ಮತ್ತು ಸ್ವಯಂಚಾಲಿತ ಲಗೇಜ್ ಲಾಕರ್ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಇದು ಮೊಬೈಲ್ ಪಿನ್ ಮತ್ತು ಡಿಜಿಟಲ್ ಪಾವತಿ ಮೂಲಕ ಕಾರ್ಯನಿರ್ವಹಿಸುತ್ತದೆ. .

ಮಂಗಳೂರು: ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದ ಪ್ರಯಾಣಿಕರಿಗೆ ಇನ್ನು ಮುಂದೆ ಡಿಜಿಟಲ್ ಮತ್ತು ಸ್ವಯಂಚಾಲಿತ ಲಗೇಜ್ ಲಾಕರ್ ಸೌಲಭ್ಯ ಲಭ್ಯವಿರಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ನಿಲ್ದಾಣದ ಸೌಮ್ಯ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಈ ಸೇವೆಯನ್ನು ಉದ್ಘಾಟಿಸಲಾಯಿತು.

ಪ್ರಯಾಣಿಕರು ಮತ್ತು ಯಾತ್ರಾರ್ಥಿಗಳಿಗೆ ಆಧುನಿಕ ಮಾದರಿಯ ಸುರಕ್ಷಿತ ಲಗೇಜ್ ಶೇಖರಣಾ ವ್ಯವಸ್ಥೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಲಾಕರ್ ವ್ಯವಸ್ಥೆಯು ಮಧ್ಯಮ, ದೊಡ್ಡದು ಮತ್ತು ಅತಿ ದೊಡ್ಡ ಗಾತ್ರಗಳಲ್ಲಿ ಲಭ್ಯವಿದೆ. ಆರಂಭಿಕ ದರವು ಆರು ಗಂಟೆಗಳ ಕಾಲಕ್ಕೆ 40 ರು. ಇರಲಿದೆ ಎಂದು ನಿರ್ವಾಹಕ ಕಂಪನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಸಿಸಿಟಿವಿ ಕಣ್ಗಾವಲು

ಈ ವ್ಯವಸ್ಥೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದ್ದು, ಮೊಬೈಲ್ ಸಂಖ್ಯೆಯ ಪಿನ್‌ ಮೂಲಕ ಕಾರ್ಯನಿರ್ವಹಿಸುತ್ತದೆ. ಸಂಪೂರ್ಣ ಲಾಕರ್ ಪ್ರದೇಶ ಸಿಟಿಟಿವಿ ಕಣ್ಗಾವಲಿನಲ್ಲಿ ಇರಲಿದೆ. ಪಾವತಿಯನ್ನು ಕೇವಲ ಡಿಜಿಟಲ್ ರೂಪದಲ್ಲಿ ಮಾತ್ರ ಸ್ವೀಕರಿಸಲಾಗುವುದು, ಇದು ಪಾರದರ್ಶಕತೆ ಮತ್ತು ಸುಲಭ ಬಳಕೆಗೆ ಪೂರಕವಾಗಿದೆ.

ಸ್ಟೇಷನ್ ಮ್ಯಾನೇಜರ್ (ಆಪರೇಟಿಂಗ್) ಸುಮೇರ್ ಸಿಂಗ್ ಮೀನಾ ಮತ್ತು ಸ್ಟೇಷನ್ ಮ್ಯಾನೇಜರ್ (ಕಮರ್ಷಿಯಲ್) ಪಿ. ಸುರೇಶನ್ ಹಾಗೂ ಇತರ ಹಿರಿಯ ಅಧಿಕಾರಿಗಳು ಈ ಸೌಲಭ್ಯವನ್ನು ಉದ್ಘಾಟಿಸಿದರು.

ನಿರ್ವಾಹಕ ಕಂಪನಿಯಾದ ‘ಫೋನ್ಜೆಲ್’ ನ ಮಾರಾಟ ವ್ಯವಸ್ಥಾಪಕ ಷಣ್ಮುಗ ಸುಂದರಂ ಮಾತನಾಡಿ, ಇದು ಡ್ಯುರೋಲ್ಟ್ ಸ್ಮಾರ್ಟ್ ಲಾಕರ್ ತಂತ್ರಜ್ಞಾನದಡಿ ಅಳವಡಿಸಲಾದ ಕಂಪನಿಯ 31ನೇ ಸ್ಮಾರ್ಟ್ ಲಾಕರ್ ಆಗಿದೆ. ಸಂಪೂರ್ಣವಾಗಿ ಮೇಕ್ ಇನ್ ಇಂಡಿಯಾ ಪರಿಸರ ವ್ಯವಸ್ಥೆಯಲ್ಲಿ ನಿರ್ಮಾಣವಾಗಿರುವ ಈ ಲಾಕರ್ಗಳು 24/7 ಸ್ವಯಂಚಾಲಿತ ಪ್ರವೇಶ, ಕ್ಯೂಆರ್ ಕೋಡ್ ಆಧಾರಿತ ದೃಢೀಕರಣ ಮತ್ತು ಕ್ಲೌಡ್ ಆಧಾರಿತ ಮೇಲ್ವಿಚಾರಣೆಯನ್ನು ಹೊಂದಿವೆ ಎಂದರು.

ಈಗಾಗಲೇ ಬೆಂಗಳೂರಿನ ಕೆಎಸ್‌ಆರ್ ಮತ್ತು ಕೆಆರ್ ಪುರಂ, ಉಡುಪಿ, ಕೋಝಿಕ್ಕೋಡ್ ಮತ್ತು ಚೆನ್ನೈ ಸೆಂಟ್ರಲ್‌ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ಈ ಸೌಲಭ್ಯ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕಣ್ಣೂರು ಮತ್ತು ನಾಗಪಟ್ಟಣಂ ನಿಲ್ದಾಣಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ಎಂಆರ್‌ಪಿಎಲ್‌ನಿಂದ 1,000ನೇ ಪೆಟ್‌ಕೋಕ್ ರೈಲು ರೇಕ್ ರವಾನೆ: ಮಹತ್ವದ ಮೈಲಿಗಲ್ಲು ಸಾಧನೆ

ಮಂಗಳೂರು: ಎಂಆರ್‌ಪಿಎಲ್ ತನ್ನ ಕಾರ್ಯಾಚರಣೆಯಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಎಂಆರ್‌ಪಿಎಲ್ ಎಂಎಂಆರ್‌ಟಿ ರೈಲ್ವೆ ಸೈಡಿಂಗ್‌ನಿಂದ 1,000ನೇ ಪೆಟ್‌ಕೋಕ್ ರೈಲು ರೇಕ್ ಅನ್ನು ಯಶಸ್ವಿಯಾಗಿ ರವಾನೆ ಮಾಡಿದೆ. ಈ ಐತಿಹಾಸಿಕ ರೇಕ್ ಅನ್ನು ಮಂಗಳವಾರ ಜೆಎಸ್‌ಡಬ್ಲ್ಯೂ ಸಿಮೆಂಟ್‌ಗೆ ಕಳುಹಿಸಲಾಯಿತು.

ಈ ರೇಕ್ ಅನ್ನು ಎಂಆರ್‌ಪಿಎಲ್ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಹೆಚ್.ವಿ. ಪ್ರಸಾದ್ (ಪ್ರಾಜೆಕ್ಟ್ಸ್) ಮತ್ತು ದೀಪಕ್ ಪ್ರಭಾಕರ್ (ಮಾರ್ಕೆಟಿಂಗ್)ಅವರು ಬಾವುಟ ತೋರಿಸಿ ಚಾಲನೆ ನೀಡಿದರು.

PREV
Read more Articles on
click me!

Recommended Stories

ಮಾನವನ ವ್ಯಾಮೋಹದಿಂದ ಯುದ್ಧ: ಭಾರತದಲ್ಲಿ ಶಾಂತಿ ನೆಲೆಸಲು ಕಾರಣ ಇಲ್ಲಿ ಧರ್ಮ ಇದೆ, ನಮ್ಮಂತಹ ಗುರುಗಳಿದ್ದೇವೆ -ಸಾಣೇಹಳ್ಳಿ ಶ್ರೀಗಳು
ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆ; ತಲೆಮೇಲೆ ಕಲ್ಲು ಹಾಕಿ ಕೊಂದ ಅಣ್ಣ!