ಪಿಂಚಣಿದಾರರ ಮನೆ ಬಾಗಿಲಿಗೆ ಬರಲಿದೆ ಡಿಜಿಟಲ್ ಪ್ರಮಾಣ ಪತ್ರ..!

Published : Nov 17, 2023, 09:15 PM IST
ಪಿಂಚಣಿದಾರರ ಮನೆ ಬಾಗಿಲಿಗೆ ಬರಲಿದೆ ಡಿಜಿಟಲ್ ಪ್ರಮಾಣ ಪತ್ರ..!

ಸಾರಾಂಶ

ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಕೆಲವೇ ನಿಮಿಷಗಳಲ್ಲಿ  ಪೋಸ್ಟ್‌ ಮ್ಯಾನ್ ಮೂಲಕ ಆಧಾರ ಸಂಖ್ಯೆ ಮೊಬೈಲ್ ಸಂಖ್ಯೆ,  ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ(ನ.17):  ಪಿಂಚಣಿದಾರರು ವೈಯಕ್ತಿಕವಾಗಿ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಸಮಯದಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ತಪ್ಪಿಸಲು ಭಾರತೀಯ ಅಂಚೆ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಡಿಯಾ ಪೇಮೆಂಟ್ಸ್ ಬ್ಯಾಂಕ್, ಪಿಂಚಣಿದಾರರ ಮನೆ ಬಾಗಿಲಿನಲ್ಲಿ, ಡಿಜಿಟಲ್ ಪ್ರಮಾಣ ಪತ್ರವನ್ನು ಸಲ್ಲಿಸಲು ವ್ಯವಸ್ಥೆ ಮಾಡಿದೆ.

ಕರ್ನಾಟಕ ರಾಜ್ಯ ಸರ್ಕಾರದ ಪಿಂಚಣಿದಾರರಿಗೆ, ಕುಟುಂಬ ಪಿಂಚಣಿದಾರರಿಗೆ ಡಿಜಿಟಲ್ ಸರ್ಟಿಫಿಕೇಟ್ (ಡಿಎಲ್‍ಸಿ) ಸೇವೆಗಳನ್ನು ಸುಲಭವಾಗಿ ಒದಗಿಸಲು ಕರ್ನಾಟಕ ರಾಜ್ಯ ಸರ್ಕಾರದ ಖಜಾನೆ ಆಯುಕ್ತರೊಂದಿಗೆ ಭಾರತೀಯ ಅಂಚೆ ಇಲಾಖೆಯ ಅಡಿಯಲ್ಲಿ ಬರುವ ಇಂಡಿಯಾ ಪೆಸ್ಟ್ ಪೇಮೆಂಟ್ಸ್ ಬ್ಯಾಂಕ್ ತಿಳುವಳಿಕೆ ಪತ್ರ (ಎಂಒಯು) ಕ್ಕೆ ಸಹಿ ಹಾಕಿದೆ ತಿಳುವಳಿಕೆ ಪತ್ರದ (ಎಂಒಯು) ಅಡಿಯಲ್ಲಿ, ಐಪಿಪಿಬಿ ಯು ನವೆಂಬರ್ 1 ರಿಂದ ನವೆಂಬರ್ 30, 2023 ರವರೆಗಿನ ಮಸ್ಟರಿಂಗ್ ಅವಧಿಯಲ್ಲಿ 5.4 ಲಕ್ಷ ಕರ್ನಾಟಕ ಸರಕಾರದ ಪಿಂಚಣಿದಾರರು, ಕುಟುಂಬ ಪಿಂಚಣಿದಾರರಿಗೆ ಡಿಎಲ್‍ಸಿ ಸೇವೆಗಳನ್ನು ಒದಗಿಸುತ್ತದೆ.

ತಾಲೂಕು ಬದಲಾವಣೆಗೆ ಗಾಬರಿಗೊಂಡ ಜನ: ಸಚಿವ ಸಂತೋಷ್ ಲಾಡ್ ಭೇಟಿ ಮಾಡಿ ಮನವಿ ಸಲ್ಲಿಕೆ

ಪಿಂಚಣಿದಾರರು ತಮ್ಮ ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಕೆಲವೇ ನಿಮಿಷಗಳಲ್ಲಿ  ಪೋಸ್ಟ್‌ ಮ್ಯಾನ್ ಮೂಲಕ ಆಧಾರ ಸಂಖ್ಯೆ ಮೊಬೈಲ್ ಸಂಖ್ಯೆ,  ಪಿಪಿಒ ಸಂಖ್ಯೆ ಮತ್ತು ಪಿಂಚಣಿದಾರರ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ತಮ್ಮ ಬಯೋಮೆಟ್ರಿಕ್ (ಬೆರಳಚ್ಚು) ವೆರಿಫೈ ಮಾಡಿ ಸಲ್ಲಿಸಬಹುದು.

ಇಂಡಿಯಾ ಪೆಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ) ಅನ್ನು ಸೆಪ್ಟೆಂಬರ್ 01, 2018 ರಂದು ರಾಷ್ಟ್ರವ್ಯಾಪಿ ಪ್ರಾರಂಭಿಸಲಾಯಿತು. ಐಪಿಪಿಬಿ ಯ ಸೇವೆಗಳು ಈಗಾಗಲೇ ಸೇರ್ಪಡೆಗೊಂಡಿರುವ 8 ಕೋಟಿ ಗ್ರಾಹಕರಿಗೆ ಹಾಗೂ ಇನ್ನಿತರರಿಗೆ ದೇಶಾದ್ಯಂತ 1,36,000 ಅಂಚೆ ಕಚೇರಿಗಳ ಮೂಲಕ ಲಭ್ಯವಿದೆ. ಕರ್ನಾಟಕದಲ್ಲಿ  ಐಪಿಪಿಬಿ ಯು 31 ಶಾಖೆಗಳನ್ನು ಹೊಂದಿದ್ದು, ಅದರ ಜೊತೆಗೆ 9500 ಕ್ಕೂ ಹೆಚ್ಚು ಪೋಸ್ಟ್ ಮ್ಯಾನ್‍ಗಳು ಅವರ ದೈನಂದಿನ ಡೆಲಿವರಿ ಬೀಟ್‍ನಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್ ಫೋನ್ ಮತ್ತು ಬಯೋಮೆಟ್ರಿಕ್ ಸಾಧನಗಳನ್ನು ಹೊಂದಿದ್ದಾರೆ.

ಕರ್ನಾಟಕ ಸರ್ಕಾರದ ಪಿಂಚಣಿದಾರರು ಕುಟುಂಬ ಪಿಂಚಣಿದಾರರು ತಮ್ಮ ಹತ್ತಿರದ ಅಂಚೆ ಕಛೇರಿಯಲ್ಲಿ ಅಥವಾ ಪೋಸ್ಟ್ ಮ್ಯಾನ್ ಮೂಲಕ ಕೇವಲ 70 ರೂ. ಗಳ (ಜಿಎಸ್‍ಟಿ ಸೇರಿದಂತೆ) ಶುಲ್ಕ ನೀಡಿ ಈ ಸೌಲಭ್ಯವನ್ನು ಪಡೆದು ತಮ್ಮ ಡಿಜಿಟಲ್ ಪ್ರಮಾಣಪತ್ರವನ್ನು ಸಲ್ಲಿಸಬೇಕೆಂದು ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ