Udupi: 11ನೇ ಫ್ಲೋರ್ ಮನೆಯ ಬಾಲ್ಕನಿಯಿಂದ ಜಾರಿದ ಮಗು, ಅಗ್ನಿಶಾಮಕ ದಳದ ರೋಚಕ ಕಾರ್ಯಾಚರಣೆ

By Gowthami K  |  First Published Jul 10, 2023, 6:16 PM IST

ವಿಶೇಷ ಚೇತನ ಮಗುವೊಂದು ಬಹು ಮಹಡಿ ಕಟ್ಟಡದ 11ನೇ ಫ್ಲೋರ್ ನಿಂದ ಹತ್ತನೇ ಫ್ಲೋರ್ ಗೆ ಜಾರಿ ಕುಳಿತು, ಪೋಷಕರಲ್ಲಿ ಮತ್ತು ಪರಿಸರದ ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಉಡುಪಿಯಲ್ಲಿ ನಡೆಯಿತು.


ಉಡುಪಿ (ಜು.10): ವಿಶೇಷ ಚೇತನ ಮಗುವೊಂದು ಬಹು ಮಹಡಿ ಕಟ್ಟಡದ 11ನೇ ಫ್ಲೋರ್ ನಿಂದ ಹತ್ತನೇ ಫ್ಲೋರ್ ಗೆ ಜಾರಿ ಕುಳಿತು, ಪೋಷಕರಲ್ಲಿ ಮತ್ತು ಪರಿಸರದ ಜನರಲ್ಲಿ ಆತಂಕ ಉಂಟು ಮಾಡಿದ ಘಟನೆ ಉಡುಪಿಯಲ್ಲಿ ನಡೆಯಿತು. ಮಳೆಗಾಲದ ಅವಧಿಯಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಎತ್ತರದಿಂದ ಬಿದ್ದ ಮಗು ಅಪಾಯಕ್ಕಿಡಾಗುವ ಸಂದರ್ಭವಿತ್ತು. ಅದೃಷ್ಟವಶಾತ್ ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ, ಸಂಭಾವ್ಯ ಅವಘಡ ತಪ್ಪಿದೆ.

ಉಡುಪಿಯಲ್ಲಿ ಅಗ್ನಿಶಾಮಕ ದಳದವರಿಗೆ ಸದ್ಯಕ್ಕೆ ಪುರುಸೊತ್ತಿಲ್ಲ. ಕಳೆದ ಒಂದು ವಾರ ಸುರಿದ ಭಾರಿ ಮಳೆಯಿಂದಾಗಿ, ಅನೇಕ ಕಡೆ ರಕ್ಷಣಾ ಕಾರ್ಯಾಚರಣೆಗಳಿಗೆ ಧಾವಿಸುವಂಥಾಗಿದೆ. ಕೊನೆಗೂ ಮಳೆರಾಯ ಕೊಂಚ ಬಿಡುವು ನೀಡಿದ್ದಾನೆ, ಆದರೆ ಇಂದು ಕೂಡ ಉಡುಪಿಯ ಅಗ್ನಿಶಾಮಕ ದಳದವರು ಮಹತ್ವದ ಕಾರ್ಯಾಚರಣೆಯೊಂದನ್ನು ನಡೆಸಬೇಕಾಯಿತು.

Tap to resize

Latest Videos

undefined

ಪುನೀತ್ ರಾಜ್ ಕುಮಾರ್ ಪೋಟೊ ತೆಗೆಸಿದ್ದೆ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆಗೆ ಕಾರಣವಾಯಿತಾ?

ಎಂಟು ವರ್ಷದ ಪುಟ್ಟ ಬಾಲಕನೊಬ್ಬ, ಏನೋ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡ. ಉಡುಪಿ ನಗರದ ಹೃದಯ ಭಾಗದಲ್ಲಿರುವ ಬ್ರಹ್ಮಗಿರಿಯಲ್ಲಿನ ಖಾಸಗಿ ಅಪಾರ್ಟ್ಮೆಂಟ್ ನಲ್ಲಿ ಬಾಲಕ ಆರುಶ್ ಅಪಾಯ ಎದುರು ಹಾಕಿಕೊಂಡಿದ್ದ. ವಿಶೇಷ ಚೇತನ ಮಗುವಾದ ಈತ, ತನ್ನ ಮನೆ ಇರುವ 11ನೇ ಫ್ಲೋರ್ ನ ಬಾಲ್ಕನಿಯ ಮೂಲಕ ಹೊರ ಹೋಗಿ ಹತ್ತನೇ ಫ್ಲೋರ್ ನ ಕಿಟಕಿಯಲ್ಲಿ ಸಿಲುಕಿಕೊಂಡಿದ್ದ. ಕಿಟಕಿ ಮೇಲಿನ ಫೋರಂನಲ್ಲಿ ಕುಳಿತುಕೊಂಡಿದ್ದ. ಮನೆಯವರ ಕಣ್ಣು ತಪ್ಪಿಸಿ ಈ ಸಾಹಸಕ್ಕೆ ಕೈ ಹಾಕಿದ್ದ. ಅರಿವಿಲ್ಲದ ಮಗು ಮಾಡಿದ ಈ ತಪ್ಪಿನಿಂದಾಗಿ, ಪೋಷಕರು ಮಾತ್ರವಲ್ಲ ಫ್ಲಾಟ್ ನಲ್ಲಿದ್ದ ನೂರಾರು ಜನ ಆತಂಕ ಕೀಡಾದರು.

ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಧಾವಿಸಿ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೊಡಲೆ ಕಾರ್ಯಪ್ರವೃತ್ತರಾದರು. ಪ್ಲಾಟಿನ ಹನ್ನೊಂದನೇ ಫ್ಲೋರ್ ನಲ್ಲಿರುವ ಬಾಲಕನ ಮನೆಯಿಂದ, ಹತ್ತನೇ ಫ್ಲೋರ್ ಗೆ ಹಗ್ಗ ಹಾಕಿ, ಸಿಬ್ಬಂದಿಗಳು ಮಗುವನ್ನು ಎತ್ತಿ ಮೇಲಕ್ಕೆ ಕರೆತಂದರು. ಈ ರೋಚಕ  ಕಾರ್ಯಾಚರಣೆ, ಪೋಷಕರು ಮಾತ್ರವಲ್ಲ ಅಲ್ಲಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿತು.

ಕತ್ತು ಸೀಳಿ ಬರ್ಬರ ಹತ್ಯೆ, ಕೋಳಿ ಸಾಗಾಣಿಕೆ ಮಾಡುತ್ತಿದ್ದ ಯುವಕನ ಕೊಲೆಯ ಸುತ್ತ ಹಲವು ಅನುಮಾನ

ಅಗ್ನಿಶಾಮಕ ಸಿಬ್ಬಂದಿಗಳ ಸಾಹಸಕ್ಕೆ ಪೋಷಕರು ಕಣ್ಣೀರಾದರು. ತಾನೇ ಏನು ಮಾಡುತ್ತೇನೆ ಎಂಬ ಅರಿವಿಲ್ಲದ ವಿಶೇಷ ಚೇತನ ಮಗು ಮಾಡಿದ ದುಸ್ಸಾಹಸ, ಕೆಲ ಕಾಲ ಈ ಪರಿಸರದಲ್ಲಿ ಉದ್ವಿಗ್ನ ಸ್ಥಿತಿಯನ್ನು ಉಂಟು ಮಾಡಿತ್ತು. ಸಿಬ್ಬಂದಿಗಳ ಸಕಾಲಿಕ ಕಾರ್ಯಾಚರಣೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ತುಂಟಾಟ ಮಾಡುವ ಮಕ್ಕಳ ಮೇಲೆ ಎಷ್ಟು ಗಮನವಿಟ್ಟರೂ, ಇಂಥ ಅವಘಡಗಳು ಸಂಭವಿಸುವುದು, ಸಾಮಾನ್ಯ. ಅದರಲ್ಲೂ ನಗರದಲ್ಲಿ ಇತ್ತೀಚಿಗೆ ಹೆಚ್ಚುತ್ತಿರುವ ಬಹು ಮಹಡಿ ಕಟ್ಟಡಗಳ ಬಾಲ್ಕನಿಗೆ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಇರುವುದರಿಂದ, ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಪರಿಸ್ಥಿತಿ ಉಂಟಾಗಿದೆ. ನಗರದ ಹೃದಯ ಭಾಗದಲ್ಲಿ ಫ್ಲ್ಯಾಟ್ ಇದ್ದುದರಿಂದ, ಸ್ವಲ್ಪವೇ ದೂರದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಕಾಲದಲ್ಲಿ ಕಾರ್ಯಚರಣೆ ನಡೆಸಲು ಅನುಕೂಲವಾಗಿದೆ. ಮಗುವಿನ ಆಯುಷ್ಯ ಗಟ್ಟಿ ಇದ್ದ ಕಾರಣ ಪ್ರಕರಣ ಸುಖಾಂತ್ಯ ಕಂಡಿದೆ

click me!