‘ನಿಮ್ಮಪ್ಪ ಅಕ್ಕಿ ಕೊಟ್ಟರ ಐಕ್ಳುಗ ಇಸ್ಕೂಲ್ಲಿ ಬಟ್ಟಕೊಟ್ಟರಾ...ಅನ್ನ ಕೊಟ್ಟವ್ರ ಮರುತ್ರಾ ಮ್ಯಾಲೀರ ಭಗವಂತ ಮೆಚ್ದನ್ನಪ್ಪಾ...ನಮ್ಮೂರಲ್ಲಿ ನಾವೂ ಆ ಕಾಲ್ದಿಂದೂ ಹಸ್ತಕ್ಕೆ ಒತ್ತದು ಒಳ್ಳೇದಾಗ್ಲಿ ಕಪ್ಪಾ...’ ಹೀಗೆ ವೃದ್ಧೆಯೊಬ್ಬರು ಯತೀಂದ್ರ ಸಿದ್ದರಾಮಯ್ಯಗೆ ಆಶಿರ್ವಾದ ಮಾಡಿದ್ದಾರೆ.
ಮೈಸೂರು(ಡಿ.01): ‘ನಿಮ್ಮಪ್ಪ ಅಕ್ಕಿ ಕೊಟ್ಟರ ಐಕ್ಳುಗ ಇಸ್ಕೂಲ್ಲಿ ಬಟ್ಟಕೊಟ್ಟರಾ...ಅನ್ನ ಕೊಟ್ಟವ್ರ ಮರುತ್ರಾ ಮ್ಯಾಲೀರ ಭಗವಂತ ಮೆಚ್ದನ್ನಪ್ಪಾ...ನಮ್ಮೂರಲ್ಲಿ ನಾವೂ ಆ ಕಾಲ್ದಿಂದೂ ಹಸ್ತಕ್ಕೆ ಒತ್ತದು ಒಳ್ಳೇದಾಗ್ಲಿ ಕಪ್ಪಾ...’
ಹೀಗೆ ಮತಯಾಚಿಸಲು ಹೋದ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಅಜ್ಜಿಯೊಬ್ಬರು ಆಶೀರ್ವಾದ ಮಾಡಿದ ರೀತಿ. ಹುಣಸೂರು ವಿಧಾನಸಭಾ ಕ್ಷೇತ್ರದ ವದ್ದಿಲಿಮನುಗನಹಳ್ಳಿ ಗ್ರಾಮದ ಕೆಂಪೀರಮ್ಮ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯನವರಿಗೆ ಆಶೀರ್ವಾದ ಮಾಡಿದರು. ಮಾಜಿ ಶಾಸಕ ಎಂ.ಕೆ. ಸೋಮಶೇಖರ್, ಜಿಪಂ ವಿಪಕ್ಷ ನಾಯಕ ಡಿ. ರವಿಶಂಕರ್ ಮತ್ತಿತರರು ಹಾಜರಿದ್ದರು.
ಬಾಗಲಕೋಟೆ ಮಹಿಳೆ ಮೇಲೆ ಉತ್ತರಾಖಂಡದಲ್ಲಿ ಅತ್ಯಾಚಾರ!
ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದ್ದು, ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ.
'ಡಿಕೆಶಿ ಜೈಲಿನಿಂದ ಬಂದಿದ್ದು ಸಿದ್ದರಾಮಯ್ಯಗೆ ದುಃಖ ತಂದಿದೆ'