ನಗರಕ್ಕೆ ರಸ್ತೆ ನಿರ್ಮಾಣದ ದುಡ್ಡು ನಿಮ್ಮ ಮಾವನ ಮನೆಯಿಂದ ತಂದಿದ್ದಿರಾ?: ಆಪ್‌ ಪ್ರಶ್ನೆ

By Kannadaprabha NewsFirst Published Mar 11, 2023, 5:25 AM IST
Highlights

ಮೈಸೂರು- ಬೆಂಗಳೂರು ದಶಪಥ ನಿರ್ಮಾಣದ ಕ್ರೆಡಿಟ್‌ ಪಡೆಯಲು ಜೆಸಿಬಿ ಪಕ್ಷಗಳು ಬೀದಿ ನಾಯಿಗಳಂತೆ ಕಚ್ಚಾಡುತ್ತಿವೆ. ಇದು ಜನರ ತೆರಿಗೆ ಹಣದಿಂದ ತಯಾರಾದ ರಸ್ತೆ, ಇದಕ್ಕೆ ಉದ್ಘಾಟನೆ ಮಾಡುವ ಅಧಿಕಾರ ಯಾರಿಗಾದರೂ ಇದ್ದರೆ ಅದು ಕೇವಲ ಒಬ್ಬ ಸಾಮಾನ್ಯ ತೆರಿಗೆದಾರನಿಗೆ ಮಾತ್ರ. ತೆರಿಗೆ ಹಣ ದೋಚುತ್ತಿರುವ ರಾಜಕಾರಣಿಗಳಿಗೆ ಖಂಡಿತಾ ಅಲ್ಲ ಎಂದು ಆಮ್‌ ಆದ್ಮಿ ಜಿಲ್ಲಾಧ್ಯಕ್ಷ ಎಲ್…. ರಂಗಯ್ಯ ಹೇಳಿದರು.

 ಮೈಸೂರು :  ಮೈಸೂರು- ಬೆಂಗಳೂರು ದಶಪಥ ನಿರ್ಮಾಣದ ಕ್ರೆಡಿಟ್‌ ಪಡೆಯಲು ಜೆಸಿಬಿ ಪಕ್ಷಗಳು ಬೀದಿ ನಾಯಿಗಳಂತೆ ಕಚ್ಚಾಡುತ್ತಿವೆ. ಇದು ಜನರ ತೆರಿಗೆ ಹಣದಿಂದ ತಯಾರಾದ ರಸ್ತೆ, ಇದಕ್ಕೆ ಉದ್ಘಾಟನೆ ಮಾಡುವ ಅಧಿಕಾರ ಯಾರಿಗಾದರೂ ಇದ್ದರೆ ಅದು ಕೇವಲ ಒಬ್ಬ ಸಾಮಾನ್ಯ ತೆರಿಗೆದಾರನಿಗೆ ಮಾತ್ರ. ತೆರಿಗೆ ಹಣ ದೋಚುತ್ತಿರುವ ರಾಜಕಾರಣಿಗಳಿಗೆ ಖಂಡಿತಾ ಅಲ್ಲ ಎಂದು ಆಮ್‌ ಆದ್ಮಿ ಜಿಲ್ಲಾಧ್ಯಕ್ಷ ಎಲ್…. ರಂಗಯ್ಯ ಹೇಳಿದರು.

2013ರ ನವೆಂಬರ್‌ 14ರಂದು ಚತ್ತೀಸಘಡದಲ್ಲಿ ಮಾತನಾಡುತ್ತ ಅಲ್ಲಿಗೆ ಕೇಂದ್ರದಿಂದ ಬಂದ ಹಣದ ಬಗ್ಗೆ ಮಾತನಾಡುತ್ತಾ ಮುಖ್ಯಮಂತ್ರಿ ಮೋದಿ ಅವರು ರಾಹುಲ್‌ ಮತ್ತು ಸೋನಿಯಾ ಗಾಂಧಿಯ ಅರನ್ನು ಒಂದು ಒಳ್ಳೆಯ ಪ್ರಶ್ನೆ ಕೇಳಿದ್ದರು. ಈ ಹಣ ನಿಮ್ಮ ಮಾವನ ಮನೆಯಿಂದ ಬಂದಿತ್ತಾ? ಎಂದು. ಅದನ್ನೇ ನಾವು ಇಂದು ಮತ್ತೊಮ್ಮೆ ನೆನೆಪಿಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

Latest Videos

2014ರಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ನಮ್‌ರ್‍ ಯೋಜನೆಯಡಿಯಲ್ಲಿ ಮೈಸೂರಿನ ನಾಲ್ಕು ವಾಹನ ದಟ್ಟಣೆ ಇರುವ ಜಂಕ್ಷನ್‌ಗಳಲ್ಲಿ ಮೇಲ್ಸೇತುವೆಗೆ ಕೇಂದ್ರದ ಒಪ್ಪಿಗೆ ಪಡೆದು ಕೆಲಸಕ್ಕೆ . 65 ಕೋಟಿ ಹಣವೂ ಕೂಡ ಬಿಡುಗಡೆ ಆಗಿತ್ತು. ಒಂಬತ್ತು ವರ್ಷ ಕಳೆದರೂ ಅದರಲ್ಲಿ ಕೇವಲ ಹಿನಕಲ…-ರಿಂಗ್‌ ರೋಡ್‌ ಒಂದು ಮಾತ್ರ, ಉಪಯೋಗಕ್ಕೆ ಬಂದಿದೆ. ಬೆಂಗಳೂರು-ಮೈಸೂರು ರಸ್ತೆ ಮಣಿಪಾಲ್‌ ಆಸ್ಪತ್ರೆ ಜಂಕ್ಷನ್‌ ಈಗ ತಯಾರಾಗುತ್ತಿದೆ. ಇನ್ನೆರಡರ ಸುದ್ದಿಯೇ ಇಲ್ಲ ಎಂದು ಅವರು ಟೀಕಿಸಿದ್ದಾರೆ.

ತಂತ್ರಗಾರಿಗೆಕೆ  ಸಿದ್ಧತೆ

 

ಹುಬ್ಬಳ್ಳಿ (ಮಾ.4) : ದೆಹಲಿ ಹಾಗೂ ಪಂಜಾಬ್‌ ರಾಜ್ಯಗಳಲ್ಲಿ ವಿನೂತನ ರೀತಿಯಲ್ಲಿ ತಂತ್ರಗಾರಿಕೆ ಮಾಡಿ ಅಧಿಕಾರದ ಗದ್ದುಗೆ ಏರಲು ಯಶಸ್ವಿಯಾಗಿರುವ ಆಮ್‌ ಆದ್ಮಿ ಪಕ್ಷವು ಕರ್ನಾಟಕದಲ್ಲಿ ಅದೇ ಮಾದರಿ ತಂತ್ರಗಾರಿಕೆಗೆ ಸಿದ್ಧತೆ ನಡೆಸಿದೆ.

ರಾಜ್ಯದ 224 ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಆಪ್‌, ಯಾವ ರೀತಿ ಚುನಾವಣೆ ತಯಾರಿ ನಡೆಸಬೇಕು ಎಂದು ತಿಳಿಹೇಳಿ ತಂತ್ರ ರೂಪಿಸಲು ಇದೇ ಮೊದಲ ಬಾರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌(Arvind Kejriwal) ಮಾ. 4ಕ್ಕೆ ಹುಬ್ಬಳ್ಳಿ ಹಾಗೂ ದಾವಣಗೆರೆ(Davanagere)ಗೆ ಆಗಮಿಸಲಿದ್ದಾರೆ.

ಗ್ಯಾಸ್‌ ಹೋಯ್ತು ಸೌದೆ ಬಂತು: ಬಿಜೆಪಿ ಹೋಗುತ್ತೆ, ಕಾಂಗ್ರೆಸ್‌ ಬರು​ತ್ತೆ: ಕಾಂಗ್ರೆಸ್ ವಿನೂತನ ಪ್ರತಿಭಟನೆ

ಕಳೆದ 12 ವರ್ಷಗಳ ಹಿಂದೆಯಷ್ಟೇ ಅಸ್ತಿತ್ವಕ್ಕೆ ಬಂದಿರುವ ಆಪ್‌, ಈಗಾಗಲೇ ಎರಡು ರಾಜ್ಯಗಳಲ್ಲಿ ಬೇರೂರಿ ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಕಳೆದ ಚುನಾವಣೆಯಲ್ಲಿ ಕರ್ನಾಟಕದಲ್ಲೂ ತನ್ನ ಪೊರಕೆಯ ಕಮಾಲ್‌ ತೋರಿಸಲು ಯತ್ನಸಿತ್ತು. ಈ ಸಲ ಖುದ್ದು ಅರವಿಂದ ಕೇಜ್ರಿವಾಲ್‌ ಅವರೇ ಅಖಾಡಕ್ಕಿಳಿಯಲಿದ್ದಾರೆ. ಅದರ ಮೊದಲ ಹಂತವಾಗಿ ಮಾ.4ರಂದು ಕಾರ್ಯಕ್ರಮಗಳು ನಡೆಯಲಿವೆ.

ಹುಬ್ಬಳ್ಳಿಯಲ್ಲಿ ಗೌಪ್ಯಸಭೆ:

ದಾವಣಗೆರೆಯಲ್ಲಿ ಬೃಹತ್‌ ಸಮಾವೇಶ(Convention)ವನ್ನು ಮಾ. 4ಕ್ಕೆ ಆಯೋಜಿಸಲಾಗಿದೆ. ಅದರಲ್ಲಿ ಕೇಜ್ರಿವಾಲ್‌ ಹಾಗೂ ಪಂಜಾಬ್‌ ಮುಖ್ಯಮಂತ್ರಿ ಭಗವತ್‌ ಸಿಂಗ್‌ ಮಾನ್‌(Punjab Chief Minister Bhagwat Singh Mann) ಪಾಲ್ಗೊಳ್ಳಲಿದ್ದಾರೆ. ದಾವಣಗೆರೆಗೆ ಹೋಗುವ ಮುನ್ನ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಈ ಭಾಗದ ಆಕಾಂಕ್ಷಿಗಳೊಂದಿಗೆ ಗೌಪ್ಯ ಸಭೆ ನಡೆಸಲಿದ್ದು, ಚುನಾವಣಾ ತಂತ್ರಗಾರಿಕೆಯನ್ನು ರೂಪಿಸಲಿದ್ದಾರೆ. ಚುನಾವಣೆಗೆ ಯಾವ ರೀತಿ ತಯಾರಿ ನಡೆಸಬೇಕು? ತಮ್ಮ ಪಕ್ಷದ ಮೂಲ ಸಿದ್ಧಾಂತಗಳೇನು? ಜನರನ್ನು ಸೆಳೆಯಬೇಕೆಂದರೆ ಏನೆಲ್ಲ ಮಾಡಬೇಕು? ಎದುರಾಳಿ ಪಕ್ಷಗಳ ತಂತ್ರಗಾರಿಕೆಗೆ ನಾವು ಯಾವ ರೀತಿ ಪ್ರತಿ ತಂತ್ರಗಾರಿಕೆ ಮಾಡಬೇಕು ಎಂಬ ಬಗ್ಗೆ ತಿಳಿಸಲಿದ್ದಾರೆ. ಇದೇ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸಲಿರುವ ಕೇಜ್ರಿವಾಲ್‌ಗೆ ಹುಬ್ಬಳ್ಳಿಯಲ್ಲಿ ಪಕ್ಷದ ಕಾರ್ಯಕರ್ತರು ಸ್ವಾಗತಿಸಲಿದ್ದು, ಇಲ್ಲಿನ ಚುನಾವಣಾ ತಯಾರಿ ಬಗ್ಗೆ ವಿವರಿಸಲಿದ್ದಾರೆ.

click me!