ಕಾಂಗ್ರೆಸ್‌ನವ್ರು ಹಿಡನ್ ಕ್ಯಾಮೆರಾ ಇಟ್ಟು ರೆರ್ಕಾಡ್ ಮಾಡಿಸಿದ್ದಿವಾ?: ಎಚ್‌ಡಿಕೆಗೆ ಪ್ರಿಯಾಂಕ್‌ ಪ್ರಶ್ನೆ

By Kannadaprabha News  |  First Published May 9, 2024, 6:58 AM IST

ರೆಕಾರ್ಡ್ ಮಾಡಿದ್ದು ಅವರು, ಪೆನ್‌ಡ್ರೈವ್ ಮಾಡಿದ್ದು ಅವರ ಡ್ರೈವರ್, ಹಂಚಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ. ಸುಮ್ಮನೆ ಮಹಾನಾಯಕ ಅಂತ ಆರೋಪ ಮಾಡೋದು ಬಿಡಬೇಕು. ಎಚ್.ಡಿ.ಕೆ. ಯವರು ಎಸ್‌ಐಟಿಯನ್ನ ತ್ರಿಬಲ್ ಎಸ್ ಅಂತಾರೆ. ಮೊದಲು ನಿಮ್ಮ ಡಬಲ್ ಆರ್ ಬಗ್ಗೆ ಮಾತನಾಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದ ಸಚಿವ ಪ್ರಿಯಾಂಕ್ ಖರ್ಗೆ 


ಕಲಬುರಗಿ(ಮೇ.09): ಪ್ರಜ್ವಲ್ ರೇವಣ್ಣ ಕೇಸ್‌ನಲ್ಲಿ ಕೈ ಮಹಾನಾಯಕರ ಕೈವಾಡವಿದೆ ಎಂಬ ಎಚ್‌ಡಿಕೆ ಹೇಳಿಕೆ ವಿಚಾರ‌ದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಆರ್‌ಡಿಪಿಆರ್‌ ಖಾತೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಪದೇ ಪದೇ ಎಚ್‌ಡಿಕೆ ಕಾಂಗ್ರೆಸ್ ಮೇಲೆ ಆರೋಪ ಮಾಡೋದ್ಯಾಕೆ? ನಾವ್ ಏನಾದ್ರು ಹಿಡನ್ ಕ್ಯಾಮೆರಾ ಇಟ್ಟು ರೇಕಾರ್ಡ್‌ ಮಾಡಿಸಿದ್ದಿವಾ ಎಂದು ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಕಾರ್ಡ್ ಮಾಡಿದ್ದು ಅವರು, ಪೆನ್‌ಡ್ರೈವ್ ಮಾಡಿದ್ದು ಅವರ ಡ್ರೈವರ್, ಹಂಚಿದ್ದು ಬಿಜೆಪಿ ಪರಾಜಿತ ಅಭ್ಯರ್ಥಿ. ಸುಮ್ಮನೆ ಮಹಾನಾಯಕ ಅಂತ ಆರೋಪ ಮಾಡೋದು ಬಿಡಬೇಕು. ಎಚ್.ಡಿ.ಕೆ. ಯವರು ಎಸ್‌ಐಟಿಯನ್ನ ತ್ರಿಬಲ್ ಎಸ್ ಅಂತಾರೆ. ಮೊದಲು ನಿಮ್ಮ ಡಬಲ್ ಆರ್ ಬಗ್ಗೆ ಮಾತನಾಡಿ. ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ಬಗ್ಗೆ ಯಾಕೆ ಮಾತನಾಡ್ತಿಲ್ಲ ಎಂದು ಪ್ರಶ್ನಿಸಿದರು.

Tap to resize

Latest Videos

undefined

ಕುಮಾರಸ್ವಾಮಿ ಬ್ಲಾಕ್ಮೇಲರ್‌ಗಳ ಕಿಂಗ್‌: ಡಿ.ಕೆ.ಶಿವಕುಮಾರ್‌ ಕಿಡಿ

ಹೆಣ್ಮಕ್ಕಳ ಮಾನ ಹರಾಜು ಹಾಕಿದ್ದಾರೆ ಎನ್ನೋರು ವಿಡಿಯೋ ರೆಕಾರ್ಡ್‌ ಮಾಡಿಕೊಂಡವರ ಬಗ್ಗೆ ಮಾತನಾಡಬೇಕಲ್ವಾ? ನಮ್ಮ ಮನೆ ಮಗನಿಂದ ತಪ್ಪಾಗಿದೆ ಅಂತ ಮೊದಲು ಆ ಸಂತ್ರಸ್ತ ಹೆಣ್ಮಕ್ಕಳ ಕ್ಷೆಮೆ ಕೇಳಿ ಎಂದು ಕುಮಾರಸ್ವಾಮಿಯವರಿಗೆ ಟಾಂಗ್‌ ನೀಡಿದರು.

ಅಶೋಕಣ್ಣ ನಮ್ಮ ನಾಯಕರನ್ನ ಸ್ಕ್ರಿಪ್ಟ್ ರೈಟರ್, ಡೈರೆಕ್ಟರ್, ಪ್ರಡ್ಯೂಸರ್ ಅಂತಾರೆ. ಆದ್ರೆ ಆ ವಿಡಿಯೊದಲ್ಲಿರೋ ಆ್ಯಕ್ಟರ್ ಯಾರು ಎಂದು ಬಿಜೆಪಿಯ ಆರ್ ಅಶೋಕ್ ಗೆ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದರು.
ಆ ಆ್ಯಕ್ಟರ್ ನಮ್ಮ ಪ್ರಕಾರ ವಿಲನ್. ಬಿಜೆಪಿಯವರ ಪ್ರಕಾರ ಹಿರೋ. ಅಶೋಕಣ್ಣ ಡೈರೆಕ್ಟರ್, ಪ್ರಡ್ಯೂಸರ್ ಬಿಟ್ಟು ಆ್ಯಕ್ಟರ್ ಬಗ್ಗೆ ಮಾತನಾಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು.

click me!