ಧ್ರುವ್‌ ರಾಠಿನೋ, ಬದ್ರುದ್ದೀನ್ ರಶೀದೊ? ಕನ್ನಡಿಗರ ನಿಂದಿಸಿ ರಾಜಾರೋಷವಾಗಿ ಇಲ್ಲೇ ಬಂದ್ರಾ? ಏನಿದು ಬಿಸಿಬಿಸಿ ಚರ್ಚೆ

Published : Oct 09, 2026, 10:46 PM IST
Dhruv Rathee

ಸಾರಾಂಶ

ಜರ್ಮನಿಯಿಂದ ಬೆಂಗಳೂರಿಗೆ ಆಗಮಿಸಿರುವ ಯೂಟ್ಯೂಬರ್ ಧ್ರುವ್ ರಾಠಿ, ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಿಂದೊಮ್ಮೆ ಇವರು ಕನ್ನಡಿಗರನ್ನು ನಿಂದಿಸಿ ಅವರನ್ನು ಉಗ್ರರಿಗೆ ಹೋಲಿಸಿರುವ ಆರೋಪವನ್ನೂ ಎದುರಿಸುತ್ತಿದ್ದು, ಇವರ ಹಿಂದೂ ಹೆಸರಿನ ಬಗ್ಗೆಯೂ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಏನಿದು ವಿಷ್ಯ?

ಅಮೆರಿಕದಿಂದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಭಾರತ ಉದ್ಧಾರ ಮಾಡಲು ಬೆಂಗಳೂರಿಗೆ ಆಗಮಿಸಿದ್ದರೆ, ಅದೇ ಇನ್ನೊಂದೆಡೆಯಿಂದ, ಜರ್ಮನಿಯ ಬರ್ಲಿನ್‌ನಲ್ಲಿ ನೆಲೆಸಿರುವ ಧ್ರುವ್‌ ರಾಠಿ ಬೆಂಗಳೂರಿಗೆ ಬಂದು ಕೇಂದ್ರ ಸರ್ಕಾರದ ವಿರುದ್ಧ ಮತದಾರರ ಪಟ್ಟಿ ಪರಿಷ್ಕರಣೆ (SIR) ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನಿನ್ನೆ ಪ್ರತಿಭಟನೆ ಹಮ್ಮಿಕೊಂಡು ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. SIR ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಇವರ ಮಾತು. ಅಕ್ರಮ ನಿವಾಸಿಗಳು, ಬಾಂಗ್ಲಾದೇಶಿಗಳು, ಸತ್ತವರು ಎಲ್ಲರನ್ನೂ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಕ್ಕೂ ಇವರ ಆಕ್ಷೇಪ ಇದ್ದು, ಮೊದಲಿನಂತೆಯೇ ಮತದಾನದ ಪಟ್ಟಿ ಇರಬೇಕು ಎನ್ನುವ ಹಲವು ಕಾಂಗ್ರೆಸ್ ನಾಯಕರ ಮಾತಿಗೆ ಇವರು ಬೆಂಬಲ ಸೂಚಿಸುತ್ತಿದ್ದಾರೆ.

ಇದಾಗಲೇ ಯುಟ್ಯೂಬರ್‌ ಧ್ರುವ್‌ ರಾಠಿ ಅವರ ಜಾತಕವನ್ನು ಕೆಲವರು ಕೆದಕಿದ್ದು ಇದೆ. ಕೇಂದ್ರ ಸರ್ಕಾರದ ಅದರಲ್ಲಿಯೂ ಬಿಜೆಪಿ ವಿರುದ್ಧ ಕಿಡಿಕಾರುವ ಇವರ ಅಸಲಿ ಹೆಸರು ಬದ್ರುದ್ದೀನ್ ರಶೀದ್‌ ಲಾಹೋರಿ ಆಗಿದೆ ಎಂದು ಇದಾಗಲೇ ಸಾಕಷ್ಟು ಸುದ್ದಿ ಸದ್ದು ಮಾಡಿತ್ತು. ಕೊನೆಗೆ ಆ ಸುದ್ದಿ ಸುಳ್ಳು ಎಂದು ಧ್ರುವ್‌ ರಾಠಿ ಹೇಳಿದ್ದರು. ಆದರೆ, ನಿಜವಾಗಿ ಇವರ ಪಾಸ್​ಪೋರ್ಟ್​ ಸೇರಿದಂತೆ ಅಧಿಕೃತ ದಾಖಲೆಗಳಲ್ಲಿ ಹೆಸರು ಏನಿದೆ ಎನ್ನುವುದು ಇದುವರೆಗೆ ಪಬ್ಲಿಕ್​ ಆಗಿ ರಿವೀಲ್​ ಆಗಿಲ್ಲ ಎನ್ನುವುದು ಕೂಡ ಹಲವಾರು ಅನುಮಾನಕ್ಕೆ ಕಾರಣವಾಗಿದೆ. ಅದಕ್ಕಾಗಿಯೇ ಇವರ ಅಸಲಿ ಹೆಸರಿನ ಬಗ್ಗೆ ಈಗಲೂ ಸಾಕಷ್ಟು ಗೊಂದಲಗಳು ಇವೆ. ಇವರ ಬಗ್ಗೆ ಇದೀಗ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ (Bhaskar Rao) ಕೇಂದ್ರ ಗೃಹ ಸಚಿವಾಲಯಕ್ಕೆ ಒಂದು ಪತ್ರ ಬರೆದಿದ್ದು, ಅದೀಗ ಭಾರಿ ಕುತೂಹಲ ಕೆರಳಿಸಿದೆ.

ಕನ್ನಡಿಗರನ್ನು ಉಗ್ರರಿಗೆ ಹೋಲಿಸಿದ್ರಾ ರಾಠೆ?

ಅಷ್ಟಕ್ಕೂ ಧ್ರುವ್​ ರಾಠಿ ಅವರ ಬಗ್ಗೆ ಇದೇ ಮೊದಲ ಬಾರಿ ವಿವಾದವೇನೂ ಆಗಿರಲಿಲ್ಲ. ಈ ಹಿಂದೆ ಅವರು ಕನ್ನಡಿಗರನ್ನು ಉಗ್ರರಿಗೆ ಹೋಲಿಸಿರುವ ಗಂಭೀರ ಆರೋಪವನ್ನೂ ಎದುರಿಸುತ್ತಿದ್ದಾರೆ. ಈ ಕುರಿತು, ಈ ಹಿಂದೆ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡ ಚಿತ್ರ ನಿರ್ದೇಶಕ ಮಂಸೋರೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಆಕ್ರೋಶ ಹೊರಹಾಕಿದ್ದರು. ಧ್ರುವ್ ರಾಠೆ ತಮ್ಮದೊಂದು ವಿಡಿಯೋದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಕರ್ನಾಟಕದಲ್ಲಿ ನಡೆಯುವ ಹೋರಾಟವನ್ನು ತಪ್ಪಾಗಿ ಅರ್ಥೈಸಿ, ಅದನ್ನು "ಉಗ್ರವಾದ" (Extremism / Terrorism) ಕ್ಕೆ ಹೋಲಿಸುವ ರೀತಿಯಲ್ಲಿ ಮಾತನಾಡಿದ್ದರು ಎನ್ನುವ ಗಂಭೀರ ಆರೋಪ ಇದೆ. ಈಗ ಅದೇ ರಾಠೆ, ಬೆಂಗಳೂರಿಗೆ ಆಗಮಿಸಿ, ಇಲ್ಲಿಯ ಜನರ ಪರವಾಗಿ ಹೋರಾಟ ಮಾಡುತ್ತಿದ್ದಾರೆ!

ಭಾಸ್ಕರ್​ ರಾವ್​ ಪತ್ರ

ಇದರ ನಡುವೆಯೇ, ಭಾಸ್ಕರ್ ರಾವ್ ಅವರು ಧ್ರುವ್ ರಾಠಿ ಅವರ ಪೌರತ್ವ ಮತ್ತು ವೀಸಾ ಸ್ಥಿತಿಗತಿ ಪರಿಶೀಲಿಸುವಂತೆ ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಇವರು, ರಾಠಿ ಜರ್ಮನ್ ಪೌರತ್ವ ಹೊಂದಿದ್ದಾರೆ. ಭಾರತಕ್ಕೆ ಯಾವ ವೀಸಾ ಅಥವಾ ಅನುಮತಿ ಪಡೆದು ಬಂದಿದ್ದಾರೆ ಎಂದು ಪರಿಶೀಲಿಸುವಂತೆ ಆಗ್ರಹಿಸಿದ್ದಾರೆ. ವಿದೇಶಿಗರ ಕಾಯ್ದೆ, ವೀಸಾ ನಿಯಮಗಳು ಹಾಗೂ ವಲಸೆ ನಿಯಮಗಳು ಉಲ್ಲಂಘನೆಯಾಗಿವೆಯೇ ಎಂದು ಪರಿಶೀಲಿಸುವಂತೆಯೂ ಅವರು ಕೋರಿದ್ದಾಋಎ.

ಅಂದಹಾಗೆ, ಧ್ರುವ್ ರಾಠಿ ಅವರ ವಿವಿಧ ಯೂಟ್ಯೂಬ್ ಚಾನೆಲ್‌ಗಳು ಒಟ್ಟಾರೆಯಾಗಿ 3.6 ಕೋಟಿಗೂ ಹೆಚ್ಚು ಫಾಲೋವರ್ಸ್​ ಹೊಂದಿದ್ದಾರೆ. ಜರ್ಮನಿಯಲ್ಲಿ ಕುಳಿತು ಭಾರತದ ಉದ್ಧಾರ ಮಾಡುವುದು ಇವರ ಉದ್ದೇಶವಂತೆ! ಇವರ ಯುಟ್ಯೂಬ್‌ಗಳಲ್ಲಿ ಬಹುತೇಕ ಎಲ್ಲವೂ ಬಿಜೆಪಿ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ವಿರುದ್ಧವೇ ಇರುವುದು ಕುತೂಹಲಕಾರಿಯಾಗಿದ್ದು. Gen Zಗಳನ್ನು ಒಟ್ಟುಗೂಡಿಸಿ ಬೇರೆ ಬೇರೆ ದೇಶಗಳಲ್ಲಿ ನಡೆಯುತ್ತಿರುವ ಬೆಂಕಿ ಹಚ್ಚುವ ಕೆಲಸ ಭಾರತದಲ್ಲಿಯೂ ನಡೆಸುವಲ್ಲಿ ಇವರು ಉತ್ಸುಕರಾಗಿದ್ದಾರೆ ಎನ್ನುವ ಗಂಭೀರ ಆರೋಪ ಇವರ ಮೇಲಿದೆ. ಇದೇ ಕಾರಣಕ್ಕೆ ಇವರ ಹೆಸರಿನ ಜಾತಕವನ್ನೂ ಕೆದಕಿದಾಗ ಅವರ ಹೆಸರು ಬೇರೆಯದ್ದೇ ಇದೆ ಎನ್ನುವ ಆರೋಪವೂ ಕೇಳಿಬಂದಿತ್ತು.

PREV
Read more Articles on
click me!

Recommended Stories

ಬರಪೀಡಿತ ರೈತನಿಗೆ 2500 ರೂಪಾಯಿ ಭಿಕ್ಷೆ, ಸಚಿವ ಖರೀದಿ ಮಾಡುವ ಕಾರಿಗೆ ನೀಡುವ ಗರಿಷ್ಠ ಹಣ 31 ಲಕ್ಷಕ್ಕೆ ಏರಿಕೆ!
'ರಚಿತಾ ರಾಮ್‌ ಬರ್ತ್‌ಡೇಗೆ ಇದಕ್ಕಿಂತ ಜಾಸ್ತಿ ಜನ ಸೇರಿದ್ರು' ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಆದ CJP ಬೆಂಗಳೂರು ಪ್ರೊಟೆಸ್ಟ್‌