
ಧಾರವಾಡ: ಮನೆಯಲ್ಲಿನ ಚಿಕ್ಕದೊಂದು ನಿರ್ಲಕ್ಷ್ಯ ಎಷ್ಟೊಂದು ದೊಡ್ಡ ಅವಘಡಕ್ಕೆ ಕಾರಣವಾಗತ್ತೆ ಎಂಬ ಮಾತಿಗೆ ಧಾರವಾಡ ಕೆಲಗೇರಿ ರಸ್ತೆಯ ಸಂತೋಷ ನಗರದ 2 ನೇ ಕ್ರಾಸ್‌ನಲ್ಲಿ ನಡೆದ ಘಟನೆಯೊಂದು ಸಾಕ್ಷ್ಯಯಾಗಿದೆ ನಿನ್ನೆ ಅಗಷ್ಟ 15 ರಂದು ದೇಶದೆಲ್ಲಡೆ ಸಂಬ್ರಮಾಚರಣೆ ಮಾಡುತ್ತಿತ್ತು ಆದರೆ ಮನೆಯಲ್ಲಿ ಚಳಿ ಇದೆ ಎಂದು ಕಾಯಿಸಿಕ್ಕೊಳ್ಳಲು ಕುಪ್ಪಡಗಿಯನ್ನ ಹಾಕಿ ಬೆಂಕಿ ಹಚ್ಚಲಾಗಿತ್ತು ಆದರೆ ಪಕ್ಕದಲ್ಲೆ ಇರುವ ಟಿನ್ನರ್ ಬಾಟಲ್ ನ್ನ ಅಗಸ್ತ್ಯ ಮಾಶಾಳ್ ಎಂಬ 4 ವರ್ಷದ ಬಾಲಕ ಆಡವಾಡುತ್ತಾ ನೆಲಕ್ಕೆ ಉರಿಳಿಸಿದ್ದಾನೆ ಆದರೆ ಆ ಬೆಂಕಿ ಟಿನ್ನರ್ ಗೆ ತಾಗಿ ಬಾಲಕನ ದೇಹಕ್ಕೆ ಆವರಸಿಕೊಂಡು 4 ವರ್ಷದ ಬಾಲಕ ಸುಟ್ಟು ಹೋಗಿದ್ದಾನೆ, ಈ ಎಲ್ಲ ವಿಡಿಯೋ ಎದುರು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ನಗರದ ಕೇಲಗೇರಿ ಬಡಾವಣೆಯ ಸಂತೋಷನಗರದಲ್ಲಿ ಶನಿವಾರ ಈ ಆಘಾತಕಾರಿ ಘಟನೆ ಸಂಭವಿಸಿದೆ. ಕುಟುಂಬಸ್ಥರ ಪ್ರಕಾರ, ಚಳಿಗಾಲದ ಕಾರಣದಿಂದ ಮನೆಯಲ್ಲಿ ಬೆಚ್ಚಗೆ ಇರಲು ಕುಪ್ಪಡಿಗೆ ಬೆಂಕಿ ಹಚ್ಚಲಾಗಿತ್ತು. ಕುಪ್ಪಡಿಗೆಯ ಪಕ್ಕದಲ್ಲೇ ಥಿನ್ನರ್ ಬಾಟಲಿಯನ್ನು ಇಡಲಾಗಿತ್ತು. ಈ ವೇಳೆ ಮಗು ಆಟವಾಡುತ್ತಿದ್ದಾಗ ಅಜಾಗರೂಕತೆಯಿಂದ ಬಾಟಲಿ ಉರುಳಿಬಿದ್ದಿದೆ.
ಬಾಟಲಿ ಉರುಳಿದ ತಕ್ಷಣ ಬೆಂಕಿ ತೀವ್ರವಾಗಿ ಹರಡಿ, ಕುಪ್ಪಡಿಗೆಯಿಂದ ಹೊರಟ ಕಿಡಿಗಳು ಥಿನ್ನರ್‌ಗೆ ತಗುಲಿದ ಪರಿಣಾಮ ಬಾಲಕನ ದೇಹಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಹೊತ್ತಿಕೊಂಡ ಮಗುವನ್ನು ಉಳಿಸಲು ಕುಟುಂಬಸ್ಥರು ಪ್ರಯತ್ನಿಸಿದರೂ ಫಲವಾಗಿಲ್ಲ. ಗಂಭೀರ ಸುಟ್ಟ ಗಾಯಗಳಾದ ಅಗಸ್ತ್ಯನನ್ನು ಕುಟುಂಬಸ್ಥರು ತಕ್ಷಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಆದರೆ ತೀವ್ರವಾದ ಬೆಂಕಿ ಸುಟ್ಟ ಗಾಯಗಳಿಂದ ಚಿಕಿತ್ಸೆ ಫಲಕಾರಿಯಾಗದೆ ಮಗು ಅಸುನೀಗಿದೆ. ಮಗುವನ್ನು ಉಳಿಸಲು ಯತ್ನಿಸಿದ ತಂದೆಯೂ ಬೆಂಕಿಗೆ ಸಿಲುಕಿ ಗಾಯಗೊಂಡಿದ್ದು, ಪ್ರಸ್ತುತ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಂಕಿ ಹೊತ್ತಿಕೊಂಡಾಗ ಮನೆಯಿಂದ ಚಿರಾಟದ ಶಬ್ದ ಕೇಳಿ ನೆರೆಹೊರೆಯವರು ತಕ್ಷಣ ಓಡಿ ಬಂದು ಸಹಾಯ ಮಾಡಲು ಪ್ರಯತ್ನಿಸಿದ ಘಟನೆ ಎದುರಿನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದೆ. ಈ ದೃಶ್ಯ ಸ್ಥಳೀಯರಲ್ಲಿ ಬೇಸರ ತರಿಸಿದೆ. ಘಟನೆ ಧಾರವಾಡ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಅಜಾಗರೂಕತೆಯಿಂದ ಅಪಾಯಕಾರಿಯಾಗಿ ಇಡಲಾಗಿದ್ದ ಥಿನ್ನರ್ ಬಾಟಲಿ ಮತ್ತು ಬೆಂಕಿಯ ಅಸಾವಧಾನತೆ ದುರಂತಕ್ಕೆ ಕಾರಣವಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸಂತೋಷನಗರ ಪ್ರದೇಶದಲ್ಲಿ ನಡೆದ ಈ ಘಟನೆ ಸ್ಥಳೀಯರಲ್ಲಿ ಆಘಾತ ಮೂಡಿಸಿದ್ದು, ನಾಲ್ಕು ವರ್ಷದ ಮಗುವಿನ ದುರ್ಮರಣವು ಹೃದಯವಿದ್ರಾವಕ ವಾತಾವರಣ ಸೃಷ್ಟಿಸಿದೆ.