
ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಗ್ರಾಮದ ಪರಿಸರದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಶೋಧಕಾರ್ಯ ನಡೆಸುತ್ತಿದೆ. ಇದೀಗ ಸ್ಪಾಟ್ ಸಂಖ್ಯೆ 15 ಕ್ಕೆ ಸಂಬಂಧಿಸಿದಂತೆ ಸಾಕ್ಷಿಯನ್ನಾಗಿ ಮಹಿಳೆಯೊಬ್ಬರನ್ನು ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸಿರುವ ಮಾಹಿತಿ ಲಭ್ಯವಾಗಿದೆ. ಅನಾಮಿಕ ಧರ್ಮಸ್ಥಳದ ಬೋಳಿಯಾರ್‌ನಲ್ಲಿ ಸ್ಪಾಟ್ ಸಂಖ್ಯೆ 15ನ್ನು ಗುರುತಿಸಿದ್ದನು. ಪಾಯಿಂಟ್ ನಂಬರ್ 15 ಹಾಗೂ ಅಕ್ಕಪಕ್ಕದಲ್ಲಿ ಮತ್ತೆರಡು ಕಡೆ ಉತ್ಖನನ ನಡೆಸಿದ್ರೂ ಯಾವುದೇ ಕಳೇಬರ ಸಿಕ್ಕಿರಲಿಲ್ಲ.
ಕಲ್ಲೇರಿಯಲ್ಲಿ ನೋಡಿದ ಬಾಲಕಿಯ ಶವ ಹೂತಿದ್ದಾಗಿ ಹೇಳಿದ ಎಂದ ದೂರುದಾರ ಹೇಳಿದ್ದನು. ಉತ್ಖನನ ನಡೆಸಿದಾಗ ಕಳೇಬರ ಸಿಗದೇ ಇದ್ದಾಗ ಸ್ಥಳೀಯರನ್ನು ಕೇಳಿ ಅಂತ ಅನಾಮಿಕ ವಾದಿಸಿದ್ದನಂತೆ. ಇಲ್ಲಿ ಶವ ಹೂತ ನಂತರ ನೀರು ಕುಡಿಯಲು ಹಾಗೂ ಸಲಕರಣೆಗಳನ್ನು ತೊಳೆಯಲು ಸ್ಥಳೀಯ ಮನೆಗೆ ಹೋಗಿದ್ದಾಗಿ ಹೇಳಿದಾಗಿ ಹೇಳಿದ್ದನು. ಸ್ಥಳೀಯರಿಗೆ ಶವ ಹೂತ ವಿಚಾರ ಗೊತ್ತಿದೆ ಎಂದು ಅನಾಮಿಕ ಹೇಳುತ್ತಿದ್ದಾನೆ ಎನ್ನಲಾಗಿದೆ.
ಧರ್ಮಸ್ಥಳ ಮಂಜುನಾಥೇಶ್ವರ ದೇವರ ಮೇಲೆ ರಾಜ್ಯದ ಕೋಟ್ಯಂತರ ಭಕ್ತರಿಗೆ ಶ್ರದ್ಧೆಯಿದೆ. ಆದರೆ ಕಾಂಗ್ರೆಸ್ ಸರ್ಕಾರ ಕಮ್ಯೂನಿಸ್ಟರ ಮಾತು ಕೇಳಿ ಎಸ್‌ಐಟಿ ರಚನೆ ಮಾಡಿದೆ. ಮುಸುಕುಧಾರಿ ಅನಾಮಿಕನಿಗೆ ಈ ಸರ್ಕಾರ ಶರಣಾಗಿದೆ. ಎಸ್‌ಐಟಿ ಅಧಿಕಾರಿಗಳಿಗೆ ನಿರ್ದೇಶನ ನೀಡುವಷ್ಟು ಸ್ವಾತಂತ್ರ್ಯ ಆತನಿಗೆ ನೀಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರ: ನಾಡಿನ ಶ್ರೇಷ್ಠ ಪುಣ್ಯಕ್ಷೇತ್ರ ಧರ್ಮಸ್ಥಳವನ್ನು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರನ್ನು ನಿರಂತರವಾಗಿ ತೇಜೋವಧೆ ಮಾಡಿ ಕಳಂಕ ತರುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತಾಭಿಮಾನಿಗಳು ಬೃಹತ್ ಪ್ರತಿಭಟನಾ ಜಾಥಾ ನಡೆಸಿ ಜನಾಗ್ರಹ ಸಭೆ ನಡೆಸಿದರು, ಮರುಳ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಎಂಜಿ ರಸ್ತೆ ಮೂಲಕ ಬಿಬಿ ರಸ್ತೆಯ ಅಂಬೇಡ್ಕರ್ ವೃತ್ತದವರೆಗೆ ಸಾಗಿ ನಂತರ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿನಿರ್ಮಿಸಿ ನಂತರ ಜನಾಗ್ರಹ ಸಭೆ ನಡೆಸಲಾಯಿತು.
ಸಭೆಯನ್ನು ಉದ್ದೇಶಿಸಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಯಲುವಹಳ್ಳಿ ಎನ್. ರಮೇಶ್ ಮಾತನಾಡಿ, ಧರ್ಮಸ್ಥಳ ಒಂದು ಶ್ರದ್ಧಾಕೇಂದ್ರ, ಮಂಜುನಾಥ ಸ್ವಾಮಿಯನ್ನು ಅಸಂಖ್ಯಾತ ಹಿಂದೂಗಳು ಆರಾಧಿಸುತ್ತಾರೆ, ಯಾರೋ ಒಬ್ಬರು ಶವಗಳನ್ನು ಹೂತಿದ್ದಾಗಿ ಹೇಳಿದ ಬಳಿಕ ಎಸ್‌ಐಟಿ ರಚನೆಯಾಗಿ ತನಿಖೆ ಶುರುವಾಗಿದೆ. ಅದಕ್ಕೆ ನಮ್ಮ ವಿರೋಧವೇನೂ ಇಲ್ಲ, ಆದರೆ 16 ಕಡೆ ಅಗೆದರೂ ಒಂದು ಪುರುಷ ಅಸ್ಥಿಪಂಜರ ಮಾತ್ರ ಸಿಕ್ಕಿದೆ ಎಂದರು. ಸಮಾಜದ ಸ್ವಾಸ್ಥ್ಯವನ್ನು ಕದಡುತ್ತಿರುವ ಮತ್ತು ತನ್ನ ಸ್ವಾರ್ಥಕ್ಕಾಗಿ ನಮ್ಮೆಲ್ಲರ ಪವಿತ್ರ ಕ್ಷೇತ್ರವನ್ನು ಮತ್ತು ಹೆಗ್ಗಡೆಯವರನ್ನು ನಿರಂತರವಾಗಿ ತೇಜೋವಧೆ ಮಾಡುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಮುಂತಾದ ಕಿಡಿಗೇಡಿಗಳನ್ನು ಬಂಧಿಸಿ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಇಲ್ಲ, ಸಲ್ಲದ ಆರೋಪಗಳನ್ನು ಮಾಡಿ ದೇವರ ಮತ್ತು ಗುರುವಿನ ಹೆಸರಿಗೆ ಕಳಂಕ ತರಲು ಸತತವಾಗಿ ಯತ್ನಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿ, ಜಿಲ್ಲೆಯಲ್ಲಿನ ಧರ್ಮಸ್ಥಳದ ಸಾವಿರಾರು ಭಕ್ತರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.