Latest Videos

Dharwad: 3 ಲಕ್ಷ ಬಡ್ಡಿ ಸಮೇತ ಪರಿಹಾರ ನೀಡುವಂತೆ ನ್ಯೂ ಇಂಡಿಯಾ ಅಶೂರೆನ್ಸ್ ಕಂಪನಿಗೆ ಆಯೋಗ ಆದೇಶ!

By Govindaraj SFirst Published May 22, 2024, 6:54 PM IST
Highlights

ಇಲ್ಲಿನ ಬಸವ ನಗರದ ಶ್ರೀ. ವಿನಯ ಕ್ಷತ್ರಿಯ ಇವರು ತಮ್ಮ ಸ್ವಂತ ಕೆಲಸಕ್ಕಾಗಿ RENAULT KWID CAR ಖರೀದಿಸಿ ಅದಕ್ಕೆ ಎದುರುದಾರರ ಬಳಿ ರೂ.6,750/- ಹಣ ಪಾವತಿಸಿ ವಿಮೆಯನ್ನು ಪಡೆದಿದ್ದರು.

ವರದಿ: ಪರಮೇಶ್ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಧಾರವಾಡ

ಧಾರವಾಡ (ಮೇ.22): ಇಲ್ಲಿನ ಬಸವ ನಗರದ ಶ್ರೀ. ವಿನಯ ಕ್ಷತ್ರಿಯ ಇವರು ತಮ್ಮ ಸ್ವಂತ ಕೆಲಸಕ್ಕಾಗಿ RENAULT KWID CAR ಖರೀದಿಸಿ ಅದಕ್ಕೆ ಎದುರುದಾರರ ಬಳಿ ರೂ.6,750/- ಹಣ ಪಾವತಿಸಿ ವಿಮೆಯನ್ನು ಪಡೆದಿದ್ದರು. ಆ ವಿಮೆಯಲ್ಲಿ ವಾಹನದ ಆಯ್.ಡಿ. ಮೌಲ್ಯ ರೂ.3 ಲಕ್ಷ ಅಂತಾ ನಮೂದಿಸಿತ್ತು. 31/05/2022 ರಂದು ವಾಹನವು ಧಾರವಾಡ ಉದಯ ಹಾಸ್ಟೇಲ್ ಬಳಿ ಅಪಘಾತಕ್ಕೀಡಾಗಿ ದೂರುದಾರರು ಪಾಲಸಿಯ ನಿಯಮದಂತೆ ಕಾರಿನ ರಿಪೇರಿಗಾಗಿ ಎದುರುದಾರರ ಬಳಿ ಎಲ್ಲ ದಾಖಲೆಗಳನ್ನು ಪಾವತಿಸಿದ್ದರು.  ಎದುರುದಾರರು ಅಪಘಾತ ಸಮಯದಲ್ಲಿ ವಾಹನವನ್ನು ಮಧ್ಯ ಸೇವಿಸಿ  ಚಲಾಯಿಸಿದ್ದಾರೆ ಅಂತಾ ಹೇಳಿ ವಿಮಾ ಹಣವನ್ನು ಕೊಡಲು ನಿರಾಕರಿಸಿದ್ದರು. 

ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರೂ ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ. ಅಂತಹ ವಿಮಾ ಕಂಪನಿಯವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು ದಿ:03/06/2023 ರಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಸದರಿ ದೂರಿನ ಬಗ್ಗೆ ಆಯೋಗದ ಅಧ್ಯಕ್ಷರಾದ ಈಶಪ್ಪ.ಭೂತೆ, ವಿಶಾಲಾಕ್ಷಿ. ಅ. ಬೋಳಶೆಟ್ಟಿ ಹಾಗೂ  ಪ್ರಭು.ಸಿ.ಹಿರೇಮಠ ಸದಸ್ಯರು, ಕೂಲಂಕುಷವಾಗಿ ವಿಚಾರಣೆ ನಡೆಸಿದರು. 

ರಸಗೊಬ್ಬರಗಳನ್ನು ನಿಗದಿತ ದರಗಳ ಪ್ರಕಾರ ಮಾರಾಟ ಮಾಡಿ: ಕಿರಣಕುಮಾರ್ ಸೂಚನೆ

ದೂರುದಾರರು ಕೊಟ್ಟಂತಹ ದಾಖಲೆಗಳನ್ನು ಪರಿಶೀಲಿಸಿದಾಗ ಅಪಘಾತವಾದ ಸಮಯದಲ್ಲಿ ದೂರುದಾರನು ಮಧ್ಯ ಸೇವಿಸಿ ವಾಹನ ಚಲಾಯಿಸಿಲ್ಲ ಅನ್ನುವ ವಿಷಯ ಸ್ಪಷ್ಟವಾಗಿರುತ್ತದೆ ಮತ್ತು ಪ್ರಥಮ ವರ್ತಮಾನ ವರದಿಯಲ್ಲಿ ಇದರ ಬಗ್ಗೆ ಹೇಳಿಕೆಯಿಲ್ಲದೇ ಇರುವುದು ಕಂಡು ಬಂದದ್ದರಿಂದ ದೂರುದಾರರು ಕೇಳಿದಂತಹ ವಿಮಾ ಹಣ ರೂ.3 ಲಕ್ಷ ಪಡೆಯಲು ಅರ್ಹರಿದ್ದಾರೆಂದು ಆಯೋಗವು ಅಭಿಪ್ರಾಯ ಪಟ್ಟಿದೆ.  ಜೊತೆಗೆ ಅವರು ಅನುಭವಿಸಿದ ಮಾನಸಿಕ ಹಿಂಸೆ ಹಾಗೂ ಅನಾನುಕೂಲತೆಗೆ ರೂ.50,000/- ಪರಿಹಾರ ಮತ್ತು ರೂ.10,000/- ಪ್ರಕರಣದ ಖರ್ಚು ವೆಚ್ಚ ಕೊಡುವಂತೆ ಧಾರವಾಡದ ದಿ ನ್ಯೂ ಇಂಡಿಯಾ ಅಸುರೆನ್ಸ್ ಕಂಪನಿಗೆ ಆಯೋಗ ಆದೇಶಿಸಿದೆ.

click me!