ಅಧಿಕಾರಿಗಳ ಗ್ರಾಮವಾಸ್ತವ್ಯ ಮಾಮೂಲಿಗಿಂತ ವಿಶೇಷ

By Web DeskFirst Published Sep 30, 2018, 6:10 PM IST
Highlights

ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು

ಹುಬ್ಬಳ್ಳಿ[ಸೆ.30]: ಗ್ರಾಮ ವಾಸ್ತವ್ಯ ಎಂದರೆ ಹಳ್ಳಿಗರ ಜತೆ ಬೆರೆಯುವ ಕಲ್ಪನೆ ಇದೆ. ಅಂದರೆ, ಗ್ರಾಮದಲ್ಲಿಯೇ ತಂಗುವುದು. ಅಲ್ಲಿನ ರೈತರ, ಕೂಲಿಕಾರ್ಮಿಕರ ಅಥವಾ ಬಡ ವರೊಬ್ಬರ ಮನೆಯಲ್ಲಿ ಉಳಿಯುವುದು. ಅವರ ಕಷ್ಟ ಅರಿಯುವ ಪ್ರಯತ್ನ ಮಾಡುವುದು. 

ಸಿಎಂ ಕುಮಾರಸ್ವಾಮಿ ಅವರಿಂದ ಜನಪ್ರಿಯವಾದ ಕಲ್ಪನೆ ಇದು. ಇದನ್ನೇ ಎಲ್ಲ ಪಕ್ಷದ ಮುಖಂಡರು ಮಾಡಿದ್ದಾರೆ. ಆದರೆ, ಇದು ಜನಪ್ರತಿನಿಧಿಗಳ ಗ್ರಾಮವಾಸ್ತವ್ಯ ಅಲ್ಲ. ಇದು ಅಧಿಕಾರಿಗಳ ಗ್ರಾಮವಾಸ್ತವ್ಯ. ಸುಸಜ್ಜಿತ ಕಟ್ಟಡದಲ್ಲಿ ತಂಗಿದ್ದ ಅಧಿಕಾರಿಗಳು ಗ್ರಾಮ ವಾಸ್ತವ್ಯವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಕೆಲವರು ಅಭಿಪ್ರಾಯಿಸಿದರು ಈ ಮೂಲಕ ಗ್ರಾಮ ವಾಸ್ತವ್ಯ ಎಂಬ ಕಲ್ಪನೆ ಬದಲಾಗಿತ್ತು.

ಆದರೆ, ಜನರ ಸಮಸ್ಯೆ ಅರಿತುಕೊಳ್ಳಲು, ಅದನ್ನು ಪರಿಹರಿಸಲು ಬಡವರ ಮನೆಯಲ್ಲಿಯೇ ಉಳಿದುಕೊಳ್ಳಲೇಬೇಕಿಲ್ಲ ಎಂಬ ಅನಿಸಿಕೆಯೂ ವ್ಯಕ್ತವಾಯಿತು.

click me!