ಫ್ಲಾಟ್ ನೋಂದಣಿ ಮಾಡದೆ ಸತಾಯಿಸಿದ ಬಿಲ್ಡರ್‌ಗೆ ಬಿತ್ತು ಭರ್ಜರಿ ದಂಡ

By Gowthami K  |  First Published Jul 18, 2023, 3:03 PM IST

ಧಾರವಾಡದ ಮಹಿಷಿ ಫ್ಲಾಟ್ ವಾಸಿ ರಘುನಾಥ ಜೋಶಿ ರವರು ನಿವೃತ್ತಿ ಹೊಂದಿದ ನಂತರ  ಬಿಲ್ಡರ್‌ ಕೈಯಿಂದ ಫ್ಲಾಟ್ ಖರೀದಿ ಮಾಡಿ ಬಳಿಕ ಮೋಸವಾಗಿತ್ತು. ನ್ಯಾಯಾಲಯದ  ಮೊರೆ ಹೋದ ಜೋಶಿಗೆ ಈಗ ಭರ್ಜರಿ ಪರಿಹಾರ ಸಿಕ್ಕಿದೆ.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ಜು.18): ಧಾರವಾಡದ ಮಹಿಷಿ ಫ್ಲಾಟ್ ವಾಸಿ ರಘುನಾಥ ಜೋಶಿ ರವರು ನಿವೃತ್ತಿ ಹೊಂದಿದ ನಂತರ ಎದುರುದಾರ  ಕೇಶವ ಅನ್ನುವವರು ಬೆಂಗಳೂರಿನಲ್ಲಿ ಅಭಿವೃದ್ಧಿಗೊಳಿಸುತ್ತಿರುವ ಫ್ಲಾಟ್  ನಂ.11 ನ್ನು ದಿನಾಂಕ:11/11/2011 ರಂದು ರೂ.6,67,500/-ಗೆ ಖರೀದಿಸಿದ್ದರು. ಆ ಪೈಕಿ ರೂ.2,00,250/-ಗಳನ್ನು ಚೆಕ್ ಮೂಲಕ ಅಡ್ವಾನ್ಸ್ ನೀಡಿ ಎದುರುದಾರರಿಂದ ಖರೀದಿ ಕರಾರು ಪತ್ರ ಮಾಡಿಸಿಕೊಂಡಿದ್ದರು ಬಾಕಿ ಮೊತ್ತದ ಹಣವನ್ನು ಖರೀದಿ ಪತ್ರ ನೋಂದಣಿ ಕಾಲಕ್ಕೆ ಕೊಡುವ ಕರಾರಿನೊಂದಿಗೆ ಒಪ್ಪಿ ಸಹಿ ಮಾಡಿದ್ದರೂ ಕೂಡ ಕರಾರಿನಂತೆ 6 ತಿಂಗಳಾದರೂ ಎದುರುದಾರರು ಫ್ಲಾಟ್ ್ ಅಭಿವೃದ್ಧಿ ಮಾಡಿರಲಿಲ್ಲ ಸಾಕಷ್ಟು ಕಾಲಾವಕಾಶ ಕಳೆದರೂ ಎದುರುದಾರ ಫ್ಲಾಟ್ ನೋಂದಣಿ ಮಾಡಿಕೊಟ್ಟಿರಲಿಲ್ಲ ಹಾಗೂ ದೂರುದಾರರ ಮುಂಗಡ ಹಣವನ್ನು ವಾಪಸ್ಸು ಕೊಡಲಿಲ್ಲ.

Latest Videos

undefined

ಗೂಗಲ್‌ನಿಂದ ದಾಖಲೆಯ ಉದ್ಯೋಗ ಆಫರ್ ಪಡೆದ MMMUT ಭಾರತೀಯ ವಿದ್ಯಾರ್ಥಿನಿ!

ಸೇವೆಯಿಂದ ನಿವೃತ್ತಿ ಹೊಂದಿ ಆರ್ಥಿಕ ತೊಂದರೆ ಅನುಭವಿಸುತ್ತಿರುವ ತನಗೆ ಎದುರುದಾರ/ಬಿಲ್ಡರವರಿಂದ ಸೇವಾ ನ್ಯೂನ್ಯತೆ ಆಗಿ ತೊಂದರೆಯಾಗಿದೆ ಅಂತಾ ಹೇಳಿ ದೂರುದಾರ ಎದುರುದಾರರ ವಿರುದ್ಧ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಕ್ರಮ  ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪಭೂತೆ ಹಾಗೂ ಸದಸ್ಯರುಗಳಾದ ವಿಶಾಲಾಕ್ಷಿ.ಅ ಬೋಳಶೆಟ್ಟಿ ಮತ್ತು ಪ್ರಭು. ಸಿ. ಹಿರೇಮಠ ಅವರು 2011 ರಲ್ಲಿ ದೂರುದಾರನಿಂದ ರೂ.2,00,250/- ಹಣ ಪಡೆದುಕೊಂಡು ಎದುರುದಾರರು ಫ್ಲಾಟ್ ನಿರ್ಮಾಣ ಮಾಡದೇ ಹಣವನ್ನು ತಮ್ಮ ಸ್ವಂತಕ್ಕೆ ಉಪಯೋಗಿಸಿಕೊಂಡು ದೂರುದಾರರಿಗೆ ಮೋಸ ಎಸಗಿ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯಪಟ್ಟು ಆಯೋಗ ತೀರ್ಪು ನೀಡಿದೆ.

Belagavi Crime: 6ನೇ ತರಗತಿಯಿಂದಲೇ ಲವ್, ಪ್ರಿಯಕರನ ಜತೆ ಸೇರಿ ಭೀಮನ

ದೂರುದಾರರು ಸಂದಾಯ ಮಾಡಿದ ರೂ.2,00,250/- ಮತ್ತು ಅದರ ಮೇಲೆ ದಿನಾಂಕ:21/06/2011 ರಿಂದ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಹಣ ವಾಪಸ್ಸು ಕೊಡುವಂತೆ ಆಯೋಗ ಎದುರುದಾರರಿಗೆ ಆದೇಶಿಸಿದೆ ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ.10,000/- ನೀಡುವಂತೆ  ಮ್ಯಾಕ್ಸ್‌ವರ್ತ ರಿಯಾಲಿಟಿ ಇಂಡಿಯಾದ ಚೆರಮನ್ ಮತ್ತು ಮ್ಯಾನೇಜರ್ ಡೈರೆಕ್ಟರ್ ಶ್ರೀ ಕೇಶವ ಕೆ. ರವರಿಗೆ ಆಯೋಗ ತನ್ನ ತೀರ್ಪಿನಲ್ಲಿ ಆದೇಶಿಸಿದೆ.

click me!