
ದಕ್ಷಿಣ ಕನ್ನಡ: ಧರ್ಮಸ್ಥಳ ಕ್ಷೇತ್ರದ ವಿರುದ್ದ ತಿಮರೋಡಿ ಗ್ವಾಂಗ್‌ನಿಂದ ಷಡ್ತಂತ್ರ ಪ್ರಕರಣಕ್ಕೆ ಚಿನ್ನಯ್ತ 200 ಕೋಟಿ ಡೀಲ್ ಟ್ರಿಸ್ ಕೊಟ್ಟ ಬಳಿಕ ಎಸ್‌ಐಟಿ ಮತ್ತೆ ಅಲರ್ಟ್ ಆಗಿದೆ. ಇನ್ನೊಂದು ಕಡೆ ಮಟ್ಟೆಣ್ಣವರ್ ಬ್ರೆನ್ ಮ್ಯಾಪಿಂಗ್‌ಗೆ ಮನವಿ ಮಾಡಿದ್ದಾರೆ. ಧರ್ಮಸ್ಥಳ ಬುರುಡೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಬುರುಡೆ ಕೇಸ್‌ನಲ್ಲಿ ಜೈಲು ಪಾಲಾಗಿರೋ ಚಿನ್ನಯ್ದ ನಾನು ಪಾತ್ರಧಾರಿ ಸೂತ್ರಧಾರಿಗಳ ವಿರುದ್ಧ ಕ್ರಮ ಯಾಕಿಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದ. ಜೊತೆಗೆ ಷಡ್ಕಂತ್ರಕ್ಕೆ 200 ಕೋಟಿ ಬಜೆಟ್ ಹಾಗೂ ನಟ ಪ್ರಕಾಶ್ ರೈ ಪಾತ್ರದ ಬಗ್ಗೆಯೂ ಪ್ರಸ್ತಾಪ ಮಾಡಿದ್ದ. ಎಸ್‌ಐಟಿ ಪಕ್ಷಪಾತ ಮಾಡುತ್ತಿದೆ ಅನ್ನೋ ಆರೋಪದ ಬೆನ್ನಲ್ಲೇ ಪ್ರಕರಣದ ಬಗ್ಗೆ ಎಸ್‌ಐಟಿ ಮತ್ತೆ ಅಲರ್ಟ್ ಆಗಿದೆ.
ಇಂದು ಏಕಾಏಕಿ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಗಿರೀಶ್ ಮಟ್ಟೆಣ್ಣವರ್ ಜಯಂತ್, ಯೂಟ್ಯೂಬರ್ ಅಭಿಷೇಕ್ ಜತೆ ಬಂದು ಚಿನ್ನಯ್ಯನ ವಿರುದ್ಧವೇ ದೂರು ಸಲ್ಲಿಸಿದ್ದಾರೆ. 200 ಕೋಟಿ ಹೇಳಿಕೆ ಮೇಲೆ ತನಿಖೆ ಮಾಡಿ ಚಿನ್ನಯ್ಯನ ಬೈನ್ ಮ್ಯಾಪಿಂಗ್ ಮಾಡುವಂತೆ ಎಸ್ ಐಟಿಗೆ ಗಿರೀಶ್ ಮಟ್ಟೆಣ್ಣವರ್ ದೂರು ಕೊಟ್ಟಿದ್ದಾರೆ. ಅಲ್ಲದೆ ನನಗೂ ಕೂಡ ಬ್ರೆನ್ ಮ್ಯಾಪಿಂಗ್ ಮಾಡಿ ಎಂದು ಮಟ್ಟೆಣ್ಣವರ್ ಹೊಸ ವರಸೆ ತೆಗೆದಿದ್ದಾರೆ.
ಇತ್ತ ಬೆಂಗಳೂರಿನಲ್ಲಿ SIT ಮುಖ್ಯಸ್ಥ ಪ್ರಣವ್ ಮೊಹಾಂತಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಭೇಟಿಯಾಗಿ 20 ನಿಮಿಷ ಮುಂದಿನ ತನಿಖೆ ಬಗ್ಗೆ ಚರ್ಚೆ ಮಾಡಿದ್ದಾರೆ. ಮುಂದಿನ ವಿಚಾರಣೆ ಬಳಿಕ ಮತ್ತೆ ತನಿಖಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಬೇಕಿರೋದ್ರಿಂದ ಎಸ್‌ಐಟಿ ತನಿಖೆ ಮತ್ತಷ್ಟು ಚುರುಕು ಪಡೆದುಕೊಂಡಿದೆ.
ಬೆಳ್ತಂಗಡಿ ಎಸ್ಐಟಿಗೆ ದೂರು ನೀಡಿದ ಬಳಿಕ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿದ ಗಿರೀಶ್ ಮಟ್ಟೆಣ್ಣನವರ್ ಚಿನ್ನಯ್ಯರಿಗೆ ತಕ್ಷಣ ಸೂಕ್ತ ಪೊಲೀಸ್ ರಕ್ಷಣೆ ಕೊಡಬೇಕು. ಚಿನ್ನಯ್ಯ ಮತ್ತು ನನಗೆ ಬ್ರೈನ್ ಮ್ಯಾಪಿಂಗ್ ಮಾಡಿಸಿ ಸತ್ಯ ಸಾರ್ವಜನಿಕರಿಗೆ ತಿಳಿಸಬೇಕು. ನಾನು ಯಾವುದೇ ಕ್ಷಣದಲ್ಲಿ ಬ್ರೇನ್ ಮ್ಯಾಪಿಂಗ್ ಗೆ ಸಿದ್ದನಿದ್ದೇನೆ. ಈ ಹಿಂದೆ ಚಿನ್ನಯ್ಯ ತಮ್ಮ ಸ್ವಯಂ ಪ್ರೇರಿತ ಹೇಳಿಕೆಯಲ್ಲಿ ಮೃತ ದೇಹಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ಕೊಟ್ಟಿದ್ದರು. ಅಲ್ಲದೇ ತಾವು ಬ್ರೌನ್ ಮ್ಯಾಪಿಂಗ್ ಪರೀಕ್ಷೆಗೆ ಸಿದ್ದ ಇರುವುದಾಗಿ ಲಿಖಿತ ಹೇಳಿಕೆ ನೀಡಿದ್ದರು. ಈಗ ಅವರು ತಮ್ಮದೇ ಹೇಳಿಕೆ ವಿರುದ್ಧ ಮತ್ತೊಂದು ಹೇಳಿಕೆ ನೀಡಿದ್ದಾರೆ. ಹಾಗಾಗಿ ಚಿನ್ನಯ್ಯ ಅವರನ್ನು ಅವರ ಆಸೆಯಂತೆ ಬ್ರೇನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಬೇಕು. ಹೇಳಿಕೆಗಳ ಆಧಾರಗಳನ್ನು ಪರಾಮರ್ಶೆ ಮಾಡಲು ನನ್ನನ್ನೂ ಕೂಡ ಬೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಿ. ಆದರೆ ಅದನ್ನು LIVE ಮಧ್ಯಮಗಳ ಮೂಲಕ ಸಾರ್ವಜನಿಕರಿಗೆ ತೋರಿಸಿ ಸತ್ಯದ ದರ್ಶನ ಮಾಡಿಸಿ. ಚಿನ್ನಯ್ಯ ತನಿಖೆಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳನ್ನು ಮಾಧ್ಯಮಗಳಿಗೆ ಸಾಮಾಜಿಕ ಜಾಲತಾಣಗಳಿಗೆ ಕೊಡಬಾರದು ಎಂಬ ಜಾಮೀನು ಷರತ್ತು ಉಲ್ಲಂಘಿಸಿದ್ದಾರೆ. ಹೀಗಾಗಿ SIT ತಂಡದ ನ್ಯಾಯವಾದಿಗಳು ಚಿನ್ನಯ್ಯ ಜಾಮೀನು ರದ್ದತಿ ಅರ್ಜಿ ಸಲ್ಲಿಸಬೇಕು.
ನಾನು ಮತ್ತು ಹೋರಾಟಗಾರರು 200 ಕೋಟಿ ರೂಪಾಯಿ ವ್ಯವಹಾರ ಮಾಡಿರುತ್ತೇವೆ ಎಂದಿದ್ದಾರೆ. ಅಸಂಬದ್ಧ, ನಂಬಲು ಅಸಾಧ್ಯ ಹಸಿ ಸುಳ್ಳು ಹೇಳಿರುವುದು ನ್ಯಾಯ ಪರ ಹೋರಾಟಕ್ಕೆ ಮಾಡಿದ ಅಪಮಾನ. ಜನರಲ್ಲಿ ಗೊಂದಲ ಉಂಟು ಮಾಡಿ ನೈಜ ಅತ್ಯಾ*ಚಾರಿ ಕೊಲೆಗಡುಕರನ್ನು ರಕ್ಷಿಸುವ ಹುನ್ನಾರ. ಹೀಗಾಗಿ 200 ಕೋಟಿ ರೂಪಾಯಿಯ ಹೇಳಿಕೆ ಕುರಿತು ಚಿನ್ನಯ್ಯ ವಶಕ್ಕೆ ಪಡೆದು ವಿವರವಾಗಿ ತನಿಖೆ ನಡೆಸಿ. ಸತ್ಯಾ ಸತ್ಯತೆಯನ್ನು ಘನ ನ್ಯಾಯಾಲಯಕ್ಕೆ ಮತ್ತು ಸಾರ್ವಜನಿಕರಿಗೆ ತಿಳಿಸಿ. ಪ್ರಕಾಶ್ ರಾಜ್ ಗುಡ್ಡೆದ ಭೂತ ಸಿನಿಮಾ ನೋಡಿದ್ದೇನೆ, ಆಗಿನಿಂದ ಅವರು ಗೊತ್ತು. ಹೋರಾಟದ ಸಮಯದಲ್ಲಿ ಕರೆ ಮಾಡಿ ನೈತಿಕ ಬೆಂಬಲ ಕೊಟ್ಟಿರಬಹುದು. ಅದು ಬಿಟ್ಟರೆ ಸಂಪರ್ಕ ಇಲ್ಲ, ಬೇಕಾದರೆ ಅದೂ ತನಿಖೆ ಆಗಲಿ. 200 ಕೋಟಿ ಯಾರು ಕೊಟ್ಟರು ಅಂತ ಚಿನ್ನಯ್ಯ ಹೇಳಲಿ. ಹಾಗೇನಾದ್ರೂ ಇದ್ದರೆ 50-50 ಡೀಲ್, 100 ಕೋಟಿ ನನಗೆ ಸಿಕ್ಕರೆ ಬೇಡ ಅಂತೀನಾ? ಎಂದಿದ್ದಾರೆ.
ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಆರೋಪಿ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರೋ ರಿಟ್ ಅರ್ಜಿ ಸದ್ಯ ಬುರುಡೆ ಗ್ಯಾಂಗ್‌ನಲ್ಲಿ ಕಿಡಿ ಹೊತ್ತಿಸಿದೆ. ಮತ್ತೊಂದು ಕಡೆ ಎಸ್‌ಐಟಿ ಕೂಡ ತನಿಖೆ ಕೈಗೆತ್ತಿಕೊಂಡಿದ್ದು ಮತ್ತೆ ಈ ಪ್ರಖರ ಯಾರಾರ ಕೊರಳಿಗೆ ಸುತ್ತಿಕೊಳ್ಳುತ್ತೆ ಕಾದು ನೋಡಬೇಕಿದೆ.