ಧರ್ಮಸ್ಥಳದಲ್ಲಿ ಏನೂ ಸಿಗದು, ಕ್ಷೇತ್ರಕ್ಕೆ ಅಪಮಾನ ಮಾಡಿದೋರಿಗೆ ಚೌತಿ ಹಬ್ಬಕ್ಕೂ ಮುನ್ನ ಶಿಕ್ಷೆ: ಮುಸ್ಲಿಂ ಮುಖಂಡ

Published : Aug 13, 2025, 04:45 PM IST
koppala muslim leader dharmasthala

ಸಾರಾಂಶ

ಧರ್ಮಸ್ಥಳದಲ್ಲಿ ಅಸ್ಥಿಪಂಜರ ಅಗೆಯುತ್ತಿರುವ ವಿಚಾರವಾಗಿ ಕೊಪ್ಪಳದ ಮುಸ್ಲಿಂ ಮುಖಂಡ ಅಕ್ಬರ್ ಪಾಷಾ, ಒಂದು ವರ್ಷ ಅಗೆದರೂ ಒಂದು ಅಸ್ಥಿಪಂಜರವೂ ಸಿಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರಿಗೆ ಗಣೇಶ ಚತುರ್ಥಿಯೊಳಗೆ ಶಿಕ್ಷೆಯಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಬೆಳ್ತಂಗಡಿ: ಧರ್ಮಸ್ಥಳ ಭಕ್ತರ ಸಭೆಯಲ್ಲಿ ಮಾತನಾಡಿರುವ ಕೊಪ್ಪಳ ನಗರಸಭೆ ಸದಸ್ಯ ಹಾಗೂ ಮುಸ್ಲಿಂ ಮುಖಂಡ ಅಕ್ಬರ್ ಪಾಷಾ, ವಿಶೇಷ ತನಿಖಾ ತಂಡ (ಎಸ್‌ಐಟಿ) ಗೆ ಸವಾಲು ಹಾಕಿದರು. ಒಂದು ವರ್ಷ ಅಗೆದರೂ ಏನೂ ಸಿಗುವುದಿಲ್ಲ. 13 ದಿನವಲ್ಲ, 14 ದಿನ, ಒಂದು ವರ್ಷ ಅಗೆದರೂ ಒಂದು ಅಸ್ಥಿ ಪಂಜರವೂ ಸಿಗುವುದಿಲ್ಲ ಎಂದು ಪಾಷಾ ಹೇಳಿದರು. ಈ ಕೃತ್ಯ ಮಾಡಿದವರಿಗೆ ಗಣೇಶ ಚತುರ್ಥಿಯೊಳಗೆ ಶಿಕ್ಷೆ ಆಗುತ್ತದೆ. ಅವರು ಹೇಗೆ ಸಾಯುತ್ತಾರೆ ಅನ್ನೋದನ್ನು ಇಡೀ ಕರ್ನಾಟಕದ 7 ಕೋಟಿ ಜನ ನೋಡುತ್ತಾರೆ ಎಂದರು.

ಅಲ್ಲಿ ಮಂಜುನಾಥ ಸ್ವಾಮಿ ಇದ್ದಾರೆ. ಇಷ್ಟು ದಿನಗಳಲ್ಲಿ ಒಂದು ಅಸ್ಥಿ ಪಂಜರವೂ ಸಿಕ್ಕಿಲ್ಲ. ನಾನು ಒಂದು ವರ್ಷ ಸಮಯ ಕೊಡುತ್ತೇನೆ. ಒಂದು ಅಸ್ಥಿ ಪಂಜರ ಅಗೆದು ತೋರಿಸಲಿ. ಎಲ್ಲ ಕಡೆ ಊರಿನ ಹೆಸರು ಇದ್ದರೂ ಅಲ್ಲಿ ಮಾತ್ರ 'ಧರ್ಮಸ್ಥಳ' ಅಂತ ಹೆಸರಿದೆ, ಏಕೆಂದರೆ ಅಲ್ಲಿ ಮಂಜುನಾಥ ಸ್ವಾಮಿ ಇದ್ದಾರೆ. ಈ ಸ್ಥಳದಲ್ಲಿ ಇಬ್ಬರು ಮುಖ್ಯಮಂತ್ರಿ ಆಣೆ ಮಾಡಲು ಬಂದಿದ್ದರು. ಈ ಸ್ಥಳದ ಪರಂಪರೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಆದರೆ, ಈಗ ಹೇಯ ಕೃತ್ಯವಾಗಿ ಅಸ್ಥಿ ಪಂಜರ ಅಗೆಯುವ ಕೆಲಸ ನಡೆಯುತ್ತಿದೆ ಎಂದು ಅಕ್ಬರ್ ಪಾಷಾ ಹೇಳಿದ್ದಾರೆ.

ಇವತ್ತೂ ಅಲ್ಲಿ ಏನೂ ಇಲ್ಲ ಅಂತ ಮುಖ್ಯಮಂತ್ರಿ ಘೋಷಣೆ ಮಾಡಬಹುದು. ಆ ಕೃತ್ಯಕ್ಕೆ ಕಾರಣರಾದವರಿಗೆ ಮಂಜುನಾಥ ಸ್ವಾಮಿ ಶಿಕ್ಷೆ ನೀಡುತ್ತಾರೆ ಎಂದು ನಂಬಿದ್ದೇನೆ ಎಂದರು. 12ನೇ ಶತಮಾನದ ನಂತರ ಕ್ರಾಂತಿಕಾರಿ ಸ್ಥಾನವನ್ನು ಹೊಂದಿರುವುದು ಧರ್ಮಸ್ಥಳ. ಬಡವರನ್ನು ಮುಖ್ಯವಾಹಿನಿಗೆ ತರಲು ಧರ್ಮಸ್ಥಳ ಸಂಘ ಕಾರಣವಾಗಿದೆ. ನನ್ನ ಮಣ್ಣಿನ ಮನೆಯನ್ನು ಆರ್‌ಸಿಸಿ ಮನೆಯಾಗಲು ಕಾರಣವೂ ಧರ್ಮಸ್ಥಳ ಸಂಘವೇ. ಯಾವುದೇ ಆಧಾರವಿಲ್ಲದೆ ಜನರಿಗೆ ಸಾಲ ನೀಡಿರುವುದು, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘವು ಎಲ್ಲರ ಬದುಕನ್ನೂ  ಹಸನಾಗಿಸಿದೆ ಎಂದು ಹೇಳಿದರು. ಈ ಕೃತ್ಯ ಮಾಡಿದವರಿಗೆ ಗಣೇಶ ಚತುರ್ಥಿಯ ಮೊದಲು ಶಿಕ್ಷೆ ಆಗುತ್ತದೆ. ಅವರು ಹೇಗೆ ಸಾಯುತ್ತಾರೆ ಅನ್ನೋದನ್ನು 7 ಕೋಟಿಗೂ ಹೆಚ್ಚು ಜನರು ನೋಡುವರು ಎಂದು ಪಾಷಾ ತಮ್ಮ ಹೇಳಿಕೆದ್ದಾರೆ.

PREV
Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್