Bengaluru: ಪ್ರಧಾನಿ ಗಡುವು ಬೆನ್ನಲ್ಲೇ ಸಂಚಾರ ಸಮಸ್ಯೆ ಬಗ್ಗೆ ಪ್ರವೀಣ್ ಸೂದ್ ಸಭೆ

Published : Jun 29, 2022, 12:52 PM IST
Bengaluru: ಪ್ರಧಾನಿ ಗಡುವು ಬೆನ್ನಲ್ಲೇ ಸಂಚಾರ ಸಮಸ್ಯೆ ಬಗ್ಗೆ ಪ್ರವೀಣ್ ಸೂದ್ ಸಭೆ

ಸಾರಾಂಶ

ನಗರ ಸಂಚಾರ ಸಮಸ್ಯೆಗೆ ಪ್ರಧಾನ ಮಂತ್ರಿಗಳು ಆರು ತಿಂಗಳು ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸುತ್ತಿದ್ದಾರೆ.

ಬೆಂಗಳೂರು (ಜೂ.29): ನಗರ ಸಂಚಾರ ಸಮಸ್ಯೆಗೆ ಪ್ರಧಾನ ಮಂತ್ರಿಗಳು ಆರು ತಿಂಗಳು ಗಡುವು ವಿಧಿಸಿರುವ ಹಿನ್ನೆಲೆಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಡಿಜಿ & ಐಜಿಪಿ ಪ್ರವೀಣ್ ಸೂದ್ ಸಭೆ ನಡೆಸುತ್ತಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆಯುತ್ತಿದ್ದು, ನಗರ ಪೊಲೀಸ್ ಆಯುಕ್ತರು ಸೇರಿದಂತೆ 8 ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ. 

ಎಡಿಜಿಪಿ ಗುಪ್ತಚರ ಇಲಾಖೆಯ ಬಿ.ದಯಾನಂದ್,  ಎಡಿಜಿಪಿ ಆಡಳಿತ ವಿಭಾಗದ ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಎಡಿಜಿಪಿ ಕೆಎಸ್ಆರ್ಪಿ ಆರ್.ಹಿತೇಂದ್ರ, ಸಂಚಾರ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್.ರವಿಕಾಂತೇಗೌಡ, ಪಶ್ಚಿಮ ವಿಭಾಗದ ಸಂಚಾರ ಡಿಸಿಪಿ ಕುಲದೀಪ್ ಕುಮಾರ್ ಜೈನ್, ಉತ್ತರ ವಿಭಾಗದ ಸಂಚಾರ ಡಿಸಿಪಿ ಸವಿತಾ, ಹಾಗೂ ಪೂರ್ವ ವಿಭಾಗದ ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಈ ಸಭೆಯಲ್ಲಿ ಭಾಗಿಯಾಗಿದ್ದಾರೆ. 

Bengaluru News: ವಾಹನ ಸವಾರರನ್ನು ಅನಾವಶ್ಯಕ ತಡೆದು ನಿಲ್ಲಿಸದಂತೆ ಡಿಜಿ & ಐಜಿಪಿ ಸೂಚನೆ

ಪಾಲಿಕೆಗೆ ಟ್ರಾಫಿಕ್‌ ರಸ್ತೆ ಪಟ್ಟಿ: ನಗರದಲ್ಲಿ ಹೆಚ್ಚಿನ ಸಂಚಾರ ದಟ್ಟಣೆ ಇರುವ ಪ್ರದೇಶ ಹಾಗೂ 50 ರಸ್ತೆಗಳ ಕುರಿತು ಬಿಬಿಎಂಪಿಗೆ ಪಟ್ಟಿಕೊಡಲಾಗಿದೆ ಎಂದು ನಗರ ಜಂಟಿ ಪೊಲೀಸ್‌ ಆಯುಕ್ತ (ಸಂಚಾರ) ಡಾ. ಬಿ.ಆರ್‌.ರವಿಕಾಂತೇಗೌಡ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಚಾರ ದಟ್ಟಣೆ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಈಗ ವಾಹನಗಳ ಓಡಾಟಕ್ಕೆ ಅಡ್ಡಿಯಾಗಿರುವ ರಸ್ತೆಗಳ ದುರಸ್ತಿ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಿದ್ದೇವೆ ಎಂದರು.

ಮೊದಲು 50 ರಸ್ತೆಗಳನ್ನು ಆದ್ಯತೆ ಮೇರೆಗೆ ದುರಸ್ತಿ ಮಾಡುವುದಾಗಿ ಪಾಲಿಕೆಗೆ ಹೇಳಿದೆ. ಅದೇ ರೀತಿ ಸಂಚಾರ ದಟ್ಟಣೆಯ 10 ಪ್ರದೇಶಗಳನ್ನು ಸಹ ಗುರುತಿಸಲಾಗಿದೆ. ಅದರಲ್ಲಿ ಗೊರಗುಂಟೆಪಾಳ್ಯ, ಹೆಬ್ಬಾಳ, ಕೆ.ಆರ್‌.ಪುರ ಹಾಗೂ ಸಿಲ್ಕ್ ಬೋರ್ಡ್‌ಗಳಿಗೆ ಪಾಲಿಕೆ ಅಧಿಕಾರಿಗಳ ಜತೆ ಭೇಟಿ ನೀಡಿ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು.

PREV
Read more Articles on
click me!

Recommended Stories

ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌