ಚಾಮರಾಜನಗರ: ವೀಕ್ಷಣೆಗಿಲ್ಲ ಮಹದೇಶ್ವರನ 108 ಅಡಿ ಎತ್ತರದ ಪ್ರತಿಮೆ, ಮಾದಪ್ಪನ ಭಕ್ತರಿಗೆ ಭಾರೀ ನಿರಾಸೆ..!

By Girish Goudar  |  First Published Oct 3, 2023, 9:41 PM IST

ಮ್ಯೂಸಿಯಂ ಹಾಗೂ ರಸ್ತೆ ತಡೆಗೋಡೆ ನಿರ್ಮಿಸುವ ಕಾಮಗಾರಿ ವಿಳಂಬವಾಗಿ ಕಾಮಗಾರಿ ಇನ್ನೂ ಮುಗಿದಿಲ್ಲ ಹಾಗಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರತಿಮೆ ವೀಕ್ಷಣೆಗೆ ಅವಕಾಶ ಸಿಗ್ತಿಲ್ಲವೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸ್ತಾರೆ.


ವರದಿ - ಪುಟ್ಟರಾಜು. ಆರ್. ಸಿ, ಏಷಿಯಾನೆಟ್  ಸುವರ್ಣ ನ್ಯೂಸ್,  ಚಾಮರಾಜನಗರ 

ಚಾಮರಾಜನಗರ(ಅ.03):  ಅದು ಇತಿಹಾಸ ಪ್ರಸಿದ್ದ ಪುಣ್ಯ ಕ್ಷೇತ್ರ.ಆ ಪವಾಡ ಪುರುಷನಿಗೆ 108 ಅಡಿ ಪ್ರತಿಮೆ ನಿರ್ಮಿಸಲಾಗಿದೆ. ಆದ್ರೆ ಪ್ರತಿಮೆ ಲೋಕಾರ್ಪಣೆಯಾಗಿ 6 ತಿಂಗಳು ಕಳೆದರೂ ಕೂಡ ಭಕ್ತರಿಗೆ ದರ್ಶನ ಭಾಗ್ಯ ಸಾಧ್ಯವಾಗ್ತಿಲ್ಲ. ನಮಗೆ ದರ್ಶನ ಭಾಗ್ಯ ಸಿಗೋದ್ಯಾವಾಗ ಅಂತಾ ಭಕ್ತರು ಹಪಹಪಿಸುತ್ತಿದ್ದಾರೆ. ಅದ್ಯಾಕೆ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..

Tap to resize

Latest Videos

undefined

ಮಲೆ ಮಹದೇಶ್ವರ ಬೆಟ್ಟದಲ್ಲಿ ತಲೆ ಎತ್ತು ನಿಂತಿರುವ108 ಅಡಿಯ ಮಲೆ ಮಹದೇಶ್ವರ ಪ್ರತಿಮೆ.ಕಲ್ಲು ತಡೆಗೋಡೆ ಕುಸಿತ, ಭಕ್ತರಿಗಿಲ್ಲ ದರ್ಶನದ ಅವಕಾಶ. ಇದೆಲ್ಲಾ ಕಂಡುಬರೋದು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ, ಪವಾಡ ಪುರಷನ ಪುಣ್ಯಕ್ಷೇತ್ರ ಮಲೆ ಮಹದೇಶ್ವರರ 108 ಅಡಿ ಪ್ರತಿಮೆ ಬಗ್ಗೆ. ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ  2021ರ ಮಾರ್ಚನಲ್ಲೆ ಪ್ರಾರಂಭವಾಗಿದ್ದ ಪ್ರತಿಮೆ ನಿರ್ಮಾಣ ಕಾಮಗಾರಿ 2023 ಆದರೂ ಮುಗಿಯದ ಹಿನ್ನಲೆ ರಸ್ತೆ ಹಾಗು ಪ್ರತಿಮೆ ತಳಭಾಗದಲ್ಲಿ ಮ್ಯೂಸಿಯಂ ಕಾಮಗಾರಿ ಪೂರ್ಣವಾಗದಿದ್ದರು  ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಚಾಮರಾಜನಗರ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ತಮ್ಮ ಮನೆಯ ದೇವರಾದ ಮಲೆ ಮಹದೇಶ್ವರ ಪ್ರತಿಮೆಯನ್ನು ತರಾತುರಿಯಲ್ಲಿ ಮಾರ್ಚ್ 18 ರಂದು ಅಂದಿನ  ಸಿಎಂ ಬಸವರಾಜ ಬೊಮ್ಮಾಯಿ ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸಿ ಪ್ರತಿಮೆ ಲೋಕಾರ್ಪಣೆ ಮಾಡಿಸಿದರು. 

ಕುಟುಂಬ ಸಮೇತ ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಬಂದ  ನಟ ರಾಘವೇಂದ್ರ ರಾಜ್ ಕುಮಾರ್ 

ಸುಮಾರು 20 ಕೋಟಿ ವೆಚ್ಚದಲ್ಲಿ ದೀಪದ ಗಿರಿ ಒಡ್ಡು ಸಮೀಪದಲ್ಲಿ ಪ್ರತಿಮೆ ತಲೆ ಎತ್ತಿತ್ತು. ಆದ್ರೆ ಮಹದೇಶ್ವರ ಬೆಟ್ಟದಲ್ಲಿ ಸುರಿದ ಮಳೆಗೆ ಕಲ್ಲು ತಡೆಗೋಡೆ ಕುಸಿದು ಹೋಗಿತ್ತು. ಈ ವೇಳೆ ಕಳಪೆ ಕಾಮಗಾರಿಯಾಗಿದೆಂಬ ಆರೋಪ ಕೇಳಿಬಂದಿತ್ತು.ನಂತರ ಪ್ರಾಧಿಕಾರ ಮತ್ತೇ ಮಹದೇಶ್ವರ ಪ್ರತಿಮೆಯ ಜಾಗದಲ್ಲಿ ಸೂಕ್ತ ಕಾಮಗಾರಿ ನಡೆಸುವಂತೆ ಪಿಡಬ್ಲ್ಯೂ ಇಲಾಖೆಗೆ ಸೂಚಿಸಿತ್ತು. ಹೀಗಾಗಿ ಮ್ಯೂಸಿಯಂ ಹಾಗು ರಸ್ತೆ ತಡೆಗೋಡೆ ನಿರ್ಮಿಸುವ ಕಾಮಗಾರಿ ವಿಳಂಬವಾಗಿ ಕಾಮಗಾರಿ ಇನ್ನೂ ಮುಗಿದಿಲ್ಲ ಹಾಗಾಗಿ  ಮಲೆ ಮಹದೇಶ್ವರ ಬೆಟ್ಟಕ್ಕೆ ಬರುವ ಭಕ್ತರಿಗೆ ಪ್ರತಿಮೆ ವೀಕ್ಷಣೆಗೆ ಅವಕಾಶ ಸಿಗ್ತಿಲ್ಲವೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸ್ತಾರೆ.

ಇನ್ನೂ ಕೆಲವೆ ದಿನದ ಹಿಂದೆ ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಕೊಟ್ಟಿದ್ದರು.ಆ ವೇಳೆಯಾದ್ರೂ ದರ್ಶನಕ್ಕೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.ಪ್ರತಿಮೆ ದರ್ಶನ ಬಗ್ಗೆ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿಯನ್ನು ಪ್ರಶ್ನಿಸಿದ್ರೆ 20 ಕೋಟಿ ವೆಚ್ಚದಲ್ಲಿ ಪ್ರತಿಮೆ ನಿರ್ಮಿಸಲಾಗಿದೆ.ಕಲ್ಲು ತಡೆಗೋಡೆ ಕುಸಿತವಾಗಿತ್ತು.ಕಳೆದ ಮೇ ಯಲ್ಲಿ ಕಾಮಗಾರಿ ಮುಗಿಸಿಕೊಡಬೇಕೆಂಬ ಸೂಚನೆ ಕೊಟ್ಟಿದ್ವಿ,ಅದು ಸಾಧ್ಯವಾಗಿಲ್ಲ.ಡಿಸೆಂಬರ್ ನಷ್ಟರಲ್ಲಿ ಕೆಲಸ ಮುಗಿಸಿಕೊಡಬೇಕೆಂಬ ಸೂಚನೆ ಕೊಡಲಾಗಿದೆ.ಹೊಸ ವರ್ಷದರಷ್ಟರಲ್ಲಿ ಮಹದೇಶ್ವರ ಭಕ್ತರಿಗೆ ಸಿಹಿ ಸುದ್ದಿ ಸಿಗಲಿದೆ ಅಂತಾರೆ..

ಒಟ್ನಲ್ಲಿ ಮಲೆ ಮಹದೇಶ್ವರರು ಕೋಟ್ಯಂತರ ಭಕ್ತರ ಆರಾಧ್ಯ ದೈವರಾಗಿದ್ದಾರೆ.ಮಲೆ ಮಹದೇಶ್ವರ ಬೆಟ್ಟಕ್ಕೆ ಭಕ್ತರ ಕಾಷಿಕೆಯಿಂದಲೇ ಕೋಟ್ಯಂತರ ರೂಪಾಯಿ ಆದಾಯ ಬರುತ್ತೆ.ಹೊಸ ವರ್ಷದಷ್ಟರಲ್ಲಾದ್ರೂ ಅಧಿಕಾರಿಗಳು ಶೀಘ್ರ ಕಾಮಗಾರಿ ಮುಗಿಸಿ ಮಲೆ ಮಾದಪ್ಪನ 108 ಅಡಿ ಪ್ರತಿಮೆಯ ದರ್ಶನಕ್ಕೆ ಅವಕಾಶ ಮಾಡಿಕೊಡ್ತಾರಾ ಅನ್ನೋದ್ನ ಕಾದುನೋಡಬೇಕಾಗಿದೆ..

click me!