ಬಾಗಲಕೋಟೆ ಜಿಲ್ಲೆಯಲ್ಲಿ ಭಾರೀ ಮಳೆ: ಬಾದಾಮಿ ಬನಶಂಕರಿ ದೇಗುಲಕ್ಕೆ ನುಗ್ಗಿದ ನೀರು, ಭಕ್ತರ ಪರದಾಟ!

By Girish Goudar  |  First Published Oct 17, 2024, 6:13 PM IST

ಮಳೆ‌ಯ ನೀರಿನಲ್ಲೇ ಭಕ್ತರು ದೇವಸ್ಥಾನದ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಶೀಗೆ ಹುಣ್ಣಿಮೆ ನಿಮಿತ್ತ ಇಂದು ಹೆಚ್ಚಿನ ಸಂಖ್ಯೆಯ ಭಕ್ತರ ದಂಡು ಆಗಮಿಸಿತ್ತು. ಒಟ್ಟಾರೆ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಲ್ಲಲ್ಲಿ‌ ಜನಜೀವನ ಅಸ್ತವ್ಯಸ್ತಗೊಂಡಿದೆ.
 
ಬಾಗಲಕೋಟೆ(ಅ.17):  ಜಿಲ್ಲೆಯಲ್ಲಿ ಹಿಂಗಾರು ಮಳೆಯ ಆರ್ಭಟ ಮುಂದುವರೆದಿದ್ದು, ನಾಡಿನ ಶಕ್ತಿಪೀಠಗಳಲ್ಲಿ ಒಂದಾದ ಬಾದಾಮಿಯ ಬನಶಂಕರಿ ದೇವಸ್ಥಾನದ ಆವರಣಕ್ಕೂ ನೀರು ನುಗ್ಗಿದೆ. ಹೌದು, ನಿರಂತರವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ದೇವಸ್ಥಾನದ ಪ್ರಾಂಗಣದಲ್ಲಿ ನೀರು ತುಂಬಿದೆ. 

ಮಳೆ‌ಯ ನೀರಿನಲ್ಲೇ ಭಕ್ತರು ದೇವಸ್ಥಾನದ ಪ್ರದಕ್ಷಿಣೆ ಹಾಕಿ ದೇವರ ದರ್ಶನ ಪಡೆಯುತ್ತಿದ್ದಾರೆ. ಇನ್ನು ಶೀಗೆ ಹುಣ್ಣಿಮೆ ನಿಮಿತ್ತ ಇಂದು ಹೆಚ್ಚಿನ ಸಂಖ್ಯೆಯ ಭಕ್ತರ ದಂಡು ಆಗಮಿಸಿತ್ತು. ಒಟ್ಟಾರೆ ಬಾಗಲಕೋಟೆ ಜಿಲ್ಲೆಯಲ್ಲಿ ನಿರಂತರ ಮಳೆಯಿಂದ ಅಲ್ಲಲ್ಲಿ‌ ಜನಜೀವನ ಅಸ್ತವ್ಯಸ್ತಗೊಂಡಿದೆ.

Tap to resize

Latest Videos

undefined

ಮನಸೆಳೆಯುತ್ತಿರೋ ಬಾದಾಮಿ ಅಕ್ಕತಂಗಿ ಜಲಪಾತ 

ಬಾದಾಮಿಯ ಗುಹಾಂತರ ದೇವಾಲಯದ ಸಮೀಪವಿರುವ ಅಕ್ಕತಂಗಿಯರ ಜಲಪಾ ಮತ್ತೆ ಜೀವಕಳೆಯನ್ನ ಪಡೆದುಕೊಂಡಿದೆ. ಜಿಲ್ಲೆಯಲ್ಲಿ‌ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬಾದಾಮಿಯ ಗುಹಾಂತರ ದೇವಾಲಯಗಳ ಸಮುಚ್ಛಯದ ಸಮೀಪವಿರುವ ಬೆಟ್ಟದ ಮೇಲಿಂದ ಧುಮುಕುವ ನೀರು ಎಲ್ಲರನ್ನ ಕೈ ಬೀಸಿ ಕರೆಯುತ್ತಿದೆ. 

ಅಕ್ಕತಂಗಿಯರ ಜಲಪಾತವೆಂದೇ ಖ್ಯಾತಿ ಪಡೆದಿರುವ ಈ ಜಲಪಾತದಿಂದ ಹಾಲಿನ ನೊರೆಯಂತೆ ನೀರು ಧುಮ್ಮಿಕ್ಕಿ ಅಗಸ್ತ್ಯ ತೀರ್ಥಹೊಂಡಕ್ಕೆ ಬಂದು ಸೇರುತ್ತಿದೆ. ನಯನ ಮನೋಹರವಾಗಿರುವ ಈ ದೃಶ್ಯವನ್ನ ನೋಡಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ. 

click me!