ಪಾವಗಡ (ಜು.28): ತಾಲೂಕಿನ ನಾಗಲಮಡಿಕೆ ಬಳಿ ಉತ್ತರ ಪಿನಾಕಿನಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಜಲಾಗಾರವನ್ನು ಶುಚಿಗೊಳಿಸಿ ನಾಗಲಮಡಿಕೆ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನದಿ ನೀರು ಸ್ನಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ನಾಗನಮಡಿಕೆಯನ್ನು ಧಾರ್ಮಿಕ ಪ್ರವಾಸಿ ಕೇಂದ್ರವನ್ನಾಗಿಸಬೇಕು ಎಂದು ಬಹುತೇಕ ಇಲ್ಲಿನ ಸಾವಿರಾರು ಮಂದಿ ಭಕ್ತರು ಒತ್ತಾಯಿಸಿದ್ದಾರೆ.
ಆದಿ ಸುಬ್ರಹ್ಮಣ್ಯ ಎನಿಸಿರುವ ಕುಕ್ಕೆಯಲ್ಲಿ ನದಿ ಇದ್ದು ವರ್ಷಪೂರ್ತಿ ಹರಿಯುತ್ತಿರುವುದರಿಂದ ಅಲ್ಲಿಗೆ ಹೋಗುವ ಭಕ್ತರು ನದಿ ನೀರು ಸ್ನಾನ ಮಾಡಿ ದೇವರ ದರ್ಶನ ಮಾಡಿ ಪುನೀತರಾಗುತ್ತಿದ್ದಾರೆ.
ಸ್ಮಾರ್ಟ್ ಸಿಟಿ ಸ್ಪರ್ಧೆಯಲ್ಲಿ ರಾಜ್ಯದ 2 ಯೋಜನೆಗಳಿಗೆ ಪುರಸ್ಕಾರ
ಈ ಕಾರಣದಿಂದಾಗಿ ಕುಕ್ಕೆ ಕ್ಷೇತ್ರ ಜನಪ್ರಿಯಗೊಂಡಿದ್ದು ಸಾವಿರಾರು ಜನ ಭಕ್ತರನ್ನು ತನ್ನೆಡೆ ಸೆಳೆಯುತ್ತಿದೆ.
ಹೀಗಾಗಿ ನಾಗನಮಡಿಕೆಯಲ್ಲು ಅಂತಹ ಅವಕಾಶ ತಾನಾಗಿಯೇ ಬಮದಿದ್ದು ನಾಗನಮಡಿಕೆಯಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿಯೇ ಕೃಷ್ಣ ನದಿಯ ನೀರು ಉತ್ತರ ಪುನಾಕಿನಿ ನದಿಯಲ್ಲಿ ಹರಿಯುತ್ತಿರುವುದರಿಂದ ನಾಗಲಮಡಿಕೆ ಬರುವ ಭಕ್ತರಿಗೆ ನದಿಯಲ್ಲಿ ಸ್ನಾನ ಮಾಡುವಂತಹ ಭಾಗ್ಯವನ್ನು ಕಲ್ಪಿಸುವ ಮೂಲಕ ನಾಗನಮಡಿಕೆ ಸುಬ್ರಹ್ಮಣ್ಯ ಕ್ಷೇತ್ರ ಜನಪ್ರಿಯಗೊಳಿಸಬೇಕೆಂಬುದು ಭಕ್ತರ ಅಭಿಲಾಷೆಯಾಗಿದೆ.